FAUG Game Update: FAUG ಆಟದಲ್ಲಿ `ಗಲ್ವಾನ್ ಕಣಿವೆ ಘರ್ಷಣೆ`, ಯಾವಾಗ ಬಿಡುಗಡೆ? ಇಲ್ಲಿದೆ ವಿವರ
FAU-G (Fearless and United Guards) ಆಟದ ನಿರೀಕ್ಷೆಗೆ ಶೀಘ್ರವೇ ತೆರೆಬೀಳಲಿದೆ. PUBG Mobile Indiaಗೆ ಪೈಪೋಟಿ ನೀಡಲು ಬರುತ್ತಿರುವ ಈ ಆಪ್ ನ ಮುಂಚಿತ ನೋಂದಣಿ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ಲಭಿಸಿದೆ.
ನವದೆಹಲಿ: FAU-G (Fearless and United Guards) update: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆ ಈ ಆಟ ಒಳಗೊಂಡಿರಲಿದೆ ಎಂಬ ತಾಜಾ ಮಾಹಿತಿ ಪ್ರಕಟಗೊಂಡಿದೆ. ಆಪ್ ಬಿಡುಗಡೆಯಾಗುವ ಮೊದಲೇ ಈ ಆಟ 10 ಲಕ್ಷ ನೋಂದಣಿಗಳನ್ನು ಆಕರ್ಷಿಸಿದೆ.
ಈ ಆಟವನ್ನು ಅಭಿವೃದ್ಧಿಗೊಳಿಸಿರುವ ಎನ್ಕೋರ್ ಗೇಮ್ಸ್ ಶೀಘ್ರದಲ್ಲಿಯೇ ಆಟದ ಅಧಿಕೃತ ಲಿಂಕ್ ಹಾಗೂ apk ಅನ್ನು ತನ್ನ ವೆಬ್ಸೈಟ್ ಮೇಲೆ ಬಿಡುಗಡೆಗೊಲಿಸಲಿದೆ ಎಂದು ತಿಳಿದುಬಂದಿದೆ. ಈ ಆಟವನ್ನು 2021 ರ ಆರಂಭದಲ್ಲಿ ಅಥವಾ ಮಾರ್ಚ್‌ಗೆ ಮೊದಲು ಪ್ರಾರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
PUBGಗಿಂತ ಈ ರೀತಿ ಭಿನ್ನವಾಗಿದೆ
FAU-G ಮೊಬೈಲ್ ಆಟ PUBG ಮೊಬೈಲ್ ಇಂಡಿಯಾದಿಂದ ಹೇಗೆ ಭಿನ್ನವಾಗಿದೆ ಎಂಬುದರ ಕುರಿತು ಹಲವು ವರದಿಗಳು ಪ್ರಕಟಗೊಂಡಿವೆ. FAU-G ನೈಜ ಕಾರ್ಯಾಚರಣೆ ಆಧರಿಸಿದೆ, ಆದರೆ PUBG ರಾಯಲ್ ಗೇಮ್ ಆಗಿದೆ. ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಕಣಿವೆಯ ನಡುವಿನ ಉದ್ವಿಗ್ನತೆಯನ್ನು ಆಧರಿಸಿ FAU-Gಯ ಹಿನ್ನೆಲೆ ಇರಲಿದೆ ಎಂಬ ಊಹಾಪೋಹಗಳಿವೆ.
ಇದನ್ನು ಓದಿ- FAU-Gಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, Pre-registration ಆರಂಭ
ಉತ್ತರ ಗಡಿಯ ಉಲ್ಲೇಖ
ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಎಫ್‌ಎಯು-ಜಿ ವರ್ಣನೆ ನೀಡಲಾಗಿದ್ದು, ಇದರಲ್ಲಿ 'ಭಾರತದ ಉತ್ತರ ಗಡಿಯಲ್ಲಿರುವ ಎತ್ತರದ ಶಿಖರಗಳಲ್ಲಿ ರಾಷ್ಟ್ರದ ಹೆಮ್ಮೆ ಮತ್ತು ಸಾರ್ವಭೌಮತ್ವವನ್ನು ತಂಡವೊಂದು ರಕ್ಷಿಸುತ್ತಿದೆ. ಈ ಸಾಹಸದ ಕೆಲಸ ಅತ್ಯಂತ ಸಾಹಸಿಗಳಿಗಾಗಿ: ದಿ ಫಿಯರ್ಲೆಸ್ ಅಂಡ್ ಯುನೈಟೆಡ್ ಗಾರ್ಡ್ಸ್" ಎಂದು ವಿವರಿಸಲಾಗಿದೆ.
ಇದನ್ನು ಓದಿ- ಭಾರತದಲ್ಲಿ ಮತ್ತೆ ಬರಲಿದೆ PUBG ಮೊಬೈಲ್?
ಉತ್ತರ ಗಡಿ ಎಂಬ ಪದದ ಉಲ್ಲೇಖವು 2020 ರ ದಶಕದ ಮಧ್ಯಭಾಗದಲ್ಲಿ ಗಲ್ವಾನ್‌ನಲ್ಲಿ ಭಾರತ ಮತ್ತು ಚೀನಾವನ್ನು ಬೆಚ್ಚಿಬೀಳಿಸಿದ ಘಟನೆಗಳ ಸುತ್ತ ಈ ಆಟ ಇರಬಹುದು ಎಂಬುದನ್ನು ಬಿಂಬಿಸುತ್ತದೆ. ಪಿಎಂ ನರೇಂದ್ರ ಮೋದಿಯವರ ಸ್ವಾವಲಂಬಿ ಮಂತ್ರದ ಒಂದು ಭಾಗವಾಗಿರುವ ಎಫ್‌ಎಯು-ಜಿ, ಪ್ರಸ್ತುತ ರಾಷ್ಟ್ರೀಯವಾದಿ ಮತ್ತು ಚೀನಾ ವಿರೋಧಿ ಮನಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಮತ್ತು ಅದನ್ನು ಅತ್ಯಂತ ವಾಸ್ತವಿಕ ರೀತಿಯಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪ್ರೀ-ರಿಜಿಸ್ಟ್ರೇಷನ್ ಮಾಡಬಹುದು
ಆಂಡ್ರಾಯ್ಡ್ ಸಾಧನಗಳಿಗಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನವೆಂಬರ್ 30 ರಂದು FAU-G ಆಟದ ಪೂರ್ವ ನೋಂದಣಿ ಆರಂಭಗೊಂಡಿದೆ. ಗೂಗಲ್ ಪ್ಲೇ ಸ್ಟೋರ್‌ಗೆ ಹೋಗುವ ಮೂಲಕ ಸರ್ಚ್ ಬಾರ್‌ನಲ್ಲಿ FAU-G ಅನ್ನು ಹುಡುಕಿದ ನಂತರ, ನೀವು ಅದಕ್ಕಾಗಿ ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಇದನ್ನು ಓದಿ-PUBG ಗೆ ಟಕ್ಕರ್ ನೀಡಿದ FAU-G: ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಣಿ
ಪೂರ್ವ-ನೋಂದಣಿ ಮಾಡಿಕೊಂಡ ಬಳಕೆದಾರರಿಗೆ ಒಂದು ಪುಶ್ ಅಧಿಸೂಚನೆಯನ್ನು ಕಳುಹಿಸಲಾಗುವು. ಇದು ಆಟ ಡೌನ್‌ಲೋಡ್‌ಗೆ ಯಾವಾಗ ಲಭ್ಯವಾಗಲಿದೆ ಎಂಬುದನ್ನು ತಿಳಿಸುತ್ತದೆ. ಅರ್ಹ ಸಾಧನದಲ್ಲಿ ಆಟವು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆ ಮತ್ತು ಸ್ಥಾಪನೆಗೊಳ್ಳಲಿದೆ. ಪ್ರಸ್ತುತ ಆಟವು ಐಒಎಸ್ ಸಾಧನಗಳಿಗಾಗಿ ಆಪಲ್ ಆಪ್ ಸ್ಟೋರ್‌ನಲ್ಲಿಲ್ಲ, ಇದು ಆರಂಭದಲ್ಲಿ ಆಂಡ್ರಾಯ್ಡ್ ಗೇಮ್ ಮಾತ್ರ ಇರಲಿದೆ ಎನ್ನಲಾಗುತ್ತಿದೆ.
ಇದರ ಒಂದು ಎಪಿಸೋಡ್ ಗಲ್ವಾನ್ ಕಣಿವೆ ಘರ್ಷಣೆ ಆಧರಿಸಿ ಇರಲಿದೆ
FAU-G ಯುದ್ಧ ರಾಯಲ್ ಆಟವಲ್ಲ. ಇದರಲ್ಲಿ ಸಾಮಾನ್ಯ ಎಪಿಸೋಡ್ ಗಳು ಇರಲಿವೆ. ಈ ಆಟಗಳನ್ನು ಯಾವುದೇ ಬಳಕೆದಾರ ಆಡಬಹುದು ಮತ್ತು ಭಾರತೀಯ ಸೇನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು . ಆದರೆ ನಂತರದ ದಿನಗಳಲ್ಲಿ ಕಂಪನಿ ಈ ಆಟದಲ್ಲಿ ಬ್ಯಾಟಲ್ ರಾಯಲ್ ಮೋಡ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯನ್ನು ಆಧರಿಸಿ FAU-G ಆಟದ ಒಂದು ಎಪಿಸೋಡ್ ಇರಲಿದೆ. ಇದಲ್ಲದೆ, ಉಳಿದ ಎಪಿಸೋಡ್ ಗಳು ದೇಶದ ಬೇರೆ ಪ್ರಮುಖ ಘಟನೆಗಳನ್ನು ಆಧರಿಸಿ ಇರಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.