Disney + Hotstar Gift To Cricket Fans: ನೀವೂ ಕೂಡ ಕ್ರಿಕೆಟ್ ಅಭಿಮಾನಿಗಳಾಗಿದ್ದು ಮತ್ತು ಐಸಿಸಿ ವಿಶ್ವಕಪ್ 2023 ಮತ್ತು ಏಷ್ಯಾ ಕಪ್‌ನ ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಲು ಬಯಸುತ್ತಿಲ್ಲ ಎಂದಾದಲ್ಲಿ, ಉದ್ವೇಗಕ್ಕೆ ಒಳಗಾಗಬೇಡಿ. ನೀವು ಐಸಿಸಿ ವಿಶ್ವಕಪ್ 2023 ಮತ್ತು ಏಷ್ಯಾ ಕಪ್ ಪಂದ್ಯಗಳನ್ನು ನಿಮ್ಮ ಮೊಬೈಲ್‌ನಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ವೀಕ್ಷಿಸಬಹುದು ಮತ್ತು ಅದು ಕೂಡ ಸಂಪೂರ್ಣ ಉಚಿತವಾಗಿ. ಹೌದು, ವಾಸ್ತವದಲ್ಲಿ Disney + Hotstar ಈ ಮುಂಬರುವ ದೊಡ್ಡ ಪಂದ್ಯಾವಳಿಗಳ ಲೈವ್ ಸ್ಟ್ರೀಮಿಂಗ್ ನಡೆಸಲಿದೆ ಮತ್ತು ಮೊಬೈಲ್ ಬಳಕೆದಾರರು ಅವುಗಳನ್ನು ಉಚಿತವಾಗಿ ವೀಕ್ಷಿಸಬಹುದು.

COMMERCIAL BREAK
SCROLL TO CONTINUE READING

JioCinema ಗೆ ತೀವ್ರ ಪೈಪೋಟಿ
JioCinema ಜೊತೆ ಸ್ಪರ್ಧಿಸಲು, Disney + Hotstar ಶುಕ್ರವಾರ ಎಲ್ಲಾ ಮೊಬೈಲ್ ಬಳಕೆದಾರರಿಗೆ ಏಷ್ಯಾ ಕಪ್ ಮತ್ತು ICC ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲಿದೆ ಎಂದು ಘೋಷಿಸಿದೆ.  ಏಷ್ಯಾದ ಶ್ರೀಮಂತ ವ್ಯಕ್ತಿ ಅಂಬಾನಿ ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್‌ನಲ್ಲಿ ವಿಶೇಷ ಆಸಕ್ತಿ ವಹಿಸುತ್ತಿರುವ ಸಮಯದಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಈ ಹೆಜ್ಜೆ ಇಟ್ಟಿದೆ. ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ ಐಪಿಎಲ್‌ನ ನೇರ ಪ್ರಸಾರವನ್ನು ದಾಖಲೆಯ 505 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. 

ಆದಷ್ಟು ಹೆಚ್ಚು ಅಭಿಮಾನಿಗಳನ್ನು ತಲುಪಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ನಮ್ಮ ಬಳಕೆದಾರರು ಮತ್ತು ಕ್ರಿಕೆಟ್ ಅಭಿಮಾನಿಗಳನ್ನು ತಲುಪಲು Hotstar ಈ ಕ್ರಮಗಳನ್ನು ಕೈಗೊಂಡಿದೆ ಎಂದು ಕಂಪನಿ ಹೇಳುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಬಳಕೆದಾರರಿಗೆ ಮನರಂಜನೆಯನ್ನು ಪ್ರವೇಶಿಸುವುದನ್ನು ಸುಲಭಗೊಳಿಸಲು ಬಯಸುತ್ತದೆ, ಇದರಿಂದಾಗಿ ಅವರು ಅಡೆತಡೆಯಿಲ್ಲದ ಲೈವ್ ಮ್ಯಾಚ್ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ-Wrestlers Protest: ಕುಸ್ತಿ ಪ್ರತಿಭಟನೆಗೆ ಹೊಸ ತಿರುವು, ಪೊಲೀಸ್ ರಕ್ಷಣೆಯಲ್ಲಿ ಬ್ರಿಜ್ ಭೂಷಣ್ ಮನೆ ತಲುಪಿದ ಮಹಿಳಾ ಕುಸ್ತಿಪಟು


ಪಂದ್ಯಗಳು ಯಾವಾಗ ಆರಂಭಗೊಳ್ಳಲಿವೆ
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಆರಂಭವಾಗಲಿವೆ. ನಿಖರವಾಗಿ  ಅಕ್ಟೋಬರ್ 5 ರಂದು ಈ ಪಂದ್ಯಾವಳಿ ಆರಂಭವಾಗಲಿದ್ದು, ನವೆಂಬರ್ 15 ರವರೆಗೆ ನಡೆಯಲಿವೆ. ಅಕ್ಟೋಬರ್ 15 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ.


ಇದನ್ನೂ ಓದಿ-Wrestlers Protest: 'ಆಕೆಯ ಜೊತೆಗೆ ಅನುಚಿತ ವರ್ತನೆ ನಡೆದಿತ್ತು...' ಬ್ರಿಜ್ ಭೂಷಣ್ ವಿರುದ್ಧ ಅಂತಾರಾಷ್ಟ್ರೀಯ ರೇಫರಿ ಹೇಳಿಕೆ


ಆದರೆ, 2023ರ ಏಷ್ಯಾಕಪ್ ಆಯೋಜನೆ ಕುರಿತು ಇನ್ನೂ ನಿರ್ಧಾರ ಪ್ರಕಟಗೊಂಡಿಲ್ಲ. ಸೆಪ್ಟೆಂಬರ್ 2023 ರಲ್ಲಿ ಅದರ ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಪೈಕಿ 8 ತಂಡಗಳು ನೇರವಾಗಿ ಅರ್ಹತೆ ಪಡೆದಿವೆ. 2 ತಂಡಗಳು ಅರ್ಹತಾ ಸುತ್ತಿನ ಮೂಲಕ ಪಟ್ಟಿಯನ್ನು ಸೇರಲಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.