Elon Musk Trending Tweet: ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಎಲಾನ್ ಮಸ್ಕ್ ಹೆಸರು ಯಾರಿಗೆ ತಾನೇ ಗೊತ್ತಿಲ್ಲ.  ಅವರ ಪರಿಚಯ ಇಲ್ಲದೆ ಇರುವವರು ಬಹುತೇಕ ವಿರಳ ಎಂದರೆ ತಪ್ಪಾಗಲಾರದು, ಅವರು ಟ್ವಿಟರ್‌ನ ಹೊಸ ಮುಖ್ಯಸ್ಥರಾದಾಗಿನಿಂದ, ಅವರ ಕುರಿತಾದ ಒಂದು ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಲೇ ಇದೆ, ಏತನ್ಮಧ್ಯೆ ಅವರ ಫೋಟೋವೊಂದು ಇದೀಗ ಪ್ರಕಟಗೊಂಡಿದ್ದು, ಅದರಲ್ಲಿ ಅವರು ಸುಮೋ ಕುಸ್ತಿಪಟು ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಈ ಫೋಟೋಗೆ ಅವರೇ ಒಂದು ಪ್ರತಿಕ್ರಿಯೆ ನೀಡಿದ್ದು, ಅದು ಇದೀಗ ಭಾರಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸುಮೋ ಕುಸ್ತಿಪಟುವಿನ ಜೊತೆಗೆ ಮಸ್ಕ್ ಕಾದಾಟ!
ವಾಸ್ತವವಾಗಿ, ಈ ಚಿತ್ರವನ್ನು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಎಲೋನ್ ಮಸ್ಕ್ ಸುಮೋ ಕುಸ್ತಿಪಟು ಜೊತೆ ಹೋರಾಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಇದರ ನಂತರ, ಅವರು ಶೀರ್ಷಿಕೆಯಲ್ಲಿಯೇ ಎಲಾನ್ ಮಸ್ಕ್ ಅವರನ್ನು  ಟ್ಯಾಗ್ ಮಾಡಿದ್ದಾರೆ. ಎಲೋನ್ ಮಸ್ಕ್ ಎದುರು ಒಬ್ಬ ಬಲಿಷ್ಠ ಸುಮೊ ಕುಸ್ತಿಪಟು ನಿಂತಿದ್ದು, ಆತನೊಂದಿಗೆ ಕೈ ಕೈ ಹಿಡಿದು ಅವರು ಕಾದಾಟವಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಇನ್ನೊಂದೆಡೆ ಎಲೋನ್ ಮಸ್ಕ್ ಕೂಡ ಫೋಟೋದಲ್ಲಿ ನಗುತ್ತಿರುವುದನ್ನು ಕಾಣಬಹುದು. ಇದು ಸೌಹಾರ್ದ ಪಂದ್ಯವಾಗಿರಬೇಕೆಂದು ತೋರುತ್ತಿದೆ.


ಇದನ್ನೂ ಓದಿ-Cheapest Recharge Plan: ಕೇವಲ 499 ರೂ.ಗಳಲ್ಲಿ 30 ದಿನಗಳವರೆಗೆ ವೈಫೈ ಸೇವೆ, 6 ಒಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆ!

'ಅದು ಎಂಟು ವರ್ಷಗಳ ನೋವು'
ಈ ಟ್ವೀಟ್‌ಗೆ ಸ್ವತಃ ಮಸ್ಕ್ ಅವರೇ ತಮಾಷೆಯ ಉತ್ತರವನ್ನೂ ನೀಡಿದ್ದಾರೆ. ಈ ಫೋಟೋ ತನ್ನ ಫೋಟೋ ಎಂದು ದೃಢಪಡಿಸಿದ ಅವರು, ಈ ಹೋರಾಟದ ನಂತರ ಎಂಟು ವರ್ಷಗಳ ನೋವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾರೆ. ಅವರು ಇದನ್ನು ಬರೆದ ತಕ್ಷಣ, ಈ ಚಿತ್ರವು ತೀವ್ರವಾಗಿ ವೈರಲ್ ಆಗಿದೆ ಮತ್ತು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಲು ಆರಂಭಿಸಿದ್ದಾರೆ.


ಇದನ್ನೂ ಓದಿ-Jabardast Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿದೆ ಜಿಯೋ ಕಂಪನಿಯ ಈ ರೀಚಾರ್ಚ್ ಯೋಜನೆ!


ಚಿತ್ರದ ಮೇಲೆ ಕಾಮೆಂಟ್ ಬರೆಯುವ ಮೂಲಕ, ಈ ಹೋರಾಟದ ಫಲಿತಾಂಶವೇನು ಎಂದು ಎಲ್ಲರು ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಕುಸ್ತಿಯಲ್ಲಿ ಗೆದ್ದವರು ಯಾರು? ನೀವು ಸುಮೋ ಪೈಲ್ವಾನ್ ನನ್ನು  ಥಳಿಸಿದ್ದೀರಾ ಅಥವಾ ಸುಮೋ ಕುಸ್ತಿಪಟು ನಿಮ್ಮನ್ನು ಥಳಿಸಿದ್ದಾರೆಯೇ? ಎಂದು ಬಳಕೆದಾರರು ಪ್ರಶ್ನಿಸಲಾರಂಭಿಸಿದ್ದಾರೆ. ಇನ್ನೊಂದೆಡೆ ಅಂತಹ ಅನೇಕ ಬಳಕೆದಾರರು ಮಸ್ಕ್ ಅವರ ಈ ಚಿತ್ರದ ಮಜಾ ಸವಿಯುತ್ತಿರುವುದನ್ನು ನೀವು ನೋಡಬಹುದು. ಎಲೋನ್ ಮಸ್ಕ್ ಮಾಡದ ಯಾವುದಾದರು ಕೆಲಸ ಉಳಿದಿದೆ ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಅದೇನೇ ಇದ್ದರು ಪ್ರಸ್ತುತ  ಈ ಚಿತ್ರ ಭಾರಿ ವೈರಲ್ ಆಗುತ್ತಿರುವುದು ಮಾತ್ರ ನಿಜ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.