ಬೆಂಗಳೂರು :ಇತ್ತೀಚೆಗೆ ನಡೆಯುತ್ತಿರುವ ಬಹುತೇಕ ಅಪರಾಧಗಳು ಸೈಬರ್ ಗೆ ಸಂಬಂಧಿಸಿದ್ದಾಗಿದೆ.ಯುಪಿಐ ಫ್ರಾಡ್ ಮೂಲಕ ಜನರ ಹಣವನ್ನು ದೋಚುತ್ತಿರುವ ಅನೇಕ ಪ್ರಕರಣಗಳು ಇತ್ತೀಚಿಗೆ ದಾಖಲಾಗುತ್ತಿವೆ.ಸೈಬರ್ ಕ್ರಿಮಿನಲ್‌ಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಿದ್ದಾರೆ.ಇತ್ತೀಚಿಗೆ ವಂಚಕರು ಈ ಐದು ರೀತಿಯಲ್ಲಿ ಜನರ ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡುತ್ತಿರುವುದಾಗಿ ವರದಿಯಾಗಿದೆ. 


COMMERCIAL BREAK
SCROLL TO CONTINUE READING

ನಕಲಿ ಸ್ಕ್ರೀನ್‌ಶಾಟ್‌ :
ವಂಚಕರು ನಕಲಿ ಸ್ಕ್ರೀನ್ ಶಾಟ್ ಗಳನ್ನೂ ಸೃಷ್ಟಿಸಿ ನಿಮಗೆ ಹಣ ಕಳುಹಿಸಿರುವುದಾಗಿ ಹೇಳಿ ನಿಮ್ಮನ್ನು ಮೋಸಗೊಳಿಸುತ್ತಾರೆ.ಈ ನಕಲಿ ಸ್ಕ್ರೀನ್ ಶಾಟ್ ಗಳನ್ನು ತೋರಿಸಿ ನಿಮ್ಮ ಬಳಿಯಿಂದ ಹಣ ಕೀಳುತ್ತಾರೆ.  


ಸ್ನೇಹಿತರಂತೆ ಮೋಸ :
ಕೆಲವರು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಂತೆ ನಟಿಸಿ ನಿಮ್ಮನ್ನು ಮೋಸಗೊಳಿಸುತ್ತಾರೆ.ತುಂಬಾ ಎಮೆರ್ಜೆನ್ಸಿ ಎಂದು ಹಣ ಕೇಳುತ್ತಾರೆ. 


ಇದನ್ನೂ ಓದಿ : ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿ


ನಕಲಿ UPI QR ಕೋಡ್ : 
ನಕಲಿ UPI QR ಕೋಡ್ ಮೂಲಕ ನಿಮ್ಮ ಖಾತೆಯಲ್ಲಿರುವ ಎಲ್ಲಾ ಮಾಹಿತಿಯನ್ನು ಕದಿಯುತ್ತಾರೆ.ಈ ಮೂಲಕ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಕೂಡಾ ದೋಚುತ್ತಾರೆ. 


ಅಪಾಯಕಾರಿ ಅಪ್ಲಿಕೇಶನ್‌ಗಳು : 
ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಪರದೆಯ ಮೇಲೆ ಕಣ್ಣಿಡುತ್ತವೆ.ಈ ಅಪ್ ಗಳು  ನಿಮ್ಮ UPI ಪಿನ್ ಮತ್ತು OTP ಯಂತಹ ಪ್ರಮುಖ ಸಂಖ್ಯೆಗಳನ್ನು ಕದಿಯಬಹುದು.


ಫೇಕ್ ರಿಕ್ವೆಸ್ಟ್  :
ಕೆಲವು ಜನರು ನಿಮ್ಮ UPI ಅಪ್ಲಿಕೇಶನ್‌ನಲ್ಲಿ ನಕಲಿ ರಿಕ್ವೆಸ್ಟ್ ಗಳನ್ನೂ ಕಳುಹಿಸುತ್ತಾರೆ. ಹಣದ ಅವಶ್ಯಕತೆ ಇದೆ ಹಾಗಾಗಿ ನಿಮ್ಮ ಸಹಾಯ ಬೇಕು ಎಂದು ಫೇಕ್ ರಿಕ್ವೆಸ್ಟ್ ಗಳನ್ನೂ ಕಳುಹಿಸುತ್ತಾರೆ. 


ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!


ನಿಮ್ಮ ಹಣವನ್ನು ಉಳಿಸಿಕೊಳ್ಳುವುದು ಹೇಗೆ ? : 


ನಕಲಿ ಸ್ಕ್ರೀನ್‌ಶಾಟ್‌ಗಳನ್ನು ನಂಬಬೇಡಿ. ಸರಿಯಾಗಿ ಪರಿಶೀಲನೆ ಮಾಡದೆ ಯಾರಿಗೂ ಹಣ ಕಳುಹಿಸಬೇಡಿ. ಮಾನ್ಯವಾದ QR ಕೋಡ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡಿ.  UPI ಪಿನ್, OTP ಅಥವಾ ಇತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.