ಬೆಂಗಳೂರು : ಮನೆಯಲ್ಲಿ ಅಡಿಗೆ ಕೋಣೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ.  ಕುಟುಂಬದ ಆರೋಗ್ಯಕ್ಕೂ ಈ ಕೋಣೆಗೂ ಹತ್ತಿರದ ನಂಟು.ಯಾಕೆಂದರೆ ನಾವು ಸೇವಿಸುವ ಆಹಾರ ತಯಾರಾಗುವುದು ಇದೇ ಅಡುಗೆ ಮನೆಯಲ್ಲಿ. ಹಾಗಾಗಿ ಇಲ್ಲಿನ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು.ಸಾಮಾನ್ಯವಾಗಿ ಅಡುಗೆ ಮಾಡುವಾಗ ಎಣ್ಣೆ, ಮಸಾಲೆ ಪದಾರ್ಥಗಳ ಕಾರಣದಿಂದಾಗಿ ಅಡುಗೆ ಮನೆಯ ಟೈಲ್ಸ್ ಜಿಗುಟಾಗುತ್ತದೆ. ಆದಷ್ಟು ಬೇಗ ಅದನ್ನು ಸ್ವಚ್ಛಗೊಳಿಸದಿದ್ದರೆ,ಆಹಾರಕ್ಕೆ ಸೇರುವ ಅಪಾಯ ಕೂಡಾ ಇರುತ್ತದೆ. ಈ ರೀತಿಯ ಗ್ರೀಸ್ ಕೊಳೆಯನ್ನು ತೆಗೆದುಹಾಕುವುದು ಸುಲಭವಲ್ಲ ಎಂಬುದರಲ್ಲಿ ಸಂದೇಹವಿಲ್ಲ.ಆದರೆ ಕೆಲವು ಸರಳ ವಿಧಾನಗಳನು ಅನುಸರಿಸಿದರೆ ಇದರ ಡೀಪ್ ಕ್ಲೀನಿಂಗ್ ಸಾಧ್ಯ.  


COMMERCIAL BREAK
SCROLL TO CONTINUE READING

ಅಡಿಗೆ ಸೋಡಾ ಮತ್ತು ವಿನೆಗರ್ : 
ಟೈಲ್ಸ್ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ ನಂತರ ಅದರ ಮೇಲೆ ವಿನೆಗರ್ ಸೇರಿಸಿ.ಇದು ಫಿಜಿಂಗ್ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ.ಕೆಲವು ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ.ನಂತರ ಒಂದು ಬ್ರಶ್ ತೆಗೆದುಕೊಂಡು ಲಘುವಾಗಿ ತಿಕ್ಕಿದರೂ ಸಾಕು ಎಲ್ಲಾ ಜಿಗುಟು ಕಲೆ ಮಾಯವಾಗುತ್ತದೆ. 


ಇದನ್ನೂ ಓದಿ : ಇವೇ ನೋಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್‌ಗಳು.. ಎಂದಾದರೂ ಆಡಿದ್ದೀರಾ?


ಡಿಶ್ ಸೋಪ್ :
ಒಂದು ಬಕೆಟ್ ಬಿಸಿ ನೀರಿನಲ್ಲಿ ಒಂದು ಅಥವಾ ಎರಡು ಸ್ಪೂನ್ ಡಿಶ್ ಸೋಪ್ ಹಾಕಿ  ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣದೊಂದಿಗೆ ಸ್ಪಾಂಜ್ ಅಥವಾ ಬಟ್ಟೆಯನ್ನು ನೆನೆಸಿ ಟೈಲ್ಸ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.ಹೆಚ್ಚು ಕಲೆ ಇರುವ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ ತೆಗೆಯಿರಿ. 


ನಿಂಬೆ ರಸ ಮತ್ತು ಉಪ್ಪು : 
ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ ಟೈಲ್ಸ್ ಮೇಲೆ ಉಜ್ಜಿ.ಇದು ಟೈಲ್ಸ್ ಮೇಲ್ಮೈಯಲ್ಲಿ ಅಂಟಿ ಕುಳಿತಿರುವ ಜಿಗುಟು ಕಲೆಯನ್ನು ಸುಲಭವಾಗಿ ತೆಗೆಯುತ್ತದೆ.ಈ ವಿಧಾನವು ಟೈಲ್ಸ್ ಗಳಿಗೆ ಹೊಸ ರೂಪವನ್ನೇ ನೀಡುತ್ತದೆ.


ಈ ವಿಷಯಗಳನ್ನು ನೆನಪಿನಲ್ಲಿಡಿ : 
ಅಡುಗೆಮನೆಯ ಟೈಲ್ಸ್ ಗಳನ್ನು ಶುಚಿಯಾಗಿಡಬೇಕಾದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾ ಇರಬೇಕು.ಅಡುಗೆ ಮಾಡಿದ ನಂತರ ಪ್ರತಿ ಬಾರಿ ಸ್ವಚ್ಛಗೊಳಿಸುವುದರಿಂದ ಕೊಳಕು ಸಂಗ್ರಹವಾಗುವುದನ್ನು ತಡೆಯಬಹುದು.ಅಡುಗೆ ಮಾಡಿದ ನಂತರ,ತಕ್ಷಣವೇ ಒದ್ದೆ ಬಟ್ಟೆಯಿಂದ ಟೈಲ್ಸ್ ಗಳನ್ನು ಒರೆಸಿ.ಇದು ಜಿಡ್ಡು  ಮತ್ತು ಕಲೆಗಳ ಸಂಗ್ರಹವನ್ನು ತಡೆಯುತ್ತದೆ.ವಾರಕ್ಕೊಮ್ಮೆ ಡೀಪ್ ಕ್ಲೀನಿಂಗ್ ಮಾಡಿ ಇದರಿಂದ ಟೈಲ್ಸ್ ಯಾವಾಗಲೂ ಹೊಳೆಯುತ್ತಿರುತ್ತದೆ.


ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಧಿಕ 3300 GB ಡೇಟಾ ನೀಡುತ್ತಿದೆ ಬಿ‌ಎಸ್‌ಎನ್‌ಎಲ್


 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.