Facebook Messenger Scam 2022: `ಈ ವಿಡಿಯೋದಲ್ಲಿ ನೀವಿದ್ದೀರಾ?` ಈ ಪ್ರಶ್ನೆಗೆ ಉತ್ತರ ನಿಮ್ಮನ್ನು ಬೀದಿಗೆ ತರಬಹುದು, ಎಚ್ಚರ!
Facebook Messenger Scam 2022: ಫೇಸ್ ಬುಕ್ ಮೇಲೆ ಹಲವು ಜನರಿಗೆ ಅವರ ಸ್ನೇಹಿತರ ವತಿಯಿಂದ ಒಂದು ಲಿಂಕ್ ಹಾಗೂ ಅದರ ಜೊತೆಗೆ ಒಂದು ಸಂದೇಶ ಬರುತ್ತಿದೆ. ಸಂದೇಶದಲ್ಲಿ `ನೀವು ಈ ವಿಡಿಯೋದಲ್ಲಿದ್ದೀರಾ?` ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಈ ಪ್ರಶ್ನೆಗೆ ಉತ್ತರಿಸುವುದು ನಿಮ್ಮ ಪಾಲಿಗೆ ಅಪಾಯಕಾರಿ ಹಾಗೂ ನಷ್ಟದಾಯಕ ಸಾಬೀತಾಗಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
Facebook Messenger Is That you in the Video Scam 2022: ನಿಮ್ಮ ಸ್ನೇಹಿತ ಅಥವಾ ಸಂಬಂಧಿಕರು ಇದ್ದಕ್ಕಿದ್ದಂತೆ ನಿಮಗೆ ಲಿಂಕ್ ಕಳುಹಿಸಿ 'ಈ ವೀಡಿಯೊದಲ್ಲಿ ನೀವು ಇದ್ದೀರಾ?' ಎಂದು ಪ್ರಶ್ನಿಸಿದರೆ, ನಿಮ್ಮ ಪ್ರತಿಕ್ರಿಯೆ ಏನಾಗಬಹುದು? ಸಾಮಾನ್ಯವಾಗಿ, ನೀವು ಈ ಲಿಂಕ್ ಮೇಲೆ ಕ್ಲಿಕ್ಕಿಸಿ ವಿಡಿಯೋದಲ್ಲಿ ನಿಮ್ಮನ್ನು ಹುಡುಕಲು ಪ್ರಯತ್ನಿಸುತ್ತೀರಿ ಮತ್ತು ಅದರ ಜೊತೆಗೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀವು ಅಪಾಯಕ್ಕೆ ದೂಡುವಿರಿ. ನಾವು ಯಾವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದೇವೆ ಎಂಬುದನ್ನು ವಿಸ್ತೃತ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ
ಈ ಅಪಾಯಕಾರಿ ಹಗರಣ ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ
ನಾವು ಹೇಳುತ್ತಿರುವ ಸಂಗತಿಯನ್ನು ತಿಳಿದು ನೀವೂ ಕೂಡ ಒಂದು ಕ್ಷಣ ದಂಗಾಗುವಿರಿ, ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನಲ್ಲಿ ಕಳೆದ ಕೆಲ ದಿನಗಳಿಂದ ಹಗರಣವೊಂದು ನಡೆಯುತ್ತಿದೆ. ಈ ಹಗರಣದಲ್ಲಿ, ಜನರು ತಮ್ಮ ಫೇಸ್‌ಬುಕ್ ಸ್ನೇಹಿತರಿಂದ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಲಿಂಕ್‌ನೊಂದಿಗೆ ಸಂದೇಶಗಳನ್ನು ಪಡೆಯುತ್ತಿದ್ದಾರೆ, ಸಂದೇಶದಲ್ಲಿ 'ಈ ವೀಡಿಯೊದಲ್ಲಿ ನೀವು ಇದ್ದೀರಾ?' ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆದರೆ, ಎಚ್ಚರ! ಇದು ಬಳಕೆದಾರರ ಫೇಸ್‌ಬುಕ್ ಖಾತೆ ಮತ್ತು ನಂತರದ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಒಂದು ಅಪಾಯಕಾರಿ ವಿಧಾನವಾಗಿದೆ.
ಇದನ್ನೂ ಓದಿ-Aadhaar Card Real or Fake: ಆಧಾರ್ ಕಾರ್ಡ್ ನಕಲಿಯೇ ಅಥವಾ ಅಸಲಿಯೇ? ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ
ಲಿಂಕ್ ಅನ್ನು ಕ್ಲಿಕ್ಕಿಸಿದರೆ ನೀವು ಬೀದಿಗೆ ಬರಬಹುದು
ಸಾಮಾನ್ಯವಾಗಿ ಸ್ನೇಹಿತರು ಅಥವಾ ಸಂಬಂಧಿಕರು ಕೇಳುವ ಇಂತಹ ಪ್ರಶ್ನೆಗೆ ಹೆಚ್ಚಿನ ಬಳಕೆದಾರರ ಪ್ರತಿಕ್ರಿಯೆ ಹೇಗಿರುತ್ತದೆ ಎಂದರೆ, ಸಂದೇಶವನ್ನು ಪಡೆದ ತಕ್ಷಣ ಅವರು ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ತಮ್ಮನ್ನು ಹುಡುಕಲು ಪ್ರಯತ್ನಿಸುತ್ತಾರೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನೀವು ಅಲ್ಲಿ ನಿಮ್ಮ ಫೇಸ್‌ಬುಕ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರ ನಿಮಗೆ 'ವೀಡಿಯೊ' ತೋರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಲಿಂಕ್ ನಲ್ಲಿ ಯಾವುದೇ ವೀಡಿಯೊ ಇಲ್ಲ ಮತ್ತು ತನ್ಮೂಲಕ ಹ್ಯಾಕರ್‌ಗಳು ನಿಮ್ಮ ಫೇಸ್‌ಬುಕ್ ಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯುತ್ತಾರೆ. ನಂತರ ಹ್ಯಾಕರ್‌ಗಳ ಅದರಿಂದ ನಿಮ್ಮ ಇತರ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಸಹ ಪ್ರವೇಶಿಸಿಸುತ್ತಾರೆ.
ಈ ರೀತಿಯ ದಾಳಿಯಿಂದ ಹೇಗೆ ಪಾರಾಗಬೇಕು?
ಈ ರೀತಿಯ ದಾಳಿಯಿಂದ ಹೇಗೆ ಪಾರಾಗಬೇಕು ಎಂದು ನೀವೂ ಕೂಡ ಯೋಚಿಸುತ್ತಿದ್ದರೆ. ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. ಈ ವಂಚನೆಯ ದೊಡ್ಡ ಸಮಸ್ಯೆಯೆಂದರೆ ನಿಮ್ಮ ಖಾತೆಯಿಂದ ಈ ಸಂದೇಶವನ್ನು ಇತರರಿಗೆ ಕಳುಹಿಸಲಾಗುತ್ತಿದೆ ಎಂಬುದು ನಿಮಗೆ ತಿಳಿಯುವುದಿಲ್ಲ. ಹೀಗಾಗಿ HTTPS ಅಥವಾ HTTP ಯಿಂದ ಲಿಂಕ್ ಪ್ರಾರಂಭವಾಗದೇ ಇರುವಂತಹ ಯಾವುದೇ ಸಂದೇಶ ನೀವು ಪಡೆದರೆ, ಅದೊಂದು ನಕಲಿ ಲಿಂಕ್ ಆಗಿದೆ ಎಂಬುದನ್ನು ಅರ್ಥೈಸಿಕೊಳ್ಳಿ ಮತ್ತು ಅದರ ಮೇಲೆ ಕ್ಲಿಕ್ಕಿಸುವುದರಿಂದ ದೂರ ಉಳಿಯಿರಿ. ಇದರಿಂದ ನೀವು ಭಾರಿ ನಷ್ಟದಿಂದ ಪಾರಾಗುವಿರಿ ನೆನಪಿನಲ್ಲಿಡಿ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.