ನವದೆಹಲಿ: ಇತ್ತೀಚಿನ ದಿನಮಾನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಕ್ರೇಜ್ ಮೊದಲಿಗಿಂತಲೂ ಹೆಚ್ಚಾಗಿದೆ ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಎಲೆಕ್ಟ್ರಾನಿಕ್ ವಾಹನಗಳು ಭಾರತದ ರಸ್ತೆಗಳನ್ನು ಆಳ್ವಿಕೆ ಮಾಡಲಿವೆ, ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಕಾರ್ಯನಿರ್ವಾಹಿಸುತ್ತಿದೆ, ಈ ಲೇಖನದಲ್ಲಿ ಎಲೆಕ್ಟ್ರಿಕ್ ವಾಹನಗಳ ಅನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇಂಧನದ ಸಹಾಯದಿಂದ ಚಲಿಸುವ ವಾಹನಗಳಿಗಿಂತ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಎಲೆಕ್ಟ್ರಿಕ್ ವಾಹನಗಳಲ್ಲಿ ತುಂಬಾ ಕಡಿಮೆಯಿದ್ದು, ಇಂಧನದ ಬೆಲೆ ಗಗನಕ್ಕೇರುತ್ತಿರುವ ಈ ಸಮಯದಲ್ಲಿ ಇವುಗಳು ಜನರಿಗೆ ತುಂಬಾ ಅನೂಕಲಕರವೆಂದು ಹೇಳಬಹುದು.


ಇದನ್ನೂ ಓದಿ- ಜೈಲಿಗೆ ಹಾಕಿದ್ರು ಪರವಾಗಿಲ್ಲ, ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿ.ಕೆ.ಶಿವಕುಮಾರ್


ಎಲೆಕ್ಟ್ರಿಕ್ ವಾಹನಗಳ ಅನುಕೂಲತೆಗಳು:


1. ಗ್ಯಾಸ್‌ನ ಅಗತ್ಯವಿಲ್ಲ:


ಎಲೆಕ್ಟ್ರಿಕ್ ಕಾರುಗಳು ಸಂಪೂರ್ಣವಾಗಿ ಪುನಃ ಚಾರ್ಜ್ ಮಾಡಬಹುದಾದರಿಂದ ಇದಕ್ಕೆ ಗ್ಯಾಸ್ ಸ್ಟೇಷನ್‌ಗೆ ಹೋಗಿ ಗ್ಯಾಸ್ ತುಂಬಿಸುವ ಅವಶ್ಯಕತೆ ಇರುವುದಿಲ್ಲ, ಪ್ರತಿದಿನವೂ ಏರಿಳಿತ ಕಾಣುವ ಇಂಧನ ಆಧಾರಿತ ವಾಹನಗಳಂತೆ ಇದು ನಿಮ್ಮ ಜೇಬಿಗೆ ಹೊರೆಯಾಗಲಾರದು.


2. ಅಗ್ಗದ ನಿರ್ವಹಣೆ:


ಎಲೆಕ್ಟ್ರಿಕ್ ಕಾರುಗಳ ಬೆಲೆಗಳು ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳಂತೆಯೇ ಇದ್ದರೂ, ಅವುಗಳನ್ನು ಚಾಲನೆ ಮಾಡುವ ವಿಷಯದಲ್ಲಿ ಹೆಚ್ಚು ವೆಚ್ಚವಾಗುವುದಿಲ್ಲ. ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಪ್ರೋತ್ಸಾಹ, ಸರ್ಕಾರದ ಸಬ್ಸಿಡಿಗಳು, ಉತ್ತಮ ಇಂಧನ ದಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ನೀಡುವುದರಿಂದ ಇವುಗಳ ನಿರ್ವಹಣೆ ಅಗ್ಗವಾಗಿದೆ.


3: ಅಧಿಕ ದಕ್ಷತೆ:


ಬ್ಯಾಟರಿ ಶಕ್ತಿಯಿಂದ ಚಲಿಸುವ ವಾಹನಗಳು ಅತ್ಯಧಿಕ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ವಿಶಿಷ್ಟವಾಗಿ, ಈ ಕಾರುಗಳು ಮೂರು ಪ್ರಾಥಮಿಕ ಭಾಗಗಳನ್ನು ಹೊಂದಿರುತ್ತವೆ: ಮೋಟಾರ್, ಇನ್ವರ್ಟರ್ ಮತ್ತು ಆನ್-ಬೋರ್ಡ್ ಚಾರ್ಜರ್. ಹಾಗಾಗಿ ವಾಹನಗಳ ಸವೆತ ಕಡಿಮೆಯಾಗಿ ಮೊದಲಿನ ಅದರ ದಕ್ಷತೆಯನ್ನು ಕಾಪಾಡುತ್ತವೆ.


4. ಶೂನ್ಯ ಹೊರಸೂಸುವಿಕೆ:


ಮೊದಲೇ ಚರ್ಚಿಸಿದಂತೆ ಇಂಗಾಲದ  ಹೊರಸೂಸುವಿಕೆಯು ಈಗಿನ ಕಾಲದಲ್ಲಿ ನಮ್ಮ ಮತ್ತು ಪರಿಸರದ ಆರೋಗ್ಯಕ್ಕೆ ಹಾನಿಕಾರಕವಾಗಿದೆ, ಆದರೆ ನಮ್ಮ ಆರೋಗ್ಯಕ್ಕೂ ಅಪಾಯಕಾರಿ. ಎಲೆಕ್ಟ್ರಿಕ್ ಕಾರುಗಳು ಪರಿಸರ ಸ್ನೇಹಿಯಾಗಿದ್ದು ಈ ಕಾರುಗಳ ಬಳಕೆಯಿಂದ, ನೀವು ಹಸಿರುಮನೆ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬಹುದು.


ಇದನ್ನೂ ಓದಿ- Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..


5. ವೆಚ್ಚ ಪರಿಣಾಮಕಾರಿ:


ಎಲೆಕ್ಟ್ರಿಕ್ ಕಾರುಗಳು ದುಬಾರಿಯಾಗಿದೆ ಮತ್ತು ನಿಮ್ಮ ನಿರ್ವಹಣೆಗಾಗಿ ನಿಮ್ಮ ಜೇಬಿಗೆ ಹೆಚ್ಚಿನ ಹೊರೆ ಹಾಕುತ್ತವೆ ಎಂದು ಕೆಲವರು ನಂಬಿದ್ದಾರೆ, ಆದರೆ ಇದಕ್ಕೆ ವಿರುದ್ಧವಾಗಿ ಅವು ಸಂಪೂರ್ಣವಾಗಿ ಪರಿಣಾಮಕಾರಿಯಾದ ವಾಹನಗಳಾಗಿವೆ, ಸರ್ಕಾರದ ಕೊಡುಗೆ ಮತ್ತು ಭವಿಷ್ಯದ ಇಂಧನದ ದರಗಳ ದೃಷ್ಟಿಯಿಂದ ಇವು ಅತ್ಯಂತ ಜನಪ್ರಿಯವಾಗುತ್ತಿವೆ.


6. ಕಡಿಮೆ ಶಬ್ದ ಮಾಲಿನ್ಯ:


ಈ ಕಾರುಗಳಲ್ಲಿ ಬಳಸಲಾಗುವ ಎಲೆಕ್ಟ್ರಿಕ್ ಮೋಟಾರ್‌ಗಳು ಶಬ್ದವನ್ನು ಉಂಟುಮಾಡುವುದಿಲ್ಲ ಮತ್ತು ರಸ್ತೆಯಲ್ಲಿ ಸರಾಗವಾಗಿ ಚಲಿಸುತ್ತವೆ. ಹೆಚ್ಚಿನ ವೇಗವರ್ಧನೆಯ ಸಮಯದಲ್ಲೂ ಸಹ ಶಬ್ದವು ಅಷ್ಟೊಂದು ಉತ್ಪತ್ತಿಯಾಗುವುದಿಲ್ಲ, ಇಂಧನ ಆಧಾರಿತ ವಾಹನಗಳು ಸಾಕಷ್ಟು ಶಬ್ದ ಮಾಲಿನ್ಯವನ್ನು ಉಂಟುಮಾಡುವುದರಿಂದ ಶಾಂತಿ ಪ್ರಿಯರಿಗೆ ಇವುಗಳು ಪ್ರಯೋಜನಕಾರಿಯಾಗಿವೆ.


7. ತ್ವರಿತ ಚಾರ್ಜಿಂಗ್:


ನಿಮ್ಮ ಮನೆಯಲ್ಲಿ ನಿಮ್ಮ ಎಲೆಕ್ಟ್ರಿಕ್ ಕಾರ್ ಮತ್ತು ದ್ವಿಚಕ್ರ ವಾಹನವನ್ನು ಸಮರ್ಥ ರೀತಿಯಲ್ಲಿ ಚಾರ್ಜ್ ಮಾಡಬಹುದು. ನಿಮ್ಮ ಮನೆಯ ಹೊರಗೆ ನೀವು ಚಾರ್ಜಿಂಗ್ ಘಟಕವನ್ನು ಸ್ಥಾಪಿಸಿದ ನಂತರ, ನಿಮ್ಮ ಎಲೆಕ್ಟ್ರಿಕ್ ಕಾರನ್ನು ನೀವು ಕೆಲವೇ ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಹೆಚ್ಚಿನ EVಗಳನ್ನು ಕೇವಲ 8 ರಿಂದ 12 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಹೈ-ಎಂಡ್ ಮಾಡೆಲ್‌ಗಳು ಯೂನಿಟ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ 500 ಕಿಲೋಮೀಟರ್‌ಗಳವರೆಗೆ ಚಾಲನಾ ಅನುಭವವನ್ನು ಪಡೆಯಬಹುದು.


ಇದನ್ನೂ ಓದಿ- Covid-19: ಕರೋನಾ ಪಾಸಿಟಿವ್ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಪರೀಕ್ಷೆ ಅಗತ್ಯವಿದೆಯೇ ಅಥವಾ ಇಲ್ಲವೇ? ಸತ್ಯೇಂದ್ರ ಜೈನ್ ಹೇಳಿದ್ದೇನು ಗೊತ್ತಾ


ಈಗಿನ ಕಾಲದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ, ಭಾರತವು ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆ ಎಂಬುದನ್ನು ಅರಿತ ವಿದೇಶಿ ಕಂಪನಿಗಳು ನಾಮುಂದೆ ತಾಮುಂದೆ ಎಂದು ತಮ್ಮ ತಮ್ಮ ಹೊಸ ಮಾಡೆಲ್ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ, ಇನ್ನೂ ಐದರಿಂದ ಹತ್ತು ವರ್ಷಗಳ ಅಂತರದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.