ನವದೆಹಲಿ: Facebook Data Leak : ಫೇಸ್‌ಬುಕ್‌ನ ಭದ್ರತೆಯ ಬಗ್ಗೆ ಮತ್ತೆ ಪ್ರಶ್ನೆ ಎದ್ದಿದೆ. ಫೇಸ್‌ಬುಕ್‌ ಡೇಟಾ ಸೋರಿಕೆ ಪ್ರಕರಣ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಹ್ಯಾಕರ್‌ಗಳು ಫೇಸ್‌ಬುಕ್ ceo ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರ ಡಾಟಾವನ್ನು ಕೂಡಾ ಬಿಟ್ಟಿಲ್ಲ.  ಮಾರ್ಕ್ ಜುಕರ್‌ಬರ್ಗ್ ಫೋನ್ ನಂಬರ್ ಮತ್ತು ವೈಯಕ್ತಿಕ ಡೇಟಾವನ್ನು ಸಹ ಲೀಕ್ (Data leak) ಮಾಡಿದ್ದಾರೆ.  ಮಾಹಿತಿಯ ಪ್ರಕಾರ, ವಿಶ್ವದ 106 ದೇಶಗಳಲ್ಲಿ 53 ಕೋಟಿಗೂ ಹೆಚ್ಚು ಜನರ ಡಾಟಾ ಸೋರಿಕೆಯಾಗಿದೆ. 


COMMERCIAL BREAK
SCROLL TO CONTINUE READING

60 ಲಕ್ಷ ಭಾರತೀಯ ಬಳಕೆದಾರರ ಡೇಟಾ ಕೂಡಾ ಲೀಕ್ : 
ಲಭ್ಯ ಮಾಹಿತಿಯ ಪ್ರಕಾರ, ಸೋರಿಕೆಯಾದ  ಡಾಟಾದಲ್ಲಿ (Data) 60 ಲಕ್ಷ ಭಾರತೀಯರ ಡೇಟಾ ಕೂಡಾ ಸೇರಿದೆ.  ಡಾಟಾ ಸುರಕ್ಷತೆಗೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ದತ್ತಾಂಶ ಸಂರಕ್ಷಣಾ ಮಸೂದೆ ಇನ್ನು ಕೂಡಾ ಲೋಕಸಭೆಯಲ್ಲಿ  ಅಂಗೀಕಾರವಾಗಿಲ್ಲ. ಇದೀಗ ಫೇಸ್‌ಬುಕ್ (Facebook) ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಫೋನ್ ನಂಬರ್ ಸೋರಿಕೆಯಾಗಿದ್ದು, ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.  


ಇದನ್ನೂ ಓದಿ : Smartphone: ಕೇವಲ 3 ಸೆಕೆಂಡುಗಳಲ್ಲಿ ಸ್ಮಾರ್ಟ್‌ಫೋನ್ ತಯಾರಿಸುತ್ತಂತೆ ಈ ದೈತ್ಯ ಕಂಪನಿ


106 ದೇಶಗಳ ಬಳಕೆದಾರರ ಡಾಟಾವನ್ನು ಹ್ಯಾಕರ್‌ಗಳು (Hackers) ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. 60 ಲಕ್ಷ ಭಾರತೀಯ ಬಳಕೆದಾರರ ಡಾಟಾವನ್ನು ಸಹ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಫೇಸ್‌ಬುಕ್ ಐಡಿಗಳು, ಹೆಸರುಗಳು, ವಿಳಾಸಗಳು, ಜನ್ಮದಿನಗಳು ಮತ್ತು ಇ-ಮೇಲ್ (E mail) ವಿಳಾಸಗಳನ್ನು ಹ್ಯಾಕರ್‌ಗಳು ಕದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 


ಸ್ಪಷ್ಟೀಕರಣ ನೀಡಿದ ಫೇಸ್ಬುಕ್  : 
ಮತ್ತೊಂದೆಡೆ,  ಸೋರಿಕೆಯಾದ ಎಲ್ಲಾ ಡೇಟಾವು 2019 ಕ್ಕಿಂತ ಮೊದಲಿನದ್ದು, ಎಂದು  ಫೇಸ್ಬುಕ್ ಹೇಳಿದೆ.  ಅಲ್ಲದೆ ಇದರೊಂದಿಗೆ, ಡೇಟಾ ಸೋರಿಕೆಯಾದ ನಂತರ ಎಲ್ಲವನ್ನೂ ಸರಿಪಡಿಸಲಾಗಿದೆ ಎಂದು ಹೇಳಿದೆ. ಆದರೆ, ಹಳೆಯ ಡಾಟಾ ಸಹಾಯದಿಂದ ಕೂಡಾ ಹ್ಯಾಕರ್ ಗಳು ಬಳಕೆದಾರರಿಗೆ ತೊಂದರೆ ನೀಡಬಹುದು ಎನ್ನುತ್ತಾರೆ ತಜ್ಞರು. ಫೇಸ್‌ಬುಕ್‌ನ ಸುರಕ್ಷತೆಯ ಬಗ್ಗೆ ವಿವಾದ ಎದ್ದಿರುವುದು ಇದೇ  ಮೊದಲಲ್ಲ. ಈ ಹಿಂದೆ ಕೂಡಾ, ಫೇಸ್ ಬುಕ್ ಡಾಟಾ ಸೋರಿಕೆಯಾಗಿರುವ (Data leak) ಆರೋಪ ಕೇಳಿ ಬಂದಿತ್ತು. 


ಇದನ್ನೂ ಓದಿ :  BSNL 108 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆಗೆ ನಿತ್ಯ 1 GB Data


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.