Corona Patients Are Under Diabetes Risk: ಕರೋನಾದಿಂದ, ರೋಗಿಗಳ ದೇಹದಲ್ಲಿ ಅನೇಕ ರೀತಿಯ ಪರಿಣಾಮಗಳು ಕಂಡುಬಂದಿವೆ, ಕೆಲವು ತೀವ್ರತರ ಪರಿಣಾಮಗಳಾದರೆ, ಕೆಲವು ಸೌಮ್ಯ ಪರಿಣಾಮಗಳಾಗಿವೆ. ಆದರೆ ಕೊರೊನಾ ರೋಗಿಗಳು ಸ್ವಲ್ಪ ಸಮಯದ ನಂತರ ಮಧುಮೇಹಕ್ಕೆ ಗುರಿಯಾಗುತ್ತಾರೆಯೇ? ಎಂಬುದು ಸದ್ಯ ಉದ್ಭವಿಸಿರುವ ಪ್ರಶ್ನೆ, ಏಕೆಂದರೆ ಕರೋನಾದಿಂದಾಗಿ ಮಧುಮೇಹ ಪ್ರಕರಣಗಳಲ್ಲಿ ಶೇಕಡಾ 3-5 ರಷ್ಟು ಹೆಚ್ಚಳವಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಇದರರ್ಥ ಕರೋನಾ ಸೋಂಕಿತ ಪ್ರತಿ 20 ಜನರಲ್ಲಿ ಒಬ್ಬರಿಗೆ ಮಧುಮೇಹ ಉಂಟಾಗಿದೆ ಎಂದರ್ಥ.


COMMERCIAL BREAK
SCROLL TO CONTINUE READING

ಕೆಲವು ಸಂಶೋಧನೆಗಳು ಕರೋನಾ ರೋಗಿಗಳಲ್ಲಿನ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಇದು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಸೂಚಿಸಿವೆ. ಅಲ್ಲದೆ, ಈ ಕಾಯಿಲೆಗೆ ಒಳಗಾಗುವ ಕೆಲವರಿಗೆ ನಂತರದಲ್ಲಿ ಮಧುಮೇಹ ಬರಬಹುದು ಎಂದಿವೆ. ಆದಾಗ್ಯೂ, ಇದು ಸಾಮಾನ್ಯವಾಗಿ ಈಗಾಗಲೇ ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯದಲ್ಲಿರುವ ಜನರಿಗೆ ಅದು ಸಂಭವಿಸುತ್ತದೆ ಎಂದೂ ಕೂಡ ಹೇಳಲಾಗಿದೆ. ಕರೋನಾ ಮತ್ತು ಮಧುಮೇಹದ ನಡುವಿನ ಸಂಬಂಧದ ಅಧ್ಯಯನವು ಇನ್ನೂ ನಡೆಯುತ್ತಿದೆ ಮತ್ತು ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.


ಇದನ್ನೂ ಓದಿ-Twitter ಮೇಲೆ ಉಚಿತವಾಗಿ ಸಿಗುತ್ತಿದೆ ಬ್ಲ್ಯೂ ಟಿಕ್, ಮೃತ ವ್ಯಕ್ತಿಗಳ ಹೆಸರಿನ ಮುಂದೆಯೂ ಬಂತು ಚೆಕ್ ಮಾರ್ಕ್


ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ
ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನವೇದ್ ಜಂಜುವಾ ಅವರು ಕರೋನಾ ಸೋಂಕು ದೇಹದ ಇತರ ಭಾಗಗಳಿಗೆ ಹಾನಿ ಉಂಟು ಮಾಡುತ್ತದೆ ಎಂದಿದೆ, ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.  ಕರೋನಾದಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಹೆಚ್ಚಾಗುತ್ತದೆ. JAMA ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಸಂಶೋಧನೆಯು ಪುರುಷರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಸೂಚಿಸುತ್ತದೆ.


ಇದನ್ನೂ ಓದಿ-Inverter Led Bulb Price: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಟೆನ್ಷನ್ ನಿಂದ ಮುಕ್ತರಾಗಿ, ವಿದ್ಯುತ್ ಇಲ್ಲದೆಯೇ ಮನೆಯಲ್ಲಿ ಈ ರೀತಿ ಬೆಳಕು ಬೆಳಗಿ!


ಶೇ. 17 ರಷ್ಟು ಮಧುಮೇಹ ಬರುವ ಸಾಧ್ಯತೆ ಹೆಚ್ಚು
ಈ ಸಂಶೋಧನೆಗಾಗಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು 6,29,935 ಜನರ ದಾಖಲೆಗಳನ್ನು ಪರಿಶೀಲಿಸಿದೆ ಮತ್ತು ಕರೋನವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡಿದವರು ಒಂದು ವರ್ಷದೊಳಗೆ ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇ. 17 ರಷ್ಟು ಹೆಚ್ಚಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಸೋಂಕಿಲ್ಲದ ಜನರಿಗಿಂತ ಪುರುಷರು ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇ. 22 ರಷ್ಟು ಹೆಚ್ಚು ಎಂದು ಈ ಸಂಶೋಧನೆ ಹೇಳಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.