ಬೆಂಗಳೂರು : ಶರ್ಟ್ ಒಳಗಿನ ಕಾಲರ್‌ನಲ್ಲಿ ಬೆವರಿನ ಮೊಂಡುತನದ ಕಲೆ ಸಂಗ್ರಹವಾಗುತ್ತದೆ.ಇದರಿಂದ ಬಟ್ಟೆಯ ಅಂದ ಕೆಡುವುದಲ್ಲದೆ ಪದೇ ಪದೇ ಉಜ್ಜಿ ಒಗೆಯುವುದರಿಂದ ಕಾಲರ್ ಕೂಡಾ ಸವೆಯುತ್ತದೆ.ಅಲ್ಲದೆ ಕಾಲರ್ ಬಳಿಯ ಬಣ್ಣ ಕೂಡಾ ಮಾಸುತ್ತದೆ.ಈ ಸಮಸ್ಯೆಗಳನ್ನು ತಪ್ಪಿಸಬೇಕಾದರೆ ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.ಈ ಮೂಲಕ ಸುಲಭವಾಗಿ ಕೊಳಕು ಕಾಲರ್ ಅನ್ನು ಸ್ವಚ್ಛಗೊಳಿಸಬಹುದು.


COMMERCIAL BREAK
SCROLL TO CONTINUE READING

ಶರ್ಟ್ ಕಾಲರ್ ಅನ್ನು ಸ್ವಚ್ಛಗೊಳಿಸುವ ಬಗೆ :
1.ಬೇಕಿಂಗ್ ಸೋಡಾ ಮತ್ತು ವಾಟರ್ ಪೇಸ್ಟ್

ಅಡಿಗೆ ಸೋಡಾ ನೈಸರ್ಗಿಕ ಕ್ಲೀನರ್ ಆಗಿದೆ. ಇದು ಕಲೆಗಳನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಇದಕ್ಕಾಗಿ 2-3 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು.ಶರ್ಟ್‌ನ ಕಾಲರ್‌ನಲ್ಲಿರುವ ಬೆವರು ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿ 30 ನಿಮಿಷಗಳ ಹಾಗೆಯೇ ಬಿಡಬೇಕು.ನಂತರ, ಸಾಮಾನ್ಯ ನೀರಿನಿಂದ ಶರ್ಟ್ ಅನ್ನು ನಿಧಾನವಾಗಿ ಉಜ್ಜಿ ತೊಳೆಯಬೇಕು. ಹೀಗೆ ಮಾಡಿದರೆ ಕಲೆ  ಮಾಯವಾಗುತ್ತದೆ. 


ಇದನ್ನೂ ಓದಿ : ಈ ನಂಬರ್ ಗೆ ಡಯಲ್ ಮಾಡಿದರೆ ಸಾಕು Jio, Airtel ನೆಟ್ ವರ್ಕ್ ನಿಂದ ಸಿಗುವುದು ಮುಕ್ತಿ !ಆಕ್ಟಿವೇಟ್ ಆಗುವುದು BSNL 4G SIM


2.ಬಿಳಿ ವಿನೆಗರ್ ಮತ್ತು ನೀರು :
ಬೆವರಿನ ಕಲೆಗಳನ್ನು ಹೋಗಲಾಡಿಸಲು ವಿನೆಗರ್ ಕೂಡಾ ಉತ್ತಮ ಮನೆಮದ್ದು.ಒಂದು ಚಮಚ ಬಿಳಿ ವಿನೆಗರ್ ಅನ್ನು ಎರಡು ಚಮಚ ನೀರಿನಲ್ಲಿ ಮಿಶ್ರಣ ಮಾಡಿ ಕಲೆ ಇರುವ ಜಾಗಕ್ಕೆ ಹಚ್ಚಿ, 20-30 ನಿಮಿಷಗಳ ಕಾಲ ಬಿಡಿ.ಇದರ ನಂತರ ಸಾಮಾನ್ಯ ಸೋಪ್ ಅಥವಾ ಡಿಟರ್ಜೆಂಟ್ ನಿಂದ ಶರ್ಟ್ ಅನ್ನು ತೊಳೆಯಿರಿ.ವಿನೆಗರ್‌ನಲ್ಲಿರುವ ಆಸಿಡ್ ಕಲೆಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಅಲ್ಲದೆ,ಬಟ್ಟೆಯ ಹೊಳಪನ್ನು ಕಾಪಾಡುತ್ತದೆ.


3.ನಿಂಬೆ ರಸ ಮತ್ತು ಉಪ್ಪು : 
ನಿಂಬೆ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿದ್ದು, ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಶರ್ಟ್‌ನ ಕಾಲರ್‌ಗೆ ನಿಂಬೆ ರಸವನ್ನು ಹಚ್ಚಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ.ಸ್ವಲ್ಪ ಸಮಯ ಬಿಟ್ಟು ನಂತರ ಲಘು ಕೈಗಳಿಂದ ಉಜ್ಜಿ. ನಂತರ ಶರ್ಟ್ ಅನ್ನು ತೊಳೆಯಿರಿ.ಈ ಪ್ರಕ್ರಿಯೆಯು ಮೊಂಡುತನದ ಬೆವರಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಮಿಕ್ಸಿ ಜಾರ್‌ ಅನ್ನು ಎಷ್ಟೇ ತೊಳೆದರೂ ಬ್ಲೇಡ್ ಬಳಿ ಅಂಟಿರುವ ಜಿಡ್ಡು ಹೋಗ್ತಿಲ್ವಾ? ಹಾಗಾದ್ರೆ ಹೀಗೆ ಮಾಡಿ... ಒಂದು ಸೆಕೆಂಡ್‌ಲ್ಲಿ ಫುಲ್‌ ಕ್ಲೀನ್‌ ಆಗುತ್ತೆ!


4.ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಡಿಟರ್ಜೆಂಟ್ 
ಕಲೆಗಳು ತುಂಬಾ ಹಳೆಯದಾಗಿದ್ದರೆ, ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸುವುದು ಪರಿಣಾಮಕಾರಿಯಾಗಿರುತ್ತದೆ.ಒಂದು ಭಾಗ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಒಂದು ಭಾಗ ಡಿಟರ್ಜೆಂಟ್  ಮಿಶ್ರಣ ಮಾಡಿ ಮತ್ತು ಅದನ್ನು ಕಲೆಯಿರುವ ಜಾಗಕ್ಕೆ ಹಚ್ಚಿ,  15-20 ನಿಮಿಷಗಳ ಕಾಲ ಬಿಡಬೇಕು. ನಂತರ ಶರ್ಟ್ ಅನ್ನು ತೊಳೆಯಬೇಕು. ಹೀಗೆ ಎಂಥ ಕಠಿಣ ಕಲೆಯಾಗಿದ್ದರೂ ಸುಲಭವಾಗಿ ಹಗುರವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.