What is the cause of mobile blast: ಇಂದು ಬಹುತೇಕ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೇ ಇದೆ. ಇನ್ನು ಹಲವೆಡೆ ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಂಡಿರುವ ವರದಿಗಳು ಕೇಳಿಬರುತ್ತಿವೆ. ಫೋನ್ ಸ್ಫೋಟಗೊಳ್ಳಲು ನಿಜವಾದ ಕಾರಣ ಏನು ಅನೇಕರಿಗೆ ತಿಳಿದಿಲ್ಲ. ಇದು ಸ್ಮಾರ್ಟ್‌ಫೋನ್ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.


COMMERCIAL BREAK
SCROLL TO CONTINUE READING

ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಜೀವನದ ಭಾಗವಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಆದರೆ ಈ ಫೋನ್‌ಗಳನ್ನು ಬಳಸುವ ರೀತಿಯಲ್ಲೂ ಜಾಗರೂಕರಾಗಿರಬೇಕು. ಕೆಲವು ತಪ್ಪುಗಳಿಂದಾಗಿ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಅಂತಹ ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ.


ಇದನ್ನೂ ಓದಿ: ಕಾರು ಅಡ್ಡಹಾಕಿದ್ದಕ್ಕೆ ಬ್ಯಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನೇ 100 ಮೀ.ದೂರ ಎಳೆದೊಯ್ದ ಚಾಲಕ!


ಮೊಬೈಲ್ ಚಾರ್ಜಿಂಗ್‌ಗೆ ಯಾವಾಗಲೂ ಉತ್ತಮ ಕಂಪನಿ ಚಾರ್ಜರ್ ಬಳಸಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವ್ಯಾವುದೋ ಚಾರ್ಜರ್‌ನಿಂದ ಫೋನ್  ಚಾರ್ಜ್ ಮಾಡಬೇಡಿ. ಇದು ಮೊಬೈಲ್ ಸ್ಫೋಟಗೊಳ್ಳಲು ಕಾರಣವಾಗಬಹುದು.


ಹೆಚ್ಚು ಸಮಯ ಫೋನ್ ಚಾರ್ಜ್ ಮಾಡುವುದು ಸಹ ತಪ್ಪು. ಅಲ್ಲದೆ  ಅನೇಕ ಜನರು ತಮ್ಮ ಫೋನ್ ಅನ್ನು ಚಾರ್ಜಿಂಗ್‌ಗೆ ಇಟ್ಟು ಬಳಸುತ್ತಾರೆ. ಇಂತಹ ಸಮಯದಲ್ಲಿ ಫೋನ್ ಬಳಸುವುದು ದೊಡ್ಡ ತಪ್ಪು. ಏಕೆಂದರೆ ಇದು ಫೋನ್ ಬಿಸಿಯಾಗಿ, ಸ್ಫೋಟಗೊಳ್ಳುವ ಅಪಾಯವಿರುತ್ತದೆ.


ಫೋನ್ ಅನ್ನು ಚಾರ್ಜ್ ಇಟ್ಟು ಗೇಮ್ಸ್‌ ಆಡಬೇಡಿ. ಇದು ಫೋನ್‌ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಹೆಚ್ಚಿನ ತಾಪಮಾನವು ನಿಮ್ಮ ಫೋನ್‌ಗೆ ಅಪಾಯಕಾರಿ.


ಇನ್ನು ಬೇಸಿಗೆಯಲ್ಲಿ ಫೋನ್ ಸ್ಫೋಟಗೊಳ್ಳಲು ಹೆಚ್ಚಿನ ಕಾರಣಗಳಿವೆ. ವಿಪರೀತ ಶಾಖದ ಸಮಯದಲ್ಲಿ ಫೋನ್ ಅನ್ನು ನಿಮ್ಮ ಕಾರಿನಲ್ಲಿ ಇಡಬೇಡಿ. ಒಂದುವೇಳೆ, ಫೋನ್‌ನಲ್ಲಿ ಬ್ಯಾಟರಿ ದುರ್ಬಲವಾಗಿದ್ದರೆ, ಅದು ಸ್ಫೋಟಗೊಳ್ಳಬಹುದು.


ಇದನ್ನೂ ಓದಿ: ಬೆಳಗ್ಗೆ ಏಳುತ್ತಿದ್ದಂತೆ ಈ ಒಣಹಣ್ಣನ್ನು ತಿನ್ನಿ: ಯಾವುದೇ ಶ್ರಮವಿಲ್ಲದೆ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!


ನಿಮಗೆ ಇನ್ನೊಂದು ವಿಚಾರ ಅಚ್ಚರಿಯನ್ನುಂಟು ಮಾಡಬಹುದು. ಅದೇನೆಂದರೆ ಸಾಮಾನ್ಯವಾಗಿ ಅನೇಕ ಜನರು, ಫೋನ್‌ ಕವರ್‌ ಹಿಂಭಾಗದಲ್ಲಿ ಎಟಿಎಂ ಕಾರ್ಡ್‌, ದುಡ್ಡು ಹೀಗೆ ಏನನ್ನಾದರೂ ಇಟ್ಟುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದು ಫೋನ್ ಅನ್ನು ತ್ವರಿತವಾಗಿ ಬಿಸಿಯಾಗಿಸಲು ಪ್ರಾರಂಭಿಸುತ್ತದೆ. ಜೊತೆಗೆ ಫೋನ್‌ ಸ್ಫೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.