ಬೆಂಗಳೂರು: ಭಾನುವಾರದಂದು (ಫೆಬ್ರವರಿ 18, 2024), ಸಾರ್ವಜನಿಕರಿಗೆ ಸುರಕ್ಷಿತ, ಸುಭದ್ರ ಸಂಚಾರ ಸೇವೆಯೊಡನೆ, ಸುಸ್ಥಿರ ರೈಲ್ವೇ ಪರಿಹಾರಗಳನ್ನು ಒದಗಿಸುವ ಮುಂಚೂಣಿ ಸಮಗ್ರ ರೈಲ್ವೇ ಉದ್ಯಮ ಸಂಸ್ಥೆಯಾದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಮನೋಜ್ ಕುಮಾರ್ ಕೃಷ್ಣಪ್ಪ ಅವರು ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್‌ನ ನಿರ್ದೇಶಕ ಡಾ ಪ್ರಕಾಶಪ್ಪ ಟಿ ಎಚ್ ಅವರಿಗೆ ಫೋರ್ಸ್ ಆಂಬ್ಯುಲೆನ್ಸ್‌ನ ಕೀಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು.


COMMERCIAL BREAK
SCROLL TO CONTINUE READING

ಈ ಸಾರ್ವಜನಿಕ ಸೇವೆಯ ಆಂಬ್ಯುಲೆನ್ಸ್ ಕೊಡುಗೆ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR), 2023-2024ರ ಭಾಗವಾಗಿದೆ. ಇದರೊಡನೆ, ಫೆಬ್ರವರಿ 12-18 ರವರೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ 2024 ಎಟಿಪಿ ಚಾಲೆಂಜರ್ ಟೂರ್‌ನ ಮುಖ್ಯ ಅಂಶವಾಗಿದ್ದ, ವೃತ್ತಿಪರ ಹಾರ್ಡ್-ಕೋರ್ಟ್ ಟೆನಿಸ್ ಪಂದ್ಯಾವಳಿಯ ಏಳನೇ ಆವೃತ್ತಿಯಾದ 2024 ಬೆಂಗಳೂರು ಓಪನ್‌ಗೆ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿದ್ದರು. 


ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು, ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ, ಭಾರತದ ಡೇವಿಸ್ ಕಪ್ ತಂಡದ ಮಾಜಿ ತರಬೇತುದಾರರಾದ ಸುನಿಲ್ ಯಜಮಾನ್, ಕ್ರೀಡಾ ಗಾಯ ಮತ್ತು ಆರ್ತ್ರೋಸ್ಕೊಪಿ ವಿಭಾಗದ ಮುಖ್ಯಸ್ಥರು ಮತ್ತು ಭಾರತ ಡೇವಿಸ್ ಕಪ್ ತಂಡದ ವೈದ್ಯರಾಗಿದ್ದ ಡಾ. ಮದನ್ ಬಲ್ಲಾಳ್ ಸೇರಿದಂತೆ ವಿವಿಧ ವಲಯಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಬೆಂಗಳೂರಿನ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಮತ್ತು ಪರಿಹಾರ ಸೇವೆಗಳನ್ನು ಒದಗಿಸಲು ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಸುಗಮವಾಗಿ ಆಸ್ಪತ್ರೆಗೆ ಕರೆದೊಯ್ಯಲು, ಮತ್ತು ವಿವಿಧ ಮಾನವೀಯ ಸೇವೆಗಳನ್ನು ಒದಗಿಸಲು ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಸಂಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ಫೋರ್ಸ್ ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ. ಅದರೊಡನೆ, ಬೆಂಗಳೂರಿನಲ್ಲಿ ನಡೆಯುವ ವಿವಿಧ ಪಂದ್ಯಾವಳಿಗಳಲ್ಲಿ ಕ್ರೀಡಾಪಟುಗಳಿಗೆ ಅವಶ್ಯಕ ನೆರವು ಒದಗಿಸಲು ಈ ಆಂಬ್ಯುಲೆನ್ಸ್ ಆಸ್ಪತ್ರೆಗೆ ಸಹಾಯ ಮಾಡುತ್ತದೆ. ರೋಗಿಗಳಿಗೆ ಆರಾಮದಾಯಕ ವ್ಯವಸ್ಥೆಗಾಗಿ ಈ ಫೋರ್ಸ್ ಆಂಬ್ಯುಲೆನ್ಸ್ ರೋಗಿ ಮತ್ತು ನಾಲ್ವರಿಗೆ ಆಸನ ವ್ಯವಸ್ಥೆಯನ್ನು ಹೊಂದಿದೆ. ಈ ವಾಹನ ಸಂಪೂರ್ಣ ಆಮ್ಲಜನಕ ಮತ್ತು ಭಾಗಶಃ ಐಸಿಯು ಸೌಲಭ್ಯಗಳನ್ನೂ ಹೊಂದಿದೆ.


ಈ ಆಂಬ್ಯುಲೆನ್ಸ್ ವಾಹನವನ್ನು ಒದಗಿಸಿದ್ದಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಡಾ.ಪ್ರಕಾಶಪ್ಪ ಟಿ ಹೆಚ್ ಅವರು ಮಾತನಾಡುತ್ತಾ, “ಹಿಟಾಚಿ ರೈಲ್ ಎಸ್‌ಟಿಎಸ್ ನಮಗೆ ನೀಡಿದ ಬೆಂಬಲಕ್ಕಾಗಿ ನಾವು ಬಹಳ ಸಂತೋಷಪಡುತ್ತೇವೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ಜನರಿಗೆ ಉತ್ತಮ ಸೇವೆಗಳನ್ನು ನೀಡಲು ಈ ಆಂಬ್ಯುಲೆನ್ಸ್ ನಮಗೆ ಸಹಾಯ ಮಾಡುತ್ತದೆ" ಎಂದರು.


ಸಂಸ್ಥೆಯ ನಿರ್ದೇಶಕರಾದ ಮನೋಜ್ ಕುಮಾರ್ ಅವರು ಮಾತನಾಡಿ, “ಸಮಾಜಕ್ಕಾಗಿ ಮತ್ತು ಬಡವರಿಗಾಗಿ ಮಹತ್ತರವಾದ ಮಾನವೀಯ ಕಾರ್ಯಗಳನ್ನು ನಡೆಸುವ ಸಂಜಯ್ ಗಾಂಧಿ ಆಸ್ಪತ್ರೆಯೊಂದಿಗೆ ಸಹಯೋಗ ಹೊಂದುವುದು ನಮಗೂ ಅತ್ಯಂತ ಸಂತಸದ ವಿಚಾರವಾಗಿದೆ. ತುರ್ತು ವೈದ್ಯಕೀಯ ಆರೈಕೆ ಮತ್ತು ಕ್ರೀಡೆಗೆ ಸಂಬಂಧಿಸಿದ ಗಾಯಗಳಿಗೆ ತಕ್ಷಣದ ಚಿಕಿತ್ಸೆಯ ಅಗತ್ಯವಿರುವ ಬೆಂಗಳೂರಿನ ಜನರಿಗೆ ನೆರವಾಗುವಂತೆ ಈ ಉಡುಗೊರೆಯನ್ನು ಹಂಚಿಕೊಳ್ಳುವುದು ನಮಗೆ ವಿಶೇಷ ಅನುಭವವಾಗಿದೆ" ಎಂದರು.


ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ (SGITO) ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಸುಂದರವಾದ ಆವರಣದಲ್ಲಿರುವ, ಅತ್ಯಂತ ವಿಶಾಲವಾದ ವಿಶೇಷ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದೆ.


ಬಡವರು ಮತ್ತು ನಿರ್ಗತಿಕರಿಗೆ ನೆರವು ನೀಡುವ ಸಲುವಾಗಿ 1984ರಲ್ಲಿ ಕರ್ನಾಟಕ ಸರ್ಕಾರ ಈ ಸಂಸ್ಥೆಯನ್ನು ಆರಂಭಿಸಿತು. ಈ ಸಂಸ್ಥೆ ಶೀಘ್ರದಲ್ಲೇ ಅತ್ಯಾಧುನಿಕ ಕ್ರೀಡಾ ಗಾಯ ಕೇಂದ್ರವನ್ನು (ಸ್ಪೋರ್ಟ್ಸ್ ಇಂಜುರಿ ಸೆಂಟರ್) ತೆರೆಯಲಿದ್ದು, ಈ ವ್ಯವಸ್ಥೆ ಹೊಂದಿರುವ ಬೆಂಗಳೂರಿನ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಲಿದೆ.


ಈ ಸಂಸ್ಥೆಯು ಆರ್ತ್ರೋಸ್ಕೊಪಿ, ಆರ್ತ್ರೋಪ್ಲ್ಯಾಸ್ಟಿ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಫೇಸ್-ಮ್ಯಾಕ್ಸಿಲ್ಲರಿ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ನರಶಸ್ತ್ರಚಿಕಿತ್ಸೆ ಮತ್ತು ಮೂತ್ರಶಾಸ್ತ್ರದಂತಹ ವಿವಿಧ ವಿಭಾಗಗಳನ್ನು ಹೊಂದಿದೆ. ಜೊತೆಗೆ ಸಮಗ್ರ ಮತ್ತು ಆಧುನಿಕ ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರಕ್ಕೆ (ರೇಡಿಯಾಲಜಿ) ಸಂಬಂಧಿಸಿದಂತೆ ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುತ್ತದೆ.


ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ವಿಶೇಷವಾದ ಆಘಾತ ಮತ್ತು ಮೂಳೆಚಿಕಿತ್ಸೆಯ ಸಂಸ್ಥೆಯಾಗಿದ್ದು, ಶಸ್ತ್ರಚಿಕಿತ್ಸೆ, ಅತ್ಯುತ್ತಮವಾದ ಶಸ್ತ್ರಚಿಕಿತ್ಸಾ ನಂತರದ ಆರೈಕೆ ಮತ್ತು ಪುನರ್ವಸತಿ ಸೇವೆ ಹೊಂದಿದ್ದು, ಈ ಕ್ಷೇತ್ರದಲ್ಲಿನ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಪ್ರಮುಖ ಆಘಾತ ಮತ್ತು ಎಲುಬಿನ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಒಂದಾಗಿರುವ ಸಂಸ್ಥೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆಘಾತ ಮತ್ತು ಮೂಳೆಚಿಕಿತ್ಸೆಯನ್ನು ಒದಗಿಸುತ್ತದೆ. ಸಂಸ್ಥೆ ರೋಗಿಗಳು ಆರೋಗ್ಯ ಹೊಂದುವ, ಕ್ಷಿಪ್ರವಾಗಿ ಚೇತರಿಸಿಕೊಳ್ಳುವ, ಚಲಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿಸಿದೆ.


ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ: 
ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹಿಂದೆ ಅನ್ಸಾಲ್ಡೊ ಎಸ್‌ಟಿಎಸ್ ಎಂದು ಕರೆಯಲಾಗುತ್ತಿತ್ತು) ಒಂದು ಜಾಗತಿಕ ಕಂಪನಿಯಾಗಿದ್ದು, ಕಳೆದ ಹಲವು ದಶಕಗಳಿಂದ ರೈಲ್ವೆ ಉತ್ಪನ್ನಗಳು ಮತ್ತು ಪರಿಹಾರಗಳನ್ನು ತನ್ನ ಪ್ರಮುಖ ವ್ಯವಹಾರವಾಗಿ ಹೊಂದಿದೆ. ಈ ಉತ್ಪನ್ನಗಳಲ್ಲಿ, ಮೆಟ್ರೋ, ಸಾರ್ವಜನಿಕ ಮತ್ತು ಹೈ ಸ್ಪೀಡ್ ರೋಲಿಂಗ್ ಸ್ಟಾಕ್‌ಗಳಿಗೆ ಒದಗಿಸುವ ತಜ್ಞ ಟ್ರಾಫಿಕ್ ನಿರ್ವಹಣೆ, ಎಳೆತ ಮತ್ತು ಸಿಗ್ನಲಿಂಗ್ ಪರಿಹಾರಗಳು ಸೇರಿವೆ. ಭಾರತದಲ್ಲಿ, ಸಂಸ್ಥೆಯು 1,203ಕ್ಕೂ ಹೆಚ್ಚು ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಅತ್ಯಾಧುನಿಕ  ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಪರಿಹಾರಗಳನ್ನು ಒದಗಿಸಿದೆ.


ಮೆಟ್ರೋ ವಿಭಾಗದಲ್ಲಿ, ಸಂಸ್ಥೆ ಹಲವಾರು ನಂಬಿಕಾರ್ಹ, ಅತ್ಯಾಧುನಿಕ ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಜಾಗತಿಕವಾಗಿ ಒದಗಿಸಿದ್ದು, ಇದರಲ್ಲಿ ಭಾರತದ ನೋಯ್ಡಾ-ಗ್ರೇಟರ್ ನೋಯ್ಡಾ ಮೆಟ್ರೋ ಪ್ರಾಜೆಕ್ಟ್, ಕೋಲ್ಕತ್ತಾ ಮೆಟ್ರೋ ಇ-ಡಬ್ಲ್ಯೂ ಕಾರಿಡಾರ್ ಪ್ರಾಜೆಕ್ಟ್, ನವಿ ಮುಂಬೈ ಮೆಟ್ರೋ ಪ್ರಾಜೆಕ್ಟ್ ಮತ್ತು ಇತ್ತೀಚೆಗೆ ಪಡೆದುಕೊಂಡ ಚೆನ್ನೈ ಮೆಟ್ರೋ ರೈಲ್ ಯೋಜನೆಗಳು ಸೇರಿವೆ.


ಕಂಪನಿಯು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕಾಳಜಿ ಹೊಂದಿರುವ ಮುಂಚೂಣಿ ಸಂಸ್ಥೆಯಾಗಿದ್ದು, ತನ್ನದೇ ಆದ ವಿಭಿನ್ನ ಪರಂಪರೆಯನ್ನು ಹೊಂದಿದೆ. ಹಿಟಾಚಿ ರೈಲ್ ಎಸ್‌ಟಿಎಸ್ ತನ್ನ ಸಂಪೂರ್ಣ ಮೌಲ್ಯ ಸರಪಳಿ ವ್ಯಾಪ್ತಿಯಲ್ಲಿ 2050ನ್ನು ತನ್ನ 'ಶೂನ್ಯ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ವರ್ಷ' ಎಂದು ಪರಿಗಣಿಸಿರುವ ಹಲವು ಸಂಸ್ಥೆಗಳಲ್ಲಿ ಒಂದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.