ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಆಪ್ ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ.! ಅಪಾಯ ತಪ್ಪಿದ್ದಲ್ಲ
Google Play Store App Warning:ಒಂದುವೇಳೆ ನಿಮ್ಮ ಮೊಬೈಲ್ ನಲ್ಲಿಯೂ ಈ ಅಪ್ಲಿಕೇಶನ್ ಗಳಿದ್ದರೆ ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಅಪಾಯ ಕಾದಿದೆ ಎಂದೇ ಅರ್ಥ.
Google Play Store App Warning : ಕೆಲವರಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಪ್ ಗಳನ್ನು ಹಿಂದೆ ಮುಂದೆ ನೋಡದೆ ಡೌನ್‌ಲೋಡ್ ಮಾಡುವ ಅಭ್ಯಾಸವಿರುತ್ತದೆ. ಆದರೆ ಇದು ಅಪಾಯವನ್ನು ತಂದೊಡ್ಡಬಹುದು. Google Play Store ಕೆಲವು ಅಪ್ಲಿಕೇಶನ್‌ಗಳು ಅಪಾಯಕಾರಿ ಎಂದು ಹೇಳಿದೆ. ಈ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಒಂದುವೇಳೆ ನಿಮ್ಮ ಮೊಬೈಲ್ ನಲ್ಲಿಯೂ ಈ ಅಪ್ಲಿಕೇಶನ್ ಗಳಿದ್ದರೆ ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಅಪಾಯ ಕಾದಿದೆ ಎಂದೇ ಅರ್ಥ.
ಈ ಅಪ್ಲಿಕೇಶನ್‌ಗಳು ಯಾವುವು ಮತ್ತು ಅದು ಏಕೆ ಅಪಾಯಕಾರಿ ? :
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಈ ಆಪ್ ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಇಲ್ಲವಾದಲ್ಲಿ ಮತ್ತೆ ಬ್ಯಾಂಕ್ ಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಬಹುದು. ಈ app ಗಳನ್ನೂ ನಿಮ್ಮ ಮೊಬೈಲ್ ನಿಂದ ಡಿಲೀಟ್ ಮಾಡಿದ ನಂತರವೇ ನಿಟ್ಟುಸಿರು ಬಿಡುವುದು ಒಳಿತು.
ಇದನ್ನೂ ಓದಿ : ಸಿಮ್ ಕಾರ್ಡ್ ನಲ್ಲಿ ಸಣ್ಣದೊಂದು ಸೆಟ್ಟಿಂಗ್ ಮಾಡಿದರೆ ಸೂಪರ್ ಸ್ಪೀಡ್ ನಲ್ಲಿರುತ್ತದೆ ಇಂಟರ್ನೆಟ್
ಬ್ಲೂಟೂತ್ ಆಟೋ ಕನೆಕ್ಟ್, ಬ್ಲೂಟೂತ್ ಅಪ್ಲಿಕೇಶನ್ ಸೆಂಡರ್, ಡ್ರೈವರ್ : ಬ್ಲೂಟೂತ್, ವೈ-ಫೈ, ಯುಎಸ್‌ಬಿ, ಮೊಬೈಲ್ ಟ್ರಾನ್ಸ್ಫರ್, ಸ್ಮಾರ್ಟ್ ಸ್ವಿಚ್ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುವುದಿಲ್ಲ. ಈ app ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ, ನಿಮ್ಮ ಮೊಬೈಲ್ ಅಪಾಯದಲ್ಲಿದೆ ಎಂದೇ ಅರ್ಥ. ಈ ಹಿನ್ನೆಲೆಯಲ್ಲಿ ಈ appಗಳು ನಿಮ್ಮ ಫೋನ್ ನಲ್ಲಿದ್ದರೆ ತಕ್ಷಣ ಅದನ್ನು ಅಳಿಸಿ ಬಿಡಿ.
ಇದನ್ನೂ ಓದಿ : Smartphone Blast: ಸ್ಮಾರ್ಟ್‌ಫೋನ್ ಅನ್ನು ಮಿಸ್ ಆಗಿ ಈ ರೀತಿ ಬಳಸಿದರೂ ಬಾಂಬ್‌ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.