Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕು
Google : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
Doodle for Earth day : ಅದೇ ರೀತಿ ಗೂಗಲ್ ಇಂದು ಭೂ ದಿನದಂದು ಡೂಡಲ್ ಗ್ರಹದ ನೈಸರ್ಗಿಕ ಸೌಂದರ್ಯ ಮತ್ತು ಜೀವವೈವಿಧ್ಯದ ವೈಮಾನಿಕ ಫೋಟೋಗಳನ್ನು ಒಳಗೊಂಡಿದೆ ಮತ್ತು ಭವಿಷ್ಯದ ಪೀಳಿಗೆಗೆ ಅದನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಈ ಮೂಲಕ ನೆನಪಿಸುತ್ತದೆ
ಇದನ್ನು ಓದಿ : KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir
ಇಂದು ಭೂ ದಿನ ಅದನ್ನು ನೆನಪು ಮಾಡುವಲ್ಲಿ ಗೂಗಲ್ ಒಂದು ಹೊಸ ಡೂಡಲ್ ಅನ್ನು ಮಾಡಿ, ಜನರಿಗೆ ಭೂಮಿಯ ನೈಸರ್ಗಿಕ ಸೌಂದರ್ಯ ನೆನಪಿಸುವಲ್ಲಿ ಇದೊಂದು ಸಿದ್ಧಗೊಳಿಸಿದೆ. ಗ್ರಹದ ನೈಸರ್ಗಿಕ ಸೌಂದರ್ಯ, ಜೀವವೈವಿಧ್ಯ ಮತ್ತು ಸಂಪನ್ಮೂಲಗಳನ್ನು ರಕ್ಷಿಸಲು ಸಹಾಯ ಮಾಡಲು ಜನರು, ಸಮುದಾಯಗಳು ಮತ್ತು ಸರ್ಕಾರಗಳು ಪ್ರತಿದಿನ ಕೆಲಸ ಮಾಡುವ ಜಗತ್ತಿನಾದ್ಯಂತ ಕೆಲವು ಸ್ಥಳಗಳನ್ನು Google ಅಕ್ಷರಗಳು ಪ್ರದರ್ಶಿಸುತ್ತವೆ. ಆದರೆ ಈ ತರಹದ ಡೂಡಲ್ ಮೂಲಕ ಇಂದಿನ ದಿನ ಭೂ ದಿನವನ್ನು ಗೂಗಲ್ ನೆನಪಿಸುತತ್ತಿದೆ.
ಪ್ರಪಂಚದಾದ್ಯಂತ, ಹೆಚ್ಚು ಸಮರ್ಥನೀಯವಾಗಿ ಬದುಕುವ ಮಾರ್ಗಗಳನ್ನು ಹುಡುಕಲು ಜನರು ಹೆಚ್ಚಾಗಿ Google ಗೆ ಬರುತ್ತಿದ್ದಾರೆ. ಹೆಚ್ಚಾಗಿ ಜನರು ಏನೇ ಹೊಸತನ್ನು ತಿಳಿಯಲು ಗೂಗಲ್ ಗೆ ಬರುವುದು ಸಹಜ. ಹೀಗಾಗಿ ಈ ಮೂಲಕ ಜನರಿಗೆ ಅವಶ್ಯಕ ಮಾಹಿತಿಗಳನ್ನು ತಿಳಿಸುವ ಸರಳ ಮಾರ್ಗವಾಗಿದೆ.
ಇದನ್ನು ಓದಿ : ಬೇಸಿಗೆಯಲ್ಲಿ ಟ್ಯಾನಿಂಗ್ ತೊಡೆದುಹಾಕಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಕಾಫಿ ಫೇಸ್ ಪ್ಯಾಕ್!
ಇಂದು ಜಾಗತಿಕವಾಗಿ ಒಂದು ಶತಕೋಟಿ ಜನರು ಭೂಮಿಯ ದಿನವನ್ನು ಆಚರಿಸುತ್ತಾರೆ. ಭೂ ದಿನವು ನಮಗೆ ಎಷ್ಟು ಮುಖ್ಯವೆಂದರೆ ವರ್ಷವಿಡೀ ಇದು ನಮಗೆ ನೀರು, ಆಹಾರ ವಿದ್ಯುತ್ ಮತ್ತು ಇತರ ಸಂಪನ್ಮೂಲಗಳನ್ನು ನಮಗೆ ನೀಡುವುದರ ಇದರ ಸಂರಕ್ಷಣೆಯು ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಅದರ ಸಂರಕ್ಷಣೆ ಮಾಡುವುದು ಅಷ್ಟೇ ಅವಶ್ಯಕವಾಗಿದೆ ಎಂದು ಈ ಮೂಲಕ ಗೂಗಲ್ ಹೊಸ ಡೂಡಲ್ ತಯಾರಿಸಿ ಜನರಿಗೆ ತಿಳಿಸಲು ಹೊರಟಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.