ಎಲಿಯನ್ಸ್ ಗಳು ಅಸ್ತಿತ್ವದಲ್ಲಿವೆಯೇ? ಕೆಲವೇ ಕ್ಷಣಗಳಲ್ಲಿ ಅಮೇರಿಕಾದಲ್ಲಿ ಇದಕ್ಕೆ ಸಿಗಲಿದೆ ಉತ್ತರ! ಏನು ನಡೆಯಲಿದೆ?
Do Aliens Exists: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕಳೆದ ವರ್ಷ UFOಗಳು ಮತ್ತು UAP ಗಳ ಬಗೆಗಿನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸ್ವತಂತ್ರ ಅಧ್ಯಯನ ತಂಡವನ್ನು ರಚಿಸಿತ್ತು. ಈ ತಂಡ ತನ್ನ ಸಂಶೋಧನೆಗಳನ್ನು ಕೆಲವೇ ಕ್ಷಣಗಳಲ್ಲಿ ಪ್ರಸ್ತುತಪಡಿಸಲಿದೆ.
ವಾಷಿಂಗ್ಟನ್ : ಈ ವಿಶ್ವದಲ್ಲಿ ಅನ್ಯಗ್ರಹ ಜೀವಿಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ? ಭೂಮಿಯ ಮೇಲೆ ಗೋಚರಿಸುವ UFO (ಹಾರುವ ತಟ್ಟೆಗಳು) ಇತರ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿವೆಯೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಇನ್ನೂ ಕೆಲವೇ ಕ್ಷಣಗಳಲ್ಲಿ ಸಿಗುವ ಸಾಧ್ಯತೆ ಇದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕಳೆದ ವರ್ಷ UFOಗಳು ಮತ್ತು UAP ಗಳ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸ್ವತಂತ್ರ ಅಧ್ಯಯನ ತಂಡವನ್ನು ರಚಿಸಿತ್ತು. ಒಂದು ವರ್ಷದ ಅಧ್ಯಯನ ಮತ್ತು ಸಂಶೋಧನೆಗಳ ವಿಶ್ಲೇಷಣೆಯ ನಂತರ, ಈ ತಂಡವು ತನ್ನ ಸಂಶೋಧನೆಗಳನ್ನು ಇನ್ನೂ ಕೆಲವೇ ಕ್ಷಣಗಳಲ್ಲಿ ಪ್ರಸ್ತುತ ಪಡಿಸಲಿದೆ. UFOಗಳನ್ನು ಗುರುತಿಸಲು NASA ಏನು ಮಾಡಬೇಕೆಂದು ಸಂಶೋಧನಾ ವರದಿಯು ಗಮನಸೆಳೆಯಲಿದೆ.
ವರದಿಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ NASA ತಂಡವು UFO ಗಳು ಯಾವುದೇ ರೀತಿಯಲ್ಲಿ ಪರಗ್ರಹ ಸಂಪರ್ಕ ಹೊಂದಿಲ್ಲ ಎಂದು ಹೇಳಿತ್ತು. ಇಂದು ಬರಲಿರುವ ವರದಿಯಲ್ಲಿ ತಂಡ ತನ್ನ ನಿಲುವಿಗೆ ಅಂಟಿಕೊಳ್ಳುವ ನಿರೀಕ್ಷೆಯಿದೆ. ಅನ್ಯಗ್ರಹ ಜೀವಿಗಳ ಉಪಸ್ಥಿತಿಯ ಸಾಧ್ಯತೆಯನ್ನು ಇದು ತಳ್ಳಿಹಾಕುವ ಸಾಧ್ಯತೆ ಇದೆ.
ಒಂದು ವರ್ಷದ ಕಾಲ ನಡೆದ ಈ ಅಧ್ಯಯನಕ್ಕೆ ಸುಮಾರು ಒಂದು ಲಕ್ಷ ಡಾಲರ್ ವೆಚ್ಚವಾಗಿದೆ. ಈ ಅಧ್ಯಯನವು ಭವಿಷ್ಯದ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ ಎಂದು ನಾಸಾ ಹೇಳಿದೆ. UFO ಗೆ ಸಂಬಂಧಿಸಿದ ಈ ವರದಿಯನ್ನು ವಾಷಿಂಗ್ಟನ್‌ನಲ್ಲಿರುವ ನಾಸಾ ಪ್ರಧಾನ ಕಚೇರಿಯಲ್ಲಿ ಇಂದು ಭಾರತೀಯ ಕಾಲಮಾನ ಸಂಜೆ 7.30 ಕ್ಕೆ ಬ್ರೀಫಿಂಗ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ-Viral Video: ಇಲ್ಲಿ ದೊರೆತಿದೆ 2 ಎಲಿಯನ್ ಗಳ ಶವಗಳು, ವಿಡಿಯೋ ನೋಡಿ ನೀವು ದಂಗಾಗುವಿರಿ!
UFOಗಳು ಮತ್ತು ಅನ್ಯಗ್ರಹ ಜೀವಿಗಳಿಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳು ಅಮೆರಿಕದಿಂದ ಬರುತ್ತವೆ. ಅನೇಕ ಹಿರಿಯ US ಏರ್ ಫೋರ್ಸ್ ಅಧಿಕಾರಿಗಳು ಮತ್ತು ಗ್ರೌಂಡ್ ವರ್ಕಿಂಗ್ ಗೆ ಸಂಬಂಧಿಸಿದ ಜನರು UFO ಅನ್ನು ನೋಡಿರುವುದನ್ನು ದೃಢಪಡಿಸಿದ್ದಾರೆ. ಹೆಚ್ಚಿನ ಜನರು ಇದನ್ನು ಎಲಿಯನ್ ಗಳ ಉಪಸ್ಥಿತಿಯ ಜೊತೆಗೆ ಸಂಯೋಜಿಸುತ್ತಾರೆ. ಅಮೆರಿಕದ ಸಾಮಾನ್ಯ ಪ್ರಜೆಯೂ ಸಹ ಏಲಿಯನ್‌ಗಳಿಗೆ ಸಂಬಂಧಿಸಿದ ಘಟನೆಗಳನ್ನು ನಂಬಲು ಇದೇ ಒಂದು ಕಾರಣವಾಗಿದೆ.
ಕಳೆದ ವರ್ಷ, ಅಂತಹ ಪುರಾವೆಗಳನ್ನು ಯುಎಸ್ ಕಾಂಗ್ರೆಸ್ ಸದಸ್ಯರ ಮುಂದೆ ಪ್ರತುತಪಡಿಸಲಾಗಿತ್ತು, ಅವರು UFO ಗಳು ಮತ್ತು ಎಲಿಯನ್ ಗಳ ಬಗ್ಗೆ ಸಾಕಷ್ಟು ಹೇಳುತ್ತಿದ್ದರು. ಇದಾದ ಬಳಿಕ ಈ ಬಗ್ಗೆ ಅಧ್ಯಯನ ನಡೆಸಲು ನಾಸಾ ನಿರ್ಧರಿಸಿತ್ತು. ಇಂದು ವರದಿ ಬಂದ ಬಳಿಕ ಈ ಕುರಿತಾದ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ