Aviation Turbine Fuel: ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕೆಂದರೆ ನಾವು ಸಾರಿಗೆ ವ್ಯವಸ್ಥೆಗಳಲ್ಲಿ ಅತೀ ಕಡಿಮೆ ಬೆಲೆಗೆ ಸಿಗುವ ಬಸ್ ಅಥವಾ ರೈಲು ಸೇವೆಗಳನ್ನು ಬಳಸುತ್ತೇವೆ. ಆದರೆ ಅಂತರಾಜ್ಯ ಅಥವಾ ಬೇರೆ ಊರುಗಳಿಗೆ ಕೊಂಚ ತ್ವರಿತವಾಗಿ ತಲುಪಬೇಕಾದರೆ, ವಿಮಾನ ಸೇವೆಯನ್ನು ಬಳಕೆ ಮಾಡುತ್ತೇವೆ. ಇಂತಹ ವಿಚಾರಕ್ಕೆ ವಿಮಾನಯಾನ ಉತ್ತಮ ಆಯ್ಕೆಯಾಗಿದೆ. ಆದರೆ ವಿಮಾನವು ಇಂಧನದಿಂದ ಹೇಗೆ ಚಲಿಸುತ್ತದೆ ಮತ್ತು ಒಂದು ಲೀಟರ್ ಇಂಧನದಲ್ಲಿ ಎಷ್ಟು ಮೈಲೇಜ್ ನೀಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಮಾನದ ಪ್ರತಿ ಲೀಟರ್ ಮೈಲೇಜ್ ಎಷ್ಟು ಎಂದು ಉತ್ತರಿಸುವುದು ಸುಲಭವಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: New Toyota Innova Crysta : ಕಾರು ಪ್ರಿಯರಿಗೆ ಸಿಹಿ ಸುದ್ದಿ : ನೂತನ 'ಇನ್ನೋವಾ ಕ್ರಿಸ್ಟಾ' ಬುಕಿಂಗ್ ಆರಂಭ


ಇದಕ್ಕೆ ಉತ್ತರಿಸಲು ಕಷ್ಟಕರವಾದ ಮುಖ್ಯ ಕಾರಣವೆಂದರೆ "ಸರಾಸರಿ ಪ್ರಯಾಣಿಕ ವಿಮಾನ" ದ ವ್ಯಾಖ್ಯಾನ. ಮತ್ತೊಂದು ಕಾರಣವೆಂದರೆ, ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನ ಬಳಕೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ವಿಮಾನದ ತೂಕ, ವಿಮಾನದ ಎತ್ತರ ಮತ್ತು ಹವಾಮಾನ ಪರಿಸ್ಥಿತಿಗಳು ಇತ್ಯಾದಿ.


ನೀವು ಕಿಮೀ/ಲೀನಲ್ಲಿ ವಿಮಾನದ ಮೈಲೇಜ್ ಅನ್ನು ಲೆಕ್ಕಾಚಾರ ಮಾಡಲು ಬಯಸಿದರೆ, ಇಲ್ಲಿ ನಿಮಗೆ ವಿವರವಾಗಿ ಮಾಹಿತಿ ನೀಡಲಿದ್ದೇವೆ. B737 ಸಾಮಾನ್ಯವಾಗಿ ಪ್ರತಿ ಇಂಜಿನ್‌ಗೆ ಪ್ರತಿ ನಿಮಿಷಕ್ಕೆ 20 ಲೀಟರ್ ಇಂಧನವನ್ನು ಸುಡುತ್ತದೆ. ಅಂದರೆ, ಎರಡೂ ಎಂಜಿನ್‌ಗಳು ನಿಮಿಷಕ್ಕೆ 40 ಲೀಟರ್ ಇಂಧನವನ್ನು ಸುಡುತ್ತವೆ. ವೇಗವು ಸಾಮಾನ್ಯವಾಗಿ ಗಂಟೆಗೆ 900 ಕಿಮೀ ಇರುತ್ತದೆ. ಈ ರೀತಿ ಲೆಕ್ಕ ಹಾಕಿದರೆ ಗಂಟೆಗೆ 2400 ಲೀಟರ್ ಇಂಧನ ಖರ್ಚಾಗುತ್ತದೆ. ಒಂದು ಗಂಟೆಯಲ್ಲಿ ಕ್ರಮಿಸಿದ ದೂರ = 900 ಕಿ.ಮೀ. ಆದ್ದರಿಂದ ಪ್ರತಿ ಕಿ.ಮೀಗೆ 2.6 ಲೀಟರ್ ಇಂಧನವನ್ನು ಸುಡಲಾಗುತ್ತದೆ.


ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು 384 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಈ ರೀತಿಯ ವಿಮಾನವು 189 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ವಿಮಾನವು ಉಡ್ಡಯನ ಹಂತದಲ್ಲಿ ಬಹಳಷ್ಟು ಇಂಧನವನ್ನು ಬಳಸುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್ ಗಳು ಕಡಿಮೆ ಇಂಧನವನ್ನು ಬಳಸುತ್ತವೆ.


ಇದನ್ನೂ ಓದಿ: ಕೇವಲ ಎರಡು ಸಾವಿರ ರೂಪಾಯಿಗೆ ಖರೀದಿಸಿ Xiaomiಯ ಸ್ಮಾರ್ಟ್ ಫೋನ್


ವಿಮಾನದ ಇಂಧನವನ್ನು ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಲ್ (ATF) ಎಂದು ಕರೆಯಲಾಗುತ್ತದೆ. ವಿಮಾನಗಳಲ್ಲಿ ಅವುಗಳ ಎಂಜಿನ್ ಮಾದರಿಯ ಆಧಾರದ ಮೇಲೆ, ಅವುಗಳಲ್ಲಿ ಯಾವ ರೀತಿಯ ಇಂಧನವನ್ನು ಬಳಸಲಾಗುವುದು ಎಂದು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ, ವಿಮಾನಗಳಲ್ಲಿ ಎರಡು ರೀತಿಯ ಇಂಧನವನ್ನು ಬಳಸಲಾಗುತ್ತದೆ. ಈ ಇಂಧನಗಳು ಜೆಟ್ ಇಂಧನ ಮತ್ತು ಅವಿಗಾಸ್. ಜೆಟ್ ಇಂಧನವನ್ನು ಜೆಟ್ ಎಂಜಿನ್‌ಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಅವಿಗಾಸ್ ಅನ್ನು ಸಣ್ಣ ಟರ್ಬೊಪ್ರಾಪ್ ವಿಮಾನಗಳಲ್ಲಿ ಎಂಜಿನ್ ಪಿಸ್ಟನ್‌ಗಳನ್ನು ಓಡಿಸಲು ಬಳಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.