ಬೆಂಗಳೂರು : ಕೈಗೆಟುಕುವ ದರದಲ್ಲಿ SUVಗಳ ಆಯ್ಕೆಗಳು ದೇಶದಲ್ಲಿ ಹೆಚ್ಚುತ್ತಿವೆ. ಈ ವಿಭಾಗದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ಸುಮಾರು 2 ವರ್ಷಗಳಿಂದ ಮಾರುಕಟ್ಟೆಯನ್ನು ಆಳುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಸ್ಸಾನ್ ನ ಮ್ಯಾಗ್ನೈಟ್ ಬಂಪರ್ ಮಾರಾಟದೊಂದಿಗೆ ಟಾಟಾ ಪಂಚ್ ಗೆ ಪೈಪೋಟಿ ನೀಡುತ್ತಿದೆ. ಅದರ ಜನಪ್ರಿಯತೆಗೆ ಮುಖ್ಯ ಕಾರಣವೆಂದರೆ ಅದರ ವಿಭಿನ್ನ ರೂಪಾಂತರಗಳು ಮತ್ತು ಉತ್ತಮ ವೈಶಿಷ್ಟ್ಯಗಳ ಪಟ್ಟಿ. ನಿಸ್ಸಾನ್ ಮ್ಯಾಗ್ನೈಟ್ ಅನ್ನು XE, XL, XV, ಟರ್ಬೊ, ಪ್ರೀಮಿಯಂ ಮತ್ತು ಪ್ರೀಮಿಯಂ ಟರ್ಬೊ (O) ರೂಪಾಂತರಗಳಲ್ಲಿ ನೀಡಲಾಗುತ್ತದೆ. ಅದರಲ್ಲಿ ಇತ್ತೀಚಿನದು ಗೆಜಾ ಆವೃತ್ತಿಯಾಗಿದೆ. ಇತ್ತೀಚಿನ ಅಪ್ಡೇಟ್ ಪ್ರಕಾರ ಈ SUVಯ ವೈಟಿಂಗ್ ಪೀರಿಯೇಡ್ ಕೂಡಾ ಕಡಿಮೆಯಾಗಿದೆ. ಹೌದು ಈ ಕಾರಿನ ವೈಟಿಂಗ್ ಪೀರಿಯೇಡ್ ಕೇವಲ 3 ವಾರಗಳು.  


COMMERCIAL BREAK
SCROLL TO CONTINUE READING

ಎಂಜಿನ್ ಮತ್ತು ಗೇರ್ ಬಾಕ್ಸ್ : 
ನಿಸ್ಸಾನ್ ಮ್ಯಾಗ್ನೈಟ್‌ನ ಎಂಜಿನ್ ಪವರ್‌ಟ್ರೇನ್ ನಲ್ಲಿ ಎರಡು ಆಯ್ಕೆಗಳಿವೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ನೊಂದಿಗೆ ಬರುವ ನ್ಯಾಚ್ಯುರಲಿ ಆಸ್ಪಿರೆಟೆಡ್ 999cc ಪೆಟ್ರೋಲ್ ಎಂಜಿನ್, ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ CVT ಸ್ವಯಂಚಾಲಿತ ಪ್ರಸರಣದೊಂದಿಗೆ ಸಂಯೋಜಿಸಲ್ಪಟ್ಟಿರುವ 999cc ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್.   ಈ ಕ್ಲಾಸಿ ಆಯ್ಕೆಗಳು ಗ್ರಾಹಕರಿಗೆ ಐಷಾರಾಮಿ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.


ಇದನ್ನೂ ಓದಿ : ಭಾರತದಲ್ಲಿ ಯಾವ ಕಂಪನಿಯ ಸ್ಮಾರ್ಟ್‌ಫೋನ್‌ ಹೆಚ್ಚಾಗಿ ಮಾರಾಟವಾಗುತ್ತೆ ಗೊತ್ತಾ?


ನಿಸ್ಸಾನ್ ಮ್ಯಾಗ್ನೈಟ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಇದರಲ್ಲಿ ಎರಡು ಏರ್‌ಬ್ಯಾಗ್‌ಗಳು, EBD ಮತ್ತು ABS ಸೇರಿವೆ. ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟಿಪಿಎಂಎಸ್ ಮತ್ತು ಕೀಲೆಸ್ ಎಂಟ್ರಿಯಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳಿವೆ.


ಕಾರಿನ ಮೇಲೆ ಸಿಗುತ್ತಿದೆ 72 ಸಾವಿರ ರಿಯಾಯಿತಿ : 
ನಿಸ್ಸಾನ್ ಮ್ಯಾಗ್ನೈಟ್ ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗುತ್ತಿದೆ. ಕಂಪನಿಯು ಸುಮಾರು 72,000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. SUV ಖರೀದಿಸಲು ಯೋಚಿಸುತ್ತಿದ್ದರೆ ನಿಸ್ಸಾನ್ ಮ್ಯಾಗ್ನೈಟ್ ಅತ್ಯುತ್ತಮ ಆಯ್ಕೆಯಾಗಿದೆ.  ಅಲ್ಲದೆ, ನಿಸ್ಸಾನ್ ಮ್ಯಾಗ್ನೈಟ್ ಖರೀದಿಸಲು ಇದೆ ಬೆಸ್ಟ್ ಟೈಮ್. 


ಇದನ್ನೂ ಓದಿ : ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ನಾಯ್ಸ್‌ನ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.