ವಿಶ್ವದ ಅತ್ಯಂತ ಚಿಕ್ಕ ವಿಂಡೋ ಎಸಿ: ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬಿಸಿ ಗಾಳಿ ನಿಡುವುದೇ ಇದರ ವಿಶೇಷ
Window AC: ಈ ಬೇಸಿಗೆಯಲ್ಲಿ ತಂಪಾದ ವಾತಾವರಣ ಯಾರಿಗೆ ತಾನೇ ಇಷ್ಟವಿಲ್ಲ. ಇದಕ್ಕಾಗಿ ಫ್ಯಾನ್, ಕೂಲರ್ ಗಿಂತಲೂ ಹವಾನಿಯಂತ್ರಣ (ಎಸಿ) ಹೆಚ್ಚು ಪ್ರಯೋಜನಕಾರಿ ಆಗಿದೆ. ಈ ಲೇಖನದಲ್ಲಿ ಕೈಗೆಟುಕುವ ದರದಲ್ಲಿ ಖರೀದಿಸಬಹುದಾದ ವಿಶ್ವದ ಅತಿ ಚಿಕ್ಕ ವಿಂಡೋ ಎಸಿಯ ಬಗ್ಗೆ ತಿಳಿಯೋಣ...
ComfyAir Window Air Conditioner: ಕಿಕ್ಸ್ಟಾರ್ಟರ್ ಕ್ರೌಡ್ಫಂಡಿಂಗ್ ವಿಶ್ವದ ಅತ್ಯಂತ ಚಿಕ್ಕ ವಿಂಡೋ ಎಸಿ ಆಗಿರುವ ComfyAir ವಿಂಡೋ ಎಸಿಗಾಗಿ ಅಭಿಯಾನವನ್ನು ನಡೆಸುತ್ತಿದ್ದು, ಇಲ್ಲಿಯವರೆಗೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಸುಲಭವಾಗಿ ಲಭ್ಯವಿರುವ ಈ ComfyAir ವಿಂಡೋ ಎಸಿಯ ಪ್ರಮುಖ ವಿಶೇಷತೆ ಎಂದರೆ ಇದು ಕೇವಲ ಬೇಸಿಗೆಯಲ್ಲಷ್ಟೇ ಅಲ್ಲ, ಚಳಿಗಾಲದಲ್ಲಿಯೂ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಹೌದು, ComfyAir ವಿಂಡೋ ಎಸಿ (ComfyAir Window Air Conditioner) ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನೀಡಿದರೆ, ಚಳಿಗಾಲದಲ್ಲಿ ಬಿಸಿ ಗಾಳಿಯನ್ನು ನೀಡುವ ಮೂಲಕ ನಿಮ್ಮ ಕೊಠಡಿಯ ಉಷ್ಣತೆಯನ್ನು ಸರಿದೂಗಿಸುತ್ತದೆ. ಎಂದರೆ ಈ ಎಸಿಯನ್ನು ನೀವು ವರ್ಷವಿಡೀ ಬಳಸಬಹುದಾಗಿದೆ. ಸಣ್ಣ ಕಿಟಕಿಯಲ್ಲಿ ಸುಲಭವಾಗಿ ಹೊಂದಿಕೊಳ್ಳುವ ComfyAir ವಿಂಡೋ ಎಸಿಯ ವೈಶಿಷ್ಟ್ಯಗಳೇನು? ಇದರ ಬೆಲೆ ಎಷ್ಟು ಎಂದು ತಿಳಿಯೋಣ...
ComfyAir ವಿಂಡೋ ಎಸಿ ವೈಶಿಷ್ಟ್ಯಗಳು:
ComfyAir ವಿಂಡೋ ಎಸಿಯನ್ನು (Window AC) ಅಡುಗೆಮನೆ, ಬೆಡ್ ರೂಂಗಳಿಗೆ ಹೊಂದಿಕೆಯಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಣ್ಣ ಕಿಟಕಿಯಲ್ಲೂ ಸುಲಭವಾಗಿ ಅಳವಡಿಸಬಹುದು. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ನಿಮ್ಮ ಕಿಟಕಿ ನೇರವಾಗಿದ್ದರೂ, ಇಲ್ಲವೇ ಓರೆಯಾಗಿದ್ದರೂ ಇದನ್ನು ಸುಲಭವಾಗಿ ಅಳವಡಿಸಬಹುದು. ಇದರಲ್ಲಿ ಉಷ್ಣಾಂಶವನ್ನು 16 ° C ನಿಂದ 30 ° C ವರೆಗೆ ಹೆಚ್ಚಿಸಬಹುದು.
ಇದನ್ನೂ ಓದಿ- ಗೂಗಲ್ ಚಾಟ್ನಲ್ಲಿ ವಾಟ್ಸಾಪ್ನಂತಹ ವೈಶಿಷ್ಟ್ಯ! ಏನಿದರ ಪ್ರಯೋಜನ
ಈ ComfyAir ವಿಂಡೋ ಎಸಿ ಮೂರು ಮಾದರಿಗಳಲ್ಲಿ ಲಭ್ಯವಿದೆ. ಈ ಪುಟ್ಟ ಎಸಿಯನ್ನು ರಿಮೋಟ್ ಅಥವಾ ಬಿಲ್ಟ್ ಇನ್ ಬಟನ್ ಮೂಲಕ ಸುಲಭವಾಗಿ ನಿಯಂತ್ರಿಸಬಹುದಾಗಿದ್ದು, ಇದು ಮೂರು ಬಿಟಿಯು ಸಾಮರ್ಥ್ಯಗಳಲ್ಲಿ ಲಭ್ಯವಿರಲಿದೆ.
ಏನಿದು ಬಿಟಿಯು?
ಭಾರತದಲ್ಲಿ ಎಸಿಯನ್ನು ಅಳೆಯಲು ಟನ್ ಗಳನ್ನು ಬಳಸಲಾಗುತ್ತದೆ. 1 ಟನ್, 1.5 ಟನ್, 2 ಟನ್ ಹೀಗೆ... ಇದೆ ರೀತಿ ಬ್ರಿಟನ್ನಲ್ಲಿ ಬಿಟಿಯು (ಒಂದು ಟನ್ ಎಂದರೆ 12000 BTU)ವನ್ನು ಬಳಸಲಾಗುತ್ತದೆ. ಇದರ ಅರ್ಥ ಬ್ರಿಟಿಷ್ ಥರ್ಮಲ್ ಯುನಿಟ್ ಆಗಿರಲಿದೆ.
ComfyAir ವಿಂಡೋ ಎಸಿ ComfyAir 3000, ComfyAir 6000 ಮತ್ತು ComfyAir 9000 ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಅರ್ಥಾತ್, ಈ ಎಸಿ ಒಂದು ಟನ್ಗಿಂತ ಕಡಿಮೆ ಇರಲಿದೆ. ಆದಾಗ್ಯೂ, ComfyAir 3000 880W ಕೂಲಿಂಗ್ ಮತ್ತು 600W ತಾಪನ ಶಕ್ತಿಯನ್ನು ಹೊಂದಿದೆ. ಇದೇ ವೇಳೆ, ComfyAir 6000 1,758W ಕೂಲಿಂಗ್ ಮತ್ತು 1,500W ತಾಪನ ಶಕ್ತಿಯನ್ನು ಹೊಂದಿದ್ದರೆ, ComfyAir 9000 2,637W ಕೂಲಿಂಗ್ ಮತ್ತು 1,500W ತಾಪನ ಶಕ್ತಿಯನ್ನು ಹೊಂದಿದೆ.
ಇದನ್ನೂ ಓದಿ- ಒಂದು ರೂಪಾಯಿ ಖರ್ಚು ಮಾಡದೆ AC ಕ್ಲೀನ್ ಮಾಡಬಹುದು! ಸುಲಭವಾದ ಹಂತಗಳು ಇಲ್ಲಿವೆ
ComfyAir ವಿಂಡೋ ಎಸಿಯ ಬೆಲೆ:
ComfyAir ವಿಂಡೋ ಎಸಿ ಕೈಗೆಟುಕುವ ದರದಲ್ಲಿ ಲಭ್ಯವಿದೆ. ComfyAir 3000 ವಿಂಡೋ AC ಬೆಲೆ 199 ಡಾಲರ್ (16 ಸಾವಿರ ರೂಪಾಯಿ). ComfyAir 6000 ಮತ್ತು 9000 ಮಾದರಿಗಳ ಬೆಲೆ US$229 (18,732ರೂ.) ಮತ್ತು US$249 (20,368ರೂ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.