Electricity Bill Rules: ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯಿಂದ ವಿದ್ಯುತ್ ಬಿಲ್ ಹೆಚ್ಚಳದ ಸಮಸ್ಯೆ ಬಗೆಹರಿಯುತ್ತದೆ ಎಂಬ ಉದ್ದೇಶದಿಂದ ಪ್ರಸ್ತುತ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕ ವಿದ್ಯುತ್ ಬಿಲ್ ನಿಖರವಾಗಿ ತಿಳಿಯುವುದಷ್ಟೇ ಅಲ್ಲ, ಪ್ರತಿ ದಿನ ಮನೆಯಲ್ಲಿ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬ ಮಾಹಿತಿಯೂ ಬೆರಳ ತುದಿಯಲ್ಲಿಯೇ ಸಿಗಲಿದೆ. 


COMMERCIAL BREAK
SCROLL TO CONTINUE READING

ಹೌದು, ಗ್ರಾಹಕರ ಅನುಕೂಲಕ್ಕಾಗಿ ಕೆಸ್ಕೋ ( Kesco ) ನೂತನ  ಗ್ರಾಹಕ ಅಪ್ಲಿಕೇಶನ್ ರಚಿಸಿದ್ದು, ಗ್ರಾಹಕರು ಇದರಲ್ಲಿ ನಿತ್ಯ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ ಎಂಬುದನ್ನೂ ಕೂಡ ಪರಿಶೀಲಿಸಬಹುದಾಗಿದೆ. 


ಇದನ್ನೂ ಓದಿ- Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿ


ವಾಸ್ತವವಾಗಿ, ಬಿಲ್ಲಿಂಗ್ ವ್ಯತ್ಯಯ ಸಮಸ್ಯೆಯಿಂದಾಗಿ ದಿನನಿತ್ಯ ಸಾವಿರಾರು ಗ್ರಾಹಕರು ಕೆಸ್ಕೋ ಕಚೇರಿಗೆ ಸುತ್ತುತ್ತಲೇ ಇರುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವುಯ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಕೆಸ್ಕೋ ಮೊದಲ ಹಂತದಲ್ಲಿ ಆರೂವರೆ ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಸಿದ್ದತೆ ನಡೆಸಿದೆ. ಸ್ಮಾರ್ಟ್ ಮೀಟರ್ (Smart Meter) ಅಳವಡಿಸಿದ ಬಳಿಕ ಪ್ರತಿ ದಿನ ಮನೆಗೆ ಎಷ್ಟು ವಿದ್ಯುತ್ ಖರ್ಚಾಗಿದೆ ಎಂಬ ಬಗ್ಗೆಯೂ ಕೂಡ ಗ್ರಾಹಕರಿಗೆ ಮೊಬೈಲ್‌ನಲ್ಲೇ ಮಾಹಿತಿ ಲಭ್ಯವಾಗಲಿದೆ. 


ಇದನ್ನೂ ಓದಿ- ಮನುಷ್ಯರ ಬದುಕನ್ನೇ ನುಂಗುತ್ತಿದೆ ಈ ಸಾಫ್ಟ್‌ʼವೇರ್: ಎಚ್ಚರಿಕೆ ವಹಿಸದಿದ್ದರೆ ನಿಮ್ಮನ್ನೂ ಕಾಡುವುದು ಖಚಿತ! ಆ ತಂತ್ರಜ್ಞಾನ ಬೇರಾವುದು ಅಲ್ಲ...


ಈ ವ್ಯವಸ್ಥೆಯ ಪರಿಚಯದೊಂದಿಗೆ, ಬಿಲ್ಲಿಂಗ್ ಮೀಟರ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. 25 ಕಿಲೋವ್ಯಾಟ್‌ಗಿಂತ ಹೆಚ್ಚಿನ ಮೀಟರ್‌ಗಳಿಗೆ ಮಾತ್ರ ಬಿಲ್ ಮಾಡಲಾಗುತ್ತದೆ ಎಂದು ಕೆಸ್ಕೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.