ಬೆಂಗಳೂರು : ವಾಹನ ಚಲಾಯಿಸುವಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ.  ಇಲ್ಲವಾದರೆ ದಂಡ ತೆರಲು  ಸಿದ್ದರಿರಬೇಕು. ಆದರೆ ಈಗ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾದ ಅಪ್ಲಿಕೇಶನ್  ಒಂದಿದೆ. ಈ ಆಪ್ ನಿಮ್ಮ ಬಳಿ ಇದ್ದರೆ, ಪೊಲೀಸರು ನಿಮ್ಮನ್ನು ತಡೆದು ನಿಲ್ಲಿಸಬಹುದು ಎನ್ನುವ ಭಯ ಇರುವುದಿಲ್ಲ. 


COMMERCIAL BREAK
SCROLL TO CONTINUE READING

ದಂಡ ಕಟ್ಟುವುದನ್ನು ತಡೆಯುತ್ತದೆ ಡಿಜಿ ಲಾಕರ್ ಅಪ್ಲಿಕೇಶನ್  :
ಡಿಜಿಲಾಕರ್ ಅಪ್ಲಿಕೇಶನ್ ಪ್ರತಿ ವಾಹನ ಮಾಲೀಕರಿಗೆ  ಬಹಳ ಪ್ರಯೋಜನಕಾರಿ ಆಪ್ ಆಗಿದೆ. ಹೌದು, ವಾಹನ ಖರೀದಿಸಿದ ನಂತರ ಅದನ್ನು ಚಲಾಯಿಸಬೇಕಾದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್,  ವಾಹನ ನೋಂದಣಿ  ಕಾರ್ಡ್, ಹೀಗೆ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಅಗತ್ಯ ದಾಖಲೆಗಳಲ್ಲಿ ಯಾವುದಾದರೂ ಒಂದು ಕೂಡಾ ನಿಮ್ಮ ಬಳಿ ಇಲ್ಲ ಎಂದಾದರೆ, ಟ್ರಾಫಿಕ್ ಪೋಲೀಸ್ ದಂಡ ವಿಧಿಸುತ್ತಾರೆ.  ಈ ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ,  ನೀವು ಈ 19 MBಯ ಈ ಅಪ್ಲಿಕೇಶನ್ ಅನ್ನು Google Play Store ನಿಂದ ಡೌನ್‌ಲೋಡ್ ಮಾಡಿ ಕೊಳ್ಳಬಹುದು. ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ,  ನಿಮಗೆ ಅಗತ್ಯವಿರುವ ದಾಖಲೆಗಳನ್ನು ಅದರಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. 


ಇದನ್ನೂ ಓದಿ : ಕಡಿಮೆ ಬೆಲೆಯ ಬ್ರಾಡ್‌ಬ್ಯಾಂಡ್ ಯೋಜನೆ ಪರಿಚಯಿಸಿದ ಬಿಎಸ್ಎನ್ಎಲ್


ಸಂಚಾರ ಪೊಲೀಸರು ನಿಲ್ಲಿಸಿದರೆ ಏನು ಮಾಡಬೇಕು ? : 
ಟ್ರಾಫಿಕ್ ಪೊಲೀಸರು ನಿಮ್ಮನ್ನುತಡೆದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿರುವ ಈ ದಾಖಲೆಗಳನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಬೇಕು. ಇದು ಸರ್ಕಾರಿ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿರುವುದರಿಂದ ಯಾವುದೇ ಟ್ರಾಫಿಕ್ ಪೊಲೀಸರು ಇದನ್ನು ಸ್ವೀಕರಿಸಲು ನಿರಾಕರಿಸುವಂತಿಲ್ಲ. ಅಪ್ಲಿಕೇಶನ್‌ನಲ್ಲಿರುವ ದಾಖಲೆಗಳನ್ನು ತೋರಿಸುವ ಮೂಲಕ  ದಂಡ ತೆರುವುದರಿಂದ ಬಚಾವಾಗಬಹುದು. 


ಇದನ್ನೂ ಓದಿ : JioMart ಬಿಗ್ ಡಿಸ್ಕೌಂಟ್- ಇಂದು iPhone 14ರಲ್ಲಿ ಸಿಗುತ್ತಿದೆ ಭಾರೀ ರಿಯಾಯಿತಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.