Cancer Treatment: ವೈದ್ಯಕೀಯ ವಿಜ್ಞಾನ ದಿನನಿತ್ಯ ಒಂದಿಲ್ಲ ಒಂದು ಪವಾಡಗಳು ನಡೆಯುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮತ್ತೊಂದು ಮಹತ್ವದ ಸಾಧನೆಯೊಂದು ಮುನ್ನೆಲೆಗೆ ಬಂದಿದೆ. ಗುದನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧದ ಆರಂಭಿಕ ಪ್ರಯೋಗದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೋಗಿಯು  ಕ್ಯಾನ್ಸರ್ ನಿವಾರಣೆಯಾಗಿರುವುದು ಕಂಡುಬಂದಿದೆ.


COMMERCIAL BREAK
SCROLL TO CONTINUE READING

12 ರೋಗಿಗಳ ಮೇಲೆ ನಡೆದ  ಪ್ರಯೋಗ
ಆದರೆ, ಸದ್ಯಕ್ಕೆ ಈ ಪ್ರಯೋಗ ತುಂಬಾ ಆರಂಭಿಕ ಹಂತದಲ್ಲಿದೆ. ಕಾರಣ ಎಂದರೆ. ಇದರಲ್ಲಿ ಕೇವಲ 12 ರೋಗಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಇನ್ನೊಂದೆಡೆ ಪ್ರಯೋಗದ ಫಲಿತಾಂಶಗಳನ್ನು ಕಂಡು ರೋಗಿಗಳು ಅಷ್ಟೇ ಅಲ್ಲ, ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಪ್ರಯೋಗದ ಸಮಯದಲ್ಲಿ, ರೋಗಿಗಳಿಗೆ ಆರು ತಿಂಗಳ ಕಾಲ ಡೋಸ್ಟಾರ್ಲಿಮಾಬ್ ಅನ್ನು ನೀಡಲಾಗಿದೆ. ನಿಗದಿತ ಅವಧಿಯ ನಂತರ, ಭಾಗವಹಿಸುವವರ ಸ್ಕ್ಯಾನ್ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಮತ್ತು ಅವರ ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಇಲ್ಲದಿರುವುದು ಪತ್ತೆಯಾಗಿದೆ. ಈ ಸಂಶೋಧನೆಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಭಾನುವಾರ (ಜೂನ್ 6) ಪ್ರಕಟವಾಗಿದೆ. ಈ ಅಧ್ಯಯನಕ್ಕೆ ಔಷಧ ತಯಾರಕ ಕಂಪನಿ ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಬೆಂಬಲಿಸಿದೆ.


ಯಾವುದೇ ರೀತಿಯ ಕಿಮೊಥೆರಪಿ ಅಥವಾ ವಿಕಿರಣ ಶಸ್ತ್ರಚಿಕಿತ್ಸೆ ನಡೆಸಲಾಗಿಲ್ಲ
ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಕೀಮೋಥೆರಪಿ ಮತ್ತು ವಿಕಿರಣವನ್ನು ಒಳಗೊಂಡಿರುವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಗುದನಾಳದ ಕ್ಯಾನ್ಸರ್ನ ಸಂದರ್ಭದಲ್ಲಿ, ಕೆಲವು ರೋಗಿಗಳಿಗೆ ಕೊಲೊಸ್ಟೊಮಿ ಬ್ಯಾಗ್ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳು ಕೆಲವೊಮ್ಮೆ ಕರುಳಿನ, ಮೂತ್ರ ಕೋಶದ ದೋಷಗಳಂತಹ ಶಾಶ್ವತ ತೊಡಕುಗಳನ್ನು ಸಹ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.


ಇದನ್ನೂ ಓದಿ-ಈ ಒಂದು ಎಲೆಯನ್ನು ಸೇವಿಸಿದರೆ ಸಾಕು ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ


ಈ ಚಿಕಿತ್ಸೆ ವರದಾನ ಸಾಬೀತಾಗಲಿದೆ
ಏತನ್ಮಧ್ಯೆ, ಪ್ರಸ್ತುತ ನಡೆದಿರುವ ಈ ಪರೀಕ್ಷೆಯು ಚಿಕಿತ್ಸೆ ಪಡೆಯುತ್ತಿರುವ ಹಲವಾರು ರೋಗಿಗಳ ಪಾಲಿಗೆ ವರದಾನ ಸಾಬೇತಾಗಲಿದೆ . ಈ ಕುರಿತು ಟೈಮ್ಸ್ ಜೊತೆಗೆ ಮಾತನಾಡಿರುವ ಅಧ್ಯಯನದ ಸಹ-ಲೇಖಕರಾದ ಡಾ ಆಂಡ್ರಿಯಾ ಸೆರ್ಸೆಕ್, ಫಲಿತಾಂಶಗಳು ಪ್ರಕಟಗೊಂಡಾಗ ಬೆಹುತೆಕರ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಇತ್ತು ಎಂದಿದ್ದಾರೆ. ಸೆರ್ಸೆಕ್, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ಆಂಕೊಲಾಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಹೊರತಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, "ಇದು ನಂಬಲಾಗದಷ್ಟು ಲಾಭದಾಯಕವಾಗಿದೆ... ಅಧ್ಯಯನದಲ್ಲಿ ಪಾಲ್ಗೊಂಡ ರೋಗಿಗಳಿಂದ ಬಂದ ಸಂತೋಷದ ಇಮೇಲ್‌ಗಳು ನನ್ನ ಕಣ್ಣಲ್ಲಿ ನೀರು ತರಿಸಿವೆ. ಏಕೆಂದರೆ ಈ ರೋಗಿಗಳು ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಆರೋಗ್ಯದಿಂದ ಇದ್ದಾರೆ" ಎಂದು ಸೆರ್ಸೆಕ್ ಹೇಳಿದ್ದಾರೆ.


ಇದನ್ನೂ ಓದಿ-ಮಕ್ಕಳ ಹಲ್ಲು-ಒಸಡುಗಳಿಗೆ ಹಾನಿಕಾರಕ ಆಹಾರಗಳಿವು


ಇನ್ನೊಂದೆಡೆ ಈ ಕುರಿತು ನ್ಯೂಯಾರ್ಕ್ ಟೈಮ್ಸ್ ಗೆ ಹೇಳಿಕೆ ನೀಡಿರುವ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ. ಲೂಯಿಸ್ ಎ. ಡಯಾಜ್ ಜೂನಿಯರ್, 'ಕ್ಯಾನ್ಸರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಶೋಧನೆ ನಡೆದಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ. ಡಾ. ಡಯಾಜ್ ಈ ಅಧ್ಯಯನ ಲೇಖಕರಲ್ಲಿ ಒಬ್ಬರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಪ್ರಯೋಗದ ಸಮಯದಲ್ಲಿ, ರೋಗಿಗಳು ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ಔಷಧವನ್ನು ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಎಲ್ಲಾ ರೋಗಿಗಳು ತಮ್ಮ ಕ್ಯಾನ್ಸರ್ನ ಒಂದೇ ಹಂತದಲ್ಲಿದ್ದರು ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.