ನವದೆಹಲಿ : ರಿಯಲ್‌ಮೆ (Realme) ಹೊಸ ಸಬ್ ಬ್ರಾಂಡ್ Dizo ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. Dizo Star 300  ಮತ್ತುDizo Star 500 ಎಂಬ ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡರ ಬೆಲೆ 2000 ಗಿಂತಲೂ ಕಡಿಮೆಯಾಗಿದೆ. ಕೆಲವು ದಿನಗಳ ಹಿಂದೆ, ಡಿಜೊನ  ಎರಡು ಹೊಸ ಉತ್ಪನ್ನಗಳಾದ Dizo GoPods D ಮತ್ತುDizo Wireless ಅನ್ನು ಬಿಡುಗಡೆ ಮಾಡಲಾಯಿತು. 


COMMERCIAL BREAK
SCROLL TO CONTINUE READING

Dizo Star 300 ಮತ್ತು Star 500ರ ಬೆಲೆ ಮತ್ತು ಲಭ್ಯತೆ :
ಭಾರತದಲ್ಲಿ Realme Dizo Star 300ನ್ನು 1,299 ರೂ.ಗಳಿಗೆ ಮತ್ತು  Dizo Star 500ರನ್ನು 1,799 ರೂಗಳಿಗೆ ಖರೀದಿಸಬಹುದು. ಎರಡೂ ಫೋನ್‌ಗಳು ಶೀಘ್ರದಲ್ಲೇ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಲಭ್ಯವಾಗಲಿವೆ. ಈ ಎರಡೂ ಫೀಚರ್ ಫೋನ್‌ಗಳು ಶೀಘ್ರದಲ್ಲೇ ಆಫ್‌ಲೈನ್ ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಯಲ್ಲಿಯೂ ಲಭ್ಯವಾಗಲಿವೆ.


ಇದನ್ನೂ ಓದಿ : Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ


ಡಿಜೊ ಸ್ಟಾರ್ 300 ಮತ್ತು ಸ್ಟಾರ್ 500 ರ ವೈಶಿಷ್ಟ್ಯಗಳು :
ಡಿಜೊ ಸ್ಟಾರ್ 300 1.77 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 2,550mAh ಬ್ಯಾಟರಿಯನ್ನು ಹೊಂದಿದೆ.  ಡಿಜೊ ಸ್ಟಾರ್ 300 ರಲ್ಲಿ ಸ್ಟೋರೇಜ್ ಗಾಗಿ, 32MB ಇಂಟರ್ ನೆಲ್ ಸ್ಟೋರೇಜ್ ಒದಗಿಸಲಾಗಿದೆ. ಫೋನ್‌  ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಗುಜರಾತಿ, ತೆಲುಗು, ಪಂಜಾಬಿ ಮತ್ತು ಕನ್ನಡ (Kannada) ಹೀಗೆ ಒಟ್ಟು 8 ಭಾಷೆಗಳನ್ನು ಸಪ್ಪೋರ್ಟ್ ಮಾಡುತ್ತವೆ.  ಫೋನ್ ಹಿಂಭಾಗದಲ್ಲಿ 0.3 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಡಿಜೊ ಸ್ಟಾರ್ 300 ಸ್ಕೈ ಬ್ಲೂ ಕಲರ್ ರೂಪಾಂತರದಲ್ಲಿ ಲಭ್ಯವಿರಲಿದೆ. ಡಿಜೊ ಸ್ಟಾರ್ 500  2.8-ಇಂಚಿನ  ಡಿಸ್ಪ್ಲೇ ಹೊಂದಿದೆ. ಇದು 1900mAh ಬ್ಯಾಟರಿಯನ್ನು ಹೊಂದಿದೆ. ಬ್ಲೂಟೂತ್, ಕ್ಯಾಲೆಂಡರ್, ಅಲಾರ್ಮ್, ಕ್ಯಾಲ್ಕುಲೇಟರ್, ಸೌಂಡ್ ರೆಕಾರ್ಡರ್ ಮತ್ತು ಫೈಲ್ ಮ್ಯಾನೇಜರ್ ಮುಂತಾದ ವೈಶಿಷ್ಟ್ಯಗಳು ಡಿಜೊ ಸ್ಟಾರ್ 500 ನಲ್ಲಿ ಲಭ್ಯವಿದೆ.


ಕ್ಯಾಮೆರಾ :
ಫೋನ್ 0.3 ಎಂಪಿ ವಿಜಿಎ ​​ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು, ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಫೋಟೋಗಳನ್ನು ಸ್ಟೋರೇಜ್ ಗೆ , ಈ ಫೋನ್‌ನಲ್ಲಿ 32MB ಇಂಟರ್ ನೆಲ್ ಸ್ಟೋರೇಜ್ ನೀಡಲಾಗಿದೆ.


ಇದನ್ನೂ ಓದಿ : WhatsApp: ಈ ಸಿಂಪಲ್ ಟಿಪ್ಸ್ ಅನುಸರಿಸಿ, ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.