ವಾಷಿಂಗ್ಟನ್ : Atmospheric Science - ಭೂಮಿಯ ವಾತಾವರಣದಲ್ಲಿ ವಿಚಿತ್ರ ವಿದ್ಯಮಾನವೊಂದು  ಕಂಡುಬಂದಿದ್ದು, ಇದನ್ನು ಕಂಡು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉತ್ತರ ಧ್ರುವದಿಂದ ಸುಮಾರು 250 ಮೈಲಿ (402 ಕಿಮೀ) ಎತ್ತರದಲ್ಲಿ ವಿಜ್ಞಾನಿಗಳು 'ಫನಲ್-ಆಕಾರದ ಗ್ಯಾಪ್'ವನ್ನು ಕಂಡುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕಾಂತಕ್ಷೇತ್ರದಲ್ಲಿ (Magnetosphere) ಈ  'ಗ್ಯಾಪ್' ತೆರೆಯುತ್ತದೆ
ಇದು ಭೂಮಿಯ ಕಾಂತಕ್ಷೇತ್ರದಲ್ಲಿ ತೆರೆದುಕೊಳ್ಳುತ್ತದೆ ಮತ್ತು ದಿನಕ್ಕೆ ಒಮ್ಮೆ ಮಾತ್ರ ಗೋಚರಿಸುತ್ತದೆ. ಸೂರ್ಯನು ತನ್ನ ಅತ್ಯುನ್ನತ ಬಿಂದುವಿನಲ್ಲಿರುವಾಗ ಸ್ಥಳೀಯ ಸಮಯಾನುಸಾರ ಮಧ್ಯಾಹ್ನ ಮಾತ್ರ ಇದನ್ನು ಕಾಣಬಹುದು. ಆದರೆ, ವಾತಾವರಣದ ಈ 'ಅಂತರ' ಆತಂಕಕಾರಿ ವಿಷಯವಲ್ಲ ಎಂದು ವಿಜ್ಞಾನಿಗಳು (NASA Scientists) ಹೇಳುತ್ತಿದ್ದರೂ, ಇದು ಉಪಗ್ರಹ ಮತ್ತು ಜಿಪಿಎಸ್ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಈ ಪ್ರದೇಶದ ಮೂಲಕ ಹಾದುಹೋಗುವ ವಿಮಾನಗಳು ಕೂಡ ನಿಧಾನಗತಿಯ ವೇಗವನ್ನು ವರದಿ ಮಾಡಿದೆ.


ಇದನ್ನೂ ಓದಿ-Study: ತುಂಡುಡುಗೆಯಲ್ಲಿ ಯುವತಿಯರಿಗೆ ಚಳಿ ಯಾಕೆ ಹತ್ತಲ್ಲ? ಸಿಕ್ತು ಈ ಪ್ರಶ್ನೆಗೆ ಉತ್ತರ


ಇದು ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು (Nasa Goddard Space Flight Center)
ದಿ ಮಿರರ್ ವರದಿಯ ಪ್ರಕಾರ, ಹೊಸ ಅಂತರವು ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಗಮನಿಸಿದ ನಾಸಾ ವಿಜ್ಞಾನಿಗಳು ಈ ಪ್ರದೇಶದಲ್ಲಿ ರೇಡಿಯೋ ಮತ್ತು ಜಿಪಿಎಸ್ ಸಿಗ್ನಲ್‌ಗಳಿಗೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದ್ದಾರೆ. ಈ ಅಂತರ ತೆರೆದುಕೊಂಡಾಗ, ಈ ಪ್ರದೇಶದ ಮೂಲಕ ಹಾದುಹೋಗುವ ಯಾವುದೇ ವಿಮಾನವು ನಿಧಾನಗೊಳ್ಳುತ್ತದೆ.


ಇದನ್ನೂ ಓದಿ-ಹೆಚ್ಚಿನ ವಿನಾಶಕ್ಕೆ ಕಾರಣವಾಗಲಿದೆಯೇ ಕರೋನಾಕ್ಕಿಂತ ಅಪಾಯಕಾರಿ Fungus


ಯುಎಸ್ ಬಾಹ್ಯಾಕಾಶ ಸಂಸ್ಥೆ ಕಾರಣವನ್ನು ಕಂಡುಹಿಡಿಯಲು ಯತ್ನಿಸುತ್ತಿದೆ (Space Weather)
ಇದರ ಹಿಂದಿನ ಕಾರಣವನ್ನು ಹುಡುಕಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಯತ್ನಿಸುತ್ತಿದೆ. ಅಲಾಸ್ಕಾ ಫೇರ್‌ಬ್ಯಾಂಕ್ಸ್ ವಿಶ್ವವಿದ್ಯಾನಿಲಯದ ಪ್ರಧಾನ ತನಿಖಾಧಿಕಾರಿ ಮತ್ತು ಭೌತಶಾಸ್ತ್ರಜ್ಞ ಮಾರ್ಕ್ ಕಾಂಡರ್, ಬಾಹ್ಯಾಕಾಶ ನೌಕೆಯು ಭೂಮಿಯಿಂದ 250 ಮೈಲುಗಳಷ್ಟು ಎತ್ತರದಲ್ಲಿ ಹಾರುವಾಗ, ಈ ಪ್ರದೇಶದ ಮೂಲಕ ಹಾದುಹೋದಾಗ ಸ್ಪೀಡ್ ಬ್ರೇಕರ್ ಅನ್ನು ಹೊಡೆದಾಗ ಅವುಗಳು ಹೆಚ್ಚು ಹಿಗ್ಗುತ್ತವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Holocaust On Earth-ಆಗಸದಿಂದ ಭೂಮಿಗಪ್ಪಳಿಸಲಿವೆ ಬೆಂಕಿ ಚೆಂಡುಗಳು, ಇದು ಭೂ- ವಿನಾಶದ ಸಂಕೇತವೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.