ಇಂದೋರ್/ ಮಧ್ಯಪ್ರದೇಶ: Crime News - ಮಧ್ಯಪ್ರದೇಶದ (Madhya Padesh) ಇಂದೋರ್ (Indore) ನಗರದಲ್ಲಿ ಅಧಿಕಾರಿಯೊಬ್ಬರ  ಪತ್ನಿಯ (Wife) ಫೇಸ್‌ಬುಕ್ ಐಡಿ ಹ್ಯಾಕ್ (Facebook ID Hack) ಮಾಡಲಾದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆಕೆಗೂ ಆಶ್ಚರ್ಯ ಕಾದಿತ್ತು. ಏಕೆಂದರೆ ಸಂತ್ರಸ್ತೆಯ ಅಧಿಕಾರಿ ಪತಿಯೇ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.


COMMERCIAL BREAK
SCROLL TO CONTINUE READING

ಮಹಿಳಾ ಅಧಿಕಾರಿ ಪತಿಯೇ (Face) ತಮ್ಮ ಪತ್ನಿಯ ಫೇಸ್‌ಬುಕ್ ಐಡಿ ಹ್ಯಾಕ್ ಮಾಡಿದ್ದಾರೆ
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಮಹಿಳೆಯ ಅಧಿಕಾರಿ ಪತಿಯೇ ತಮ್ಮ ಪತ್ನಿಯ ಫೇಸ್ ಬುಕ್ ಐಡಿ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಪತಿ ಓಂಪ್ರಕಾಶ ಬಿದರೆ ಅರಣ್ಯ ಇಲಾಖೆಯಲ್ಲಿ ಎಸ್‌ಡಿಒ ಆಗಿ ನೇಮಕಗೊಂಡಿದ್ದಾರೆ.


ಇದನ್ನೂ ಓದಿ-Vodafone Idea Plan: ವೊಡಾಫೋನ್ ಐಡಿಯಾದಲ್ಲಿ ಕೇವಲ 19 ರೂ.ಗೆ ಸಿಗಲಿದೆ 1GB ಡೇಟಾ


ಫೇಸ್ ಬುಕ್ ಐಡಿ ಹ್ಯಾಕ್ ಮಾಡಿದ ದೂರು
ಫೇಸ್‌ಬುಕ್ ಐಡಿ ಹ್ಯಾಕ್ ಆಗಿರುವ ಬಗ್ಗೆ ಸಂತ್ರಸ್ತೆ ಭನ್ವಾರ್ಕುವಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ಇಂದೋರ್‌ನಿಂದ ಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದರು.


ಇದನ್ನೂ ಓದಿ-ಈ ವೆಬ್ ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಸರಕುಗಳು, Flipkart, Amazonಗೆ ಭಾರೀ ಟಕ್ಕರ್


ಇಬ್ಬರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ
ಪತ್ನಿಯ ಫೇಸ್ ಬುಕ್ ಐಡಿ ಹ್ಯಾಕ್ ಮಾಡಿದ್ದಕ್ಕಾಗಿ ಅಧಿಕಾರಿ ಪತಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿಚ್ಛೇದನ  ಪ್ರಕರಣವೂ ಕೂಡ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ತಮ್ಮ ಪತ್ನಿಗೆ ಬೇರೆ ಕಡೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಅನುಮಾನಿಸುತ್ತಿದ್ದ. ಇದೆ ಕಾರಣದಿಂದ ಆತ  ಪತ್ನಿಯ ಫೇಸ್ ಬುಕ್ ಐಡಿ ಹ್ಯಾಕ್ (Hacker) ಮಾಡಿಸಿದ್ದಾನೆ. ತನ್ನ ID ಹ್ಯಾಕ್ ಹಿಂದೆ ಹ್ಯಾಕರ್‌ನ ಕೈವಾಡವಿದೆ ಎಂದು ಹೆಂಡತಿ ಅನುಮಾನಿಸಿದಾಗ, ಅವಳು ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದಳು.


ಇದನ್ನೂ ಓದಿ-Googleನಲ್ಲಿ ಅಂತಿಂಥ ಸಂಗತಿಗಳನ್ನು ಸರ್ಚ್ ಮಾಡುವ ಮೊದಲು ಈ ಟ್ರಿಕ್ ತಿಳಿದುಕೊಳ್ಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.