BSNL Prepaid Plan: ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್‌, ವಿಐಗೆ ಭಾರೀ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ಜಬರ್ದಸ್ತ್ ಯೋಜನೆಯನ್ನು ಪ್ರಾರಂಭಿಸಿದೆ. ಐದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಪ್ಲಾನ್ ಬೆಲೆ 400 ರೂ. ಗಳಿಗಿಂತಲೂ ಕಡಿಮೆ ಎಂಬುದು ಗಮನಾರ್ಹ ವಿಷಯವಾಗಿದೆ. 


COMMERCIAL BREAK
SCROLL TO CONTINUE READING

₹400ಕ್ಕಿಂತಲೂ ಕಡಿಮೆ ಬೆಲೆಯ ಬಿ‌ಎಸ್‌ಎನ್‌ಎಲ್  ಪ್ಲಾನ್ (BSNL plan for less than ₹400): 
150 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯ ಬೆಲೆ (BSNL Plan Price) ₹ 397. ಇದರಲ್ಲಿ 4ಜಿ ಡೇಟಾ ಮತ್ತು ಅನಿಯಮಿತ ಕರೆ  ಸೌಲಭ್ಯಗಳು ಲಭ್ಯವಿವೆ. ಜಿಯೋ (Jio) ಅಥವಾ ಏರ್‌ಟೆಲ್‌ನಿಂದ  (Airtel) ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವವರಿಗೆ ಬಿ‌ಎಸ್‌ಎನ್‌ಎಲ್ ನ ಈ ಪ್ಲಾನ್ ತುಂಬಾ ಎಂದು ಸಾಬೀತುಪಡಿಸಲಿದೆ. 


ಇದನ್ನೂ ಓದಿ- Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿ


ಸೆಕೆಂಡರಿ ಸಿಮ್ ಬಳಕೆದಾರರಿಗಾಗಿ ವಿನ್ಯಾಸ: 
ಲಭ್ಯವಿರುವ ಮಾಹಿತಿಯ ಪ್ರಕಾರ, ಬಿ‌ಎಸ್‌ಎನ್‌ಎಲ್ ₹ 397 ರಿಚಾರ್ಜ್ ಯೋಜನೆಯಲ್ಲಿ ವಿಶೇಷವಾಗಿ ಸೆಕೆಂಡರಿ ಸಿಮ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. 


ಇದನ್ನೂ ಓದಿ- ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ


ಬಿ‌ಎಸ್‌ಎನ್‌ಎಲ್ ₹ 397 ರಿಚಾರ್ಜ್ ಯೋಜನೆಯ ಪ್ರಯೋಜನಗಳು (Benefits of BSNL ₹ 397 Recharge Plan): 
* ಮೊದಲ 30 ದಿನಗಳು ಎಂದರೆ ಮೊದಲ ಒಂದು ತಿಂಗಳು ಯಾವುದೇ ಸಂಖ್ಯೆಗೆ ಅನಿಯಮಿತ ಉಚಿತ ಕರೆ ಸೌಲಭ್ಯ. 
* ಆದಾಗ್ಯೂ, 150 ದಿನಗಳವರೆಗೆ ರಿಚಾರ್ಜ್ ಮಾಡದೆಯೂ ಇನ್ಕಮಿಂಗ್ ಕಾಲ್ ಉಚಿತವಾಗಿರುತ್ತದೆ. 
* ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯಲ್ಲಿ ಮೊದಲ ತಿಂಗಳು ನಿತ್ಯ 2ಜಿಬಿ  4G ಡೇಟಾ ಲಭ್ಯವಿರುತ್ತದೆ. ಇನ್ನುಳಿದ 120 ದಿನಗಳವರೆಗೆ  40 kbps ವೇಗದಲ್ಲಿ ಅನಿಯಮಿತ ಡೇಟಾ ಲಭ್ಯವಾಗಲಿದೆ.  
* ಇದಲ್ಲದೆ, ಈ ಯೋಜನೆಯಲ್ಲಿ ಮೊದಲ 30 ದಿನಗಳಲ್ಲಿ  ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನವೂ ಸಿಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.