ವಾಟ್ಸಾಪ್ ವಿದ್ಯುತ್ ಬಿಲ್ ಹಗರಣ: ನೀವೂ ಸಹ ನಿಮ್ಮ ಮನೆ, ಕಚೇರಿಯ ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುತ್ತೀರಾ? ಹೌದು ಎಂದಾದರೆ, ಹುಷಾರಾಗಿರಿ! ಆನ್‌ಲೈನ್‌ನಲ್ಲಿ ಜನರ ಮೇಲೆ ದಾಳಿ ಮಾಡಲು ಹ್ಯಾಕರ್‌ಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ ಇದೀಗ  ನಕಲಿ ವಿದ್ಯುತ್ ಬಿಲ್‌ಗಳನ್ನು ಕಳುಹಿಸುವ ಮೂಲಕ ಜನರನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ವಾಸ್ತವವಾಗಿ, ನಕಲಿ ವಾಟ್ಸ್ ಆಪ್ ಸಂದೇಶಗಳ ಮೂಲಕ  ಹ್ಯಾಕರ್‌ಗಳು ವಿದ್ಯುತ್ ಬಿಲ್ ಪಾವತಿಸುವಂತೆಯೂ, ರಾತ್ರಿಯೊಳಗೆ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿಯೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಹಲವಾರು ಟ್ವಿಟರ್ ಬಳಕೆದಾರರು ಇಂತಹ ಹಗರಣದ ಬಗ್ಗೆ ಟ್ವಿಟ್ಟರ್ ಮೂಲಕ ವರದಿ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ವಾಟ್ಸಾಪ್ ವಿದ್ಯುತ್ ಬಿಲ್ ಹಗರಣ ಕುರಿತಂತೆ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಂಚಕರು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುತ್ತಿದ್ದಾರೆ. ಇದರಲ್ಲಿ ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ  ಮತ್ತು ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಸಂದೇಶವನ್ನು ಬರೆಯಲಾಗಿದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಒಡಿಶಾ ಸೇರಿದಂತೆ ಇತರ ರಾಜ್ಯಗಳಲ್ಲಿ ಇಂತಹ ವಿದ್ಯುತ್ ಹಗರಣಗಳ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.


ಇದನ್ನೂ ಓದಿ- WhatsApp Update: ವಾಟ್ಸ್ ಆಪ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಗ್ರೂಪ್ ನಲ್ಲಿ ಎಷ್ಟು ಜನರನ್ನು ಸೇರಿಸಬಹುದು ಗೊತ್ತಾ?


ವರದಿಯ ಪ್ರಕಾರ, ವಾಟ್ಸಾಪ್ ಸಂದೇಶದಲ್ಲಿ, 'ಪ್ರಿಯ ಗ್ರಾಹಕರೇ, ಇಂದು ರಾತ್ರಿ 10.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಕಡಿತಗೊಳಿಸಲಾಗುವುದು. ಏಕೆಂದರೆ ನಿಮ್ಮ ಕಳೆದ ತಿಂಗಳ ಬಿಲ್ ಅನ್ನು ನವೀಕರಿಸಲಾಗಿಲ್ಲ. ದಯವಿಟ್ಟು ತಕ್ಷಣ ನಮ್ಮ ವಿದ್ಯುತ್ ಅಧಿಕಾರಿ 8260303942 ಅನ್ನು ಸಂಪರ್ಕಿಸಿ ಧನ್ಯವಾದಗಳು' ಎಂದು ಬರೆಯಲಾಗಿದೆ. 


ವಾಟ್ಸಾಪ್  ವಿದ್ಯುತ್ ಬಿಲ್ ಹಗರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
>> ಈ ಸಂದೇಶಗಳು ಮೊದಲ ನೋಟಕ್ಕೆ ನಂಬಲರ್ಹವೆಂದು ತೋರಿದರೂ, ಪರಿಶೀಲಿಸಿದಾಗ, ಭಾಷೆಯ ಬಳಕೆ ತಪ್ಪಾಗಿರುತ್ತದೆ ಎಂಬುದನ್ನು ನೀವು ಗಮನಿಸಬಹುದು. 
>>  ನೀವು ಸಾಕಷ್ಟು ಪೂರ್ಣ ವಿರಾಮಗಳನ್ನು ನೋಡುತ್ತೀರಿ ಮತ್ತು ದೊಡ್ಡ ಅಕ್ಷರಗಳು ಮತ್ತು ಸಣ್ಣ-ಕ್ಯಾಪ್ ಅಕ್ಷರಗಳ ಸಂಪೂರ್ಣ ತಿಳುವಳಿಕೆಯ ಕೊರತೆಯನ್ನು ನೀವು ನೋಡುತ್ತೀರಿ. 
>> ಇಂತಹ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. 


ಇದನ್ನೂ ಓದಿ- ನಿಮ್ಮ ಮೊಬೈಲ್ ನಲ್ಲಿರುವ ಈ ಆಪ್ ಅನ್ನು ತಕ್ಷಣ ಡಿಲೀಟ್ ಮಾಡಿ, ಇಲ್ಲವಾದರೆ ಖಾಲಿಯಾಗಿ ಬಿಡುತ್ತದೆ ಖಾತೆ


ವಾಸ್ತವವಾಗಿ ತಮ್ಮ ವಿದ್ಯುತ್ ಬಿಲ್ ಪಾವತಿಸಲು ಮರೆತಿರುವ ಹೆಚ್ಚಿನ ಜನರು ವಿಶೇಷವಾಗಿ ಇಂತಹ ವಂಚನೆಗಳಿಗೆ ಗುರಿಯಾಗುತ್ತಾರೆ. ಏಕೆಂದರೆ ಇದು ಅವರನ್ನು ಭಯಭೀತರನ್ನಾಗಿ ಮಾಡುತ್ತದೆ ಮತ್ತು ಹೆಚ್ಚು ಯೋಚಿಸದೆ ತಕ್ಷಣ ಬಿಲ್ ಪಾವತಿಸಲು ಮುಂದಾಗುತ್ತಾರೆ.  ಹಾಗಾಗಿ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸುವ ಮೊದಲು  ಯಾವಾಗಲೂ ಅವರ ಮೂಲವನ್ನು ಪರಿಶೀಲಿಸಿ, ಇಲ್ಲವೇ, ನಿಮ್ಮ ಖಾತೆ ಖಾಲಿಯಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.