ನವದೆಹಲಿ : Airtel Hike Prepaid Plan : ಟೆಲಿಕಾಂ ಕಂಪನಿಗಳು ತನ್ನ ಪ್ಲಾನ್ ಗಳನ್ನು ಅಗ್ಗವಾಗಿಸುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದ್ದರೆ, ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ಆಘಾತ ನೀಡಿದೆ. ಕಂಪನಿಯು ತನ್ನ ಎಲ್ಲಾ ಪ್ಲಾನ್ ಗಳ ದರಗಳನ್ನು (Recharge Plan) ದುಬಾರಿಯನ್ನಾಗಿ ಮಾಡಿದೆ. ಕಂಪನಿಯ ಅಗ್ಗದ Monthly validity plan 49 ರೂ.ಗಳಿಂದ ಪ್ರಾರಂಭವಾಗುತ್ತಿತ್ತು. ಇದನ್ನು ಕಂಪನಿಯು ಈಗ ಇದನ್ನು 79 ರೂಗಳಿಗೆ ಏರಿಸಿದೆ.  ಈ ಹೊಸ ದರ ನಾಳೆಯಿಂದ ಅಂದರೆ ಜುಲೈ 29 ರಿಂದಲೇ ಅನ್ವಯವಾಗಲಿದೆ.


COMMERCIAL BREAK
SCROLL TO CONTINUE READING

ಏನು ಹೇಳುತ್ತದೆ ಕಂಪನಿ : 
49 ರೂಗಳ ಪ್ರಿಪೇಯ್ಡ್ ಯೋಜನೆಯನ್ನು (Prepaid plan) ಕಂಪನಿಯು ಸ್ಥಗಿತಗೊಳಿಸಿದೆ ಎಂದು ಏರ್ಟೆಲ್ (Airtel) ತಿಳಿಸಿದೆ. ಕಂಪನಿಯ ಪ್ರಿಪೇಯ್ಡ್ ಪ್ಯಾಕ್ ಈಗ 79 ರೂಗಳಿಂದ ಪ್ರಾರಂಭವಾಗಲಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಟಾಕ್ ಟೈಮ್ ಮತ್ತು ಡಬಲ್ ಡೇಟಾ ಸಿಗುತ್ತದೆ. 49 ರೂ ಯೋಜನೆಯಲ್ಲಿ ಕಡಿಮೆ ಟಾಕ್ ಟೈಮ್ ಮತ್ತು ಕಡಿಮೆ ಡೇಟಾವನ್ನು ನೀಡಲಾಗುತ್ತಿತ್ತು ಎಂದು ಕಂಪನಿ ಹೇಳಿದೆ. ಕಡಿಮೆ ಟಾಕ್ ಟೈಂ ಮತ್ತು ಕಡಿಮೆ ಡೇಟಾದಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಮಸ್ಯೆಗಳಿದ್ದವು. ಈ ಕಾರಣದಿಂದಾಗಿ ಈ ಪ್ಲಾನ್ ಅನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ. 


ಇದನ್ನೂ ಓದಿ : WhatAppನಲ್ಲಿ ಬಂತು ಹೊಸ ವೈಶಿಷ್ಟ್ಯ, ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿಯೋಣ ಬನ್ನಿ


79 ರೂ ಯೋಜನೆಯಲ್ಲಿ  ಏನು ಲಾಭ : 
79 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ (Recharge Plan) 64 ರೂ.ಗಳ ಟಾಕ್ ಟೈಂ ಮತ್ತು 28 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇದರೊಂದಿಗೆ ಬಳಕೆದಾರರಿಗೆ 200 ಎಂಬಿ ಡೇಟಾವನ್ನುಸಿಗುತ್ತದೆ. 49 ರೂ.ಗಳ ಪ್ಲಾನ್ ನಲ್ಲಿ ಬಳಕೆದಾರರಿಗೆ 38 ರೂ.ಗಳ ಟಾಕ್ ಟೈಮ್ ಮತ್ತು 100 ಎಂಬಿ ಡೇಟಾವನ್ನು ನೀಡಲಾಗುತ್ತಿತ್ತು. ಇದರ ವ್ಯಾಲಿಡಿಟಿ (Validity) ಕೂಡಾ 28 ದಿನಗಳಾಗಿತ್ತು. 


ಈ ಹಿಂದೆ, ಏರ್ಟೆಲ್ 199 ಮತ್ತು 249 ರೂಗಳ ಕಾರ್ಪೊರೇಟ್ ಪ್ಲಾನ್ ಗಳನ್ನು (Corporate plan) ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಈಗಿರುವ ಗ್ರಾಹಕರನ್ನು ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ 299 ರೂ ಯೋಜನೆಗೆ ಶಿಫ್ಟ್ ಮಾಡಲಾಗುವುದು.


ಇದನ್ನೂ ಓದಿ : WhatsApp: ವಾಟ್ಸಾಪ್‌ನ ಈ ಅಪಾಯಕಾರಿ ಸೆಟ್ಟಿಂಗ್‌ಗಳನ್ನು ತಕ್ಷಣ ಬದಲಾಯಿಸಿ, ಇಲ್ಲವೇ ನಷ್ಟವಾಗಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ