Mark Zuckerbergನಿಂದ ಲಕ್ಪತಿ ಆಫರ್: ಫೇಸ್‌ಬುಕ್, ಇನ್ಸ್ಟಾ ಸೇರಿ ಲಕ್ಷ, ಲಕ್ಷ ಗಳಿಸಿ...!
Mark Zuckerberg: ಯುಎಸ್ನಲ್ಲಿ ಟಿಕ್‌ಟಾಕ್‌ನ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಮೆಟಾ ಸಂಸ್ಥೆ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ರಚನೆಕಾರರನ್ನು ಹೆಚ್ಚಿಸಲು ಹೊಸ ಆಫರ್ ನೀಡಿದೆ.
Mark Zuckerberg Offer 5000 Dollars For TikTokers: ಮೆಟಾ ಮಾಲೀಕತ್ವದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲಕ ಲಕ್ಷ ಲಕ್ಷ ಗಳಿಸುವ ಆಕರ್ಷಕ ಆಫರ್ ನೀಡಲಾಗುತ್ತಿದೆ. ಅಮೆರಿಕದಲ್ಲಿ ಅಳಿವಿನಂಚಿನಲ್ಲಿರುವ ಟಿಕ್‌ಟಾಕ್‌ನ ಅನಿಶ್ಚಿತತೆಯ ಲಾಭ ಪಡೆಯಲು ಮುಂದಾಗಿರುವ ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್
Meta ತನ್ನ ಪ್ಲಾಟ್‌ಫಾರ್ಮ್‌ಗಳಿಗೆ ರಚನೆಕಾರರನ್ನು ಸೇರಿಸಲು $5,000 (ಸುಮಾರು ₹ 4.31 ಲಕ್ಷ) ವರೆಗೆ ಆಫರ್ ಮಾಡಿದೆ. ಅಮೆರಿಕದಲ್ಲಿ ಟಿಕ್‌ಟಾಕ್‌ನ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆ, ಮೆಟಾ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಮೆರಿಕದಲ್ಲಿ ತನ್ನ ಪ್ಲಾಟ್‌ಫಾರ್ಮ್‌ಗಳಿಗೆ ರಚನೆಕಾರರನ್ನು ಸೇರಿಸಲು $5,000 (ಸುಮಾರು ₹ 4.31 ಲಕ್ಷ) ಆಫರ್ ನೀಡುತ್ತಿದೆ.
ಹೌದು, ಟಿಕ್‌ಟಾಕ್ ರಚನೆಕಾರರನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನತ್ತ ಆಕರ್ಷಿಸಲು "ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ" ಎಂಬ ವಿಶೇಷ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು ಇದರ ಅಡಿಯಲ್ಲಿ ವಿಶೇಷ ರಚನೆಕಾರರಿಗೆ ಲಕ್ಪತಿ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿ ಈ 5 ಕೆಲಸ ಮಾಡಿದ್ರೂ Jail ಸೇರಬೇಕಾಗುತ್ತೆ..! ಹುಷಾರ್
ವಾಸ್ತವವಾಗಿ, ಅಮೆರಿಕದಲ್ಲಿ ಟಿಕ್‌ಟಾಕ್ 170ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ವೇದಿಕೆಯು ಅನೇಕ ರಚನೆಕಾರರಿಗೆ ಜೀವನೋಪಾಯದ ಮುಖ್ಯ ಸಾಧನವಾಗಿರುವುದರಿಂದ ಟಿಕ್‌ಟಾಕ್‌ನ ನಿಷೇಧದ ಬೆದರಿಕೆಯ ನಡುವೆ ಮೆಟಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನ ಈ ಆಫರ್ ಅಂತಹವರಿಗೆ ಅತ್ಯುತ್ತಮ ಕೊಡುಗೆ ಎಂತಲೇ ಹೇಳಬಹುದು.
ಏನಿದು ಮೆಟಾದ ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ? ಇದರ ಪ್ರಯೋಜನವೇನು?
ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ಮೆಟಾದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 'ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂ'ನಲ್ಲಿ ಭಾಗವಹಿಸಲು ರಚನೆಕಾರರು ಕೆಲವು ಷರತ್ತುಗಳನ್ನು ಪೂರೈಸುವುದು ಅತ್ಯಗತ್ಯವಾಗಿದೆ.
* ಮೊದಲನೆಯದಾಗಿ ಫೇಸ್‌ಬುಕ್ನಲ್ಲಿ 20 ಮೂಲ ರೀಲ್‌ಗಳನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 10 ರೀಲ್‌ಗಳನ್ನು ಪೋಸ್ಟ್ ಮಾಡಿರಬೇಕು. ಪ್ರತಿ ತಿಂಗಳಿಗೊಮ್ಮೆ 90 ದಿನಗಳವರೆಗೆ ಈ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ.
* ಮತ್ತೊಂದು ಗಮನಾರ್ಹ ವಿಚಾರವೇನೆಂದರೆ ಈ ರೀಲ್‌ಗಳನ್ನು ನೀವೇ ಕ್ರಿಯೆಟ್ ಮಾಡಿರಬೇಕು. ಬೇರೆಯವರಿಂದ/ ಬೇರೆ ಪ್ಲಾಟ್‌ಫಾರ್ಮ್‌ನಿಂದ ರಿಪೋಸ್ಟ್ ಮಾಡಿಯಾರಬಾರದು.
ಇದನ್ನೂ ಓದಿ- ಬಿಎಸ್‌ಎನ್‌ಎಲ್ ಪೈಸಾ ವಸೂಲ್ ಪ್ಲಾನ್ : ಒಮ್ಮೆ ರಿಚಾರ್ಜ್ ಮಾಡಿದ್ರೆ 10 ತಿಂಗಳು ನಿಶ್ಚಿಂತೆಯಿಂದ ಇರಬಹುದು!
ಮೆಟಾದ ಬ್ರೇಕ್‌ಥ್ರೂ ಬೋನಸ್ ಪ್ರೋಗ್ರಾಂನಿಂದ ಯಾರಿಗೆ ಲಾಭ?
ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರನ್ನು ತನ್ನ ಪ್ಲಾಟ್‌ಫಾರ್ಮ್‌ನತ್ತ ಆಕರ್ಷಿಸುವುದು ಮೆಟಾದ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮೊದಲ ಬಾರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸೇರಲು ಬಯಸುವ ರಚನೆಕಾರರಿಗೆ ಮಾತ್ರ ಇದರ ಪ್ರಯೋಜನ ದೊರೆಯಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.