Electric Water Heater: ಭಾರತದಲ್ಲಿ ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ವಾಟರ್ ಹೀಟರ್‌ಗಳ ಬಳಕೆ ಹೆಚ್ಚು. ನೀವು ಹೊಸ ವರ್ಷದಲ್ಲಿ ಹೊಸ ವಾಟರ್ ಹೀಟರ್, ಗೀಸರ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಸರ್ಕಾರದ ಹೊಸ ಅಧಿಸೂಚನೆಯನ್ನು ಒಮ್ಮೆ ತಪ್ಪದೇ ಓದಿ.  ವಾಟರ್ ಹೀಟರ್, ಗೀಸರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು ಜನವರಿ 1, 2023 ರಿಂದ ಸಿಂಗಲ್ ಸ್ಟಾರ್ ಹೊಂದಿರುವ ವಾಟರ್ ಹೀಟರ್‌ಗಳು ಕಾನೂನುಬದ್ಧವಾಗಿರುವುದಿಲ್ಲ ಎಂದು ತಿಳಿಸಿದೆ. ಇಂಧನ ಸಚಿವಾಲಯದ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಸಿಂಗಲ್ ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್ ಹೊಸ ವರ್ಷದಿಂದ ಮಾರಾಟವಾಗುವುದಿಲ್ಲ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಇಂಧನ ಸಚಿವಾಲಯದ ಹೊಸ ಅಧಿಸೂಚನೆ:
ಭಾರತ ಸರ್ಕಾರದ ಇಂಧನ ಸಚಿವಾಲಯವು ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಈ ಕೋಷ್ಟಕದಲ್ಲಿ ಸ್ಟಾರ್ ರೇಟಿಂಗ್‌ನೊಂದಿಗೆ ಹೀಟರ್‌ನ ಮೌಲ್ಯೀಕರಣವನ್ನು ವಿವರಿಸಲಾಗಿದೆ. ಇದರಲ್ಲಿ ಸಿಂಗಲ್ ಸ್ಟಾರ್ ಎಂದರೆ ಒಂದು ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು 1 ಜನವರಿ 2023 ರಿಂದ 31 ಡಿಸೆಂಬರ್ 2025 ರವರೆಗೆ ಮಾನ್ಯವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.


ಇದನ್ನೂ ಓದಿ- ವಿದ್ಯುತ್ ಬಿಲ್ ಕಡಿಮೆ ಮಾಡಲು ನಿಮ್ಮ ಮನೆಯ ಈ 2 ಗ್ಯಾಜೆಟ್‌ಗಳನ್ನು ಬದಲಾಯಿಸಿ ಸಾಕು!


ಇಂಧನ ಸಚಿವಾಲಯದ ಅಧಿಸೂಚನೆಯ ಪ್ರಕಾರ, 6 ಲೀಟರ್‌ನಿಂದ 200 ಲೀಟರ್ ಸಾಮರ್ಥ್ಯದ 1 ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು 1 ಜನವರಿ 2023 ರಿಂದ  ಕಾನೂನುಬದ್ಧವಾಗಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ಸಿಂಗಲ್ ಸ್ಟಾರ್ ವಾಟರ್ ಹೀಟರ್‌ಗಳು ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತವೆ. ಇದರಿಂದಾಗಿ, ಜನಸಾಮಾನ್ಯರ ಬಜೆಟ್ ಮೇಲೆ ಹೊರೆ ಬೀಳಲಿದ್ದು ಇದು ಅವರ ಖರ್ಚನ್ನು ಹೆಚ್ಚಿಸುತ್ತವೆ ಎಂಬುದೇ ಇಂತಹ ವಾಟರ್ ಹೀಟರ್‌ಗಳ ಬ್ಯಾನ್ ಮಾಡುವುದರ ಹಿಂದಿನ ಮುಖ್ಯ ಉದ್ದೇಶ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?


ಸರ್ಕಾರದ ಅಧಿಸೂಚನೆಯನ್ವಯ, ಶೇಖರಣಾ ಮಾದರಿಯ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳ ಶಕ್ತಿಯ ಕಾರ್ಯಕ್ಷಮತೆಯ ಮಟ್ಟವನ್ನು ನವೀಕರಿಸುವ ಅವಶ್ಯಕತೆಯಿದ್ದು, ಇದು ಕಡಿಮೆ ಶಕ್ತಿಯನ್ನು ಬಳಸುವಂತಿರಬೇಕು. ನೀವೂ ಸಹ ಸಿಂಗಲ್ ಸ್ಟಾರ್ ಎಲೆಕ್ಟ್ರಿಕ್ ವಾಟರ್ ಹೀಟರ್ ಅನ್ನು ಬಳಸುತ್ತಿದ್ದರೆ ಇದರಿಂದ ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದನ್ನು ಬದಲಾಯಿಸುವ ಬಗ್ಗೆ ಚಿಂತಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.