ಗೂಗಲ್ ಟಿಪ್ಸ್ ಅಂಡ್ ಟ್ರಿಕ್ಸ್:  ನಮ್ಮ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಬಂದರೂ, ನಾವು ತಕ್ಷಣ ಅದನ್ನು ಗೂಗಲ್‌ನಲ್ಲಿ ಹುಡುಕುತ್ತೇವೆ. ಜನರು ಯಾವುದಾದರು ಸ್ಥಳದ ಬಗ್ಗೆ ತಿಳಿಯಬೇಕೆಂದರೆ ಮಾತ್ರವಲ್ಲ ಆರೋಗ್ಯ, ಫಿಟ್ನೆಸ್, ಪಾಕವಿಧಾನದವರೆಗೆ ಏನೇ ತಿಳಿಯಬೇಕು ಎಂದರೂ ಅದನ್ನು ತಕ್ಷಣ ಗೂಗಲ್‌ನಲ್ಲಿ ಹುಡುಕುತ್ತಾರೆ. ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಆದರೆ, ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡಿದರೆ ಜೈಲಿಗೆ ಸೇರಬಹುದು. ಈ ಲೇಖನದಲ್ಲಿ ನಾವು ಅಂತಹ ಮೂರು ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ನಮಗೆ ಗೊತ್ತಿಲ್ಲದ ವಿಷಯಗಳನ್ನು ನಮ್ಮ ಬೆರಳ ತುದಿಯಲ್ಲಿಯೇ ತಂದಿಡುವ ಮಾಧ್ಯಮ ಅಂದರೆ ಅದು ಗೂಗಲ್. ಆದರೆ, ಹಲವು ಬಾರಿ ಕೆಲವರು ಕೆಲವು ಅರ್ಥವಿಲ್ಲದ ಅಥವಾ ಅಗತ್ಯವಿಲ್ಲದ ಕೆಲವು ವಿಷಯಗಳನ್ನು ಗೂಗಲ್‌ನಲ್ಲಿ  ಸರ್ಚ್ ಮಾಡುತ್ತಾರೆ. ಆದರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. 


ಇದನ್ನೂ ಓದಿ- ಟ್ರೂಕಾಲರ್‌ನಲ್ಲಿ ಸ್ಥಗಿತಗೊಳ್ಳಲಿದೆ ಈ ವೈಶಿಷ್ಟ್ಯ


ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ ವಿಷಯಗಳನ್ನು ಸರ್ಚ್ ಮಾಡಬೇಡಿ:
ಬಾಂಬ್ ತಯಾರಿಸುವುದು ಹೇಗೆ?

ಬಾಂಬ್ ತಯಾರಿಸುವುದು ಹೇಗೆ ಎಂದು ತಿಳಿಯುವ ಕುತೂಹಲವೇ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಅನುಮಾನಾಸ್ಪದ ವಿಷಯಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡುವುದನ್ನು ತಪ್ಪಿಸಿ. ಏಕೆಂದರೆ, ಇಂತಹ ಚಟುವಟಿಕೆಗಳನ್ನು ಸೈಬರ್ ಸೆಲ್ ಮೇಲ್ವಿಚಾರಣೆ ಮಾಡುತ್ತದೆ. ಈ ರೀತಿಯ ಅನುಮಾನಾಸ್ಪದ ವಿಷಯಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹಲವು ಸಂದರ್ಭಗಳಲ್ಲಿ ನೀವು ಜೈಲಿಗೆ ಸಹ ಹೋಗಬೇಕಾಗಬಹುದು.  


ಮಕ್ಕಳ ಅಶ್ಲೀಲತೆ:
ಮಕ್ಕಳ ಅಶ್ಲೀಲತೆಯ ಬಗ್ಗೆ ಭಾರತ ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದೆ. ಗೂಗಲ್‌ನಲ್ಲಿ  ಮಕ್ಕಳ ಅಶ್ಲೀಲತೆಯನ್ನು ಹುಡುಕುವುದು, ವೀಕ್ಷಿಸುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ಜೈಲು ಪಾಲಾಗಬಹುದು. 


ಇದನ್ನೂ ಓದಿ- ಜಿಯೋಗೆ ಟಕ್ಕರ್ ನೀಡಿದ ಬಿಎಸ್ಎನ್ಎಲ್: 90ರೂ. ಗಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ ಹೊಸ ಪ್ಲಾನ್


ಗರ್ಭಪಾತ ಮಾಡುವುದು ಹೇಗೆ?
ಗೂಗಲ್‌ನಲ್ಲಿ  ಗರ್ಭಪಾತ ವಿಧಾನಗಳನ್ನು ಹುಡುಕುವುದು ಸಹ ಅಪರಾಧದ ವರ್ಗಕ್ಕೆ ಸೇರುತ್ತದೆ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.