ನವದೆಹಲಿ : ಕರೋನಾ ಮಹಾಮಾರಿಯ ವಿರುದ್ಧ ಲಸಿಕಾ ಅಭಿಯಾನವನ್ನು ((Vaccination) ಚುರುಕುಗೊಳಿಸಲಾಗಿದೆ. ಹೆಚ್ಚಿನವರು ಲಸಿಕೆಯನ್ನು ಹಾಕಿಸಿಕೊಂಡಿದ್ದರೆ, ಇನ್ನೂ ಅನೇಕ ಮಂದಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ನಿಮ್ಮ ಸಮೀಪದ ಲಸಿಕಾ ಕೇಂದ್ರವನ್ನು ಸರ್ಚ್ ಮಾಡಲು ಈಗಾಗಲೇ ಅನೇಕ ವಿಧಾನಗಳಿವೆ. ಇದರೊಂದಿಗೆ ಈಗ Paytm  ಕೂಡಾ ಸೇರಿಕೊಂಡಿದೆ. Paytm ಮೂಲಕ ನಿಮ್ಮ ಸಮೀಪದ ಲಸಿಕಾ ಕೇಂದ್ರ ಯಾವುದು ಮತ್ತು ಯಾವ ಕೇಂದ್ರದಲ್ಲಿ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಪಡೆದುಕೊಳ್ಳಬಹುದು.  ಇದಕ್ಕಾಗಿ,  Paytm ನ 'Vaccine Finder' ಫೀಚರ್ ಅನ್ನು ಬಳಸಬೇಕು.  ನೆನಪಿರಲಿ, ಇಲ್ಲಿ ವಾಕ್ಸಿನ್ ನ ಸ್ಲಾಟ್ ಹುಡುಕುವುದು ಮಾತ್ರ ಸಾಧ್ಯವಾಗುತ್ತದೆ. ಸ್ಲಾಟ್ ಬುಕ್ ಮಾಡಲು ಆಗುವುದಿಲ್ಲ. 


COMMERCIAL BREAK
SCROLL TO CONTINUE READING

Paytm ನ ಹೊಸ ವೈಶಿಷ್ಟ್ಯ : 
Paytm ನ ಈ ಹೊಸ ಟೂಲ್ ನ ಹೆಸರು  Vaccine Finder. ಇದರ ಮೂಲಕ ವ್ಯಾಕ್ಸಿನ್ ಸ್ಲಾಟ್ ಲಭ್ಯತೆ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ, ಸಮೀಪದ ಲಸಿಕಾ ಕೇಂದ್ರ, ಯಾವ ಕೇಂದ್ರದಲ್ಲಿ ಯಾವ ಲಸಿಕೆ ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು.  Paytm ನ ಹೋಮ್ ಪೇಜ್ ನ  ಕೆಳಭಾಗದಲ್ಲಿ ಸ್ಲಾಟ್ ಬಗ್ಗೆ ಮಾಹಿತಿ ಪಡೆಯಬಹುದು.


ಇದನ್ನೂ ಓದಿ : Paytm ಬಳಕೆದಾರರೆ ಎಚ್ಚರ! Cashback ಪಡೆಯಲು ಹೋಗಿ ಖಾತೆ ಖಾಲಿಯಾಗುವ ಅಪಾಯ


ಸ್ಲಾಟ್‌ಗಳನ್ನು ಸರ್ಚ್ ಮಾಡುವುದು ಹೇಗೆ? 
-Paytm ನ ಈ ಟೂಲ್ ಮೂಲಕ ಲಸಿಕೆಯ ಬಗ್ಗೆ ಮಾಹಿತಿ ಪಡೆಯಲು, Vaccine Finderಗೆ ಹೋಗಬೇಕು
-ಅಲ್ಲಿ ಅನೇಕ ಫಿಲ್ಟರ್‌ಗಳೊಂದಿಗೆ ಲಸಿಕೆ (Vaccine) ಸರ್ಚ್ ಮಾಡಬಹುದು
-ಇದರಲ್ಲಿ, ನಿಮ್ಮ ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆ ಮತ್ತು ಸಮೀಪದ ಸ್ಲಾಟ್ ಗಳ ಬಗ್ಗೆ ತಿಳಿಯಬಹುದು. ಇದಕ್ಕಾಗಿ ನಿಮ್ಮ ಏರಿಯಾದ ಪಿನ್ ಕೋಡ್ ಬಳಸಬೇಕಾಗುತ್ತದೆ.


-ನಿಮ್ಮ ವಯಸ್ಸಿನ ಆಧಾರದ ಮೇಲೆ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು


ನೊಟಿಫಿಕೇಶನ್ ವ್ಯವಸ್ಥೆ ಕೂಡಾ ಇದೆ : 
ಒಂದು ವೇಳೆ ನೀವು ಸರ್ಚ್ ಮಾಡುವಾಗ ಸ್ಲಾಟ್ ಸಿಗದೇ ಹೋದರೆ, ಸ್ಲಾಟ್ ಲಭ್ಯವಿರುವಾಗ ನಿಮಗೆ ನೊಟಿಫಿಕೇಶನ್ (Notification) ಬರುತ್ತದೆ. ನೊಟಿಫಿಕೇಶನ್ ಗಾಗಿ ಇಲ್ಲಿ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸಿದ ಕೂಡಲೇ ನಿಮ್ಮ ಸಮೀಪ ಎಲ್ಲಿ ಲಸಿಕೆ ಹಾಕಲಾಗುತ್ತದೆ ಎಂಬ ಬಗ್ಗೆ ಮಾಹಿತಿಯ ನೊಟಿಫಿಕೇಶನ್ ಬರುತ್ತದೆ. 


ಇದನ್ನೂ ಓದಿ : Phone Charging: ಫೋನ್ ಚಾರ್ಜ್ ಮಾಡುವಾಗ ನೀವು ಸಹ ಈ ತಪ್ಪುಗಳನ್ನು ಮಾಡುತ್ತೀರಾ, ಹಾಗಿದ್ದರೆ ಇಂದೇ ಸರಿಪಡಿಸಿಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.