ಸಾಕೆಟ್ನಲ್ಲಿ ಈ ಡಿವೈಸ್ ಫಿಕ್ಸ್ ಮಾಡಿದ್ರೆ ಕರೆಂಟ್ ಇಲ್ಲದಿದ್ರೂ ವೈ-ಫೈ ಕಾರ್ಯನಿರ್ವಹಿಸುತ್ತೆ!
Wi-Fi Router Tips: ಪವರ್ ಕಟ್ ಆದ ನಂತರ ವೈ-ಫೈ ಕೂಡ ಆಫ್ ಆಗುತ್ತೆ. ಇದರಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮನೆಯಲ್ಲಿ ವೈ-ಫೈ ಇದ್ದರೂ ಸಹ ನಮಗೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದರೆ, ಸಾಕೆಟ್ನಲ್ಲಿ ಒಂದು ಅಗ್ಗದ ಸಾಧನವನ್ನು ಅಳವಡಿಸುವುದರಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಯಾವುದಾ ಡಿವೈಸ್ ಎಂದು ತಿಳಿಯೋಣ...
Wi-Fi Router Tips: ಕರೋನಾದಿಂದಾಗಿ ಎಲ್ಲೆಡೆ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಮನೆಯಿಂದ ಕೆಲಸ ಮಾಡಲು ವೈ-ಫೈ ಬಹಳ ಮುಖ್ಯ. ಆದರೆ ವಿದ್ಯುತ್ ಕಡಿತವಾದಾಗ ವೈ-ಫೈ ಕೂಡ ಆಫ್ ಆಗುತ್ತದೆ. ಪವರ್ ಆನ್ ಆದ ಕೆಲವೇ ನಿಮಿಷಗಳಲ್ಲಿ ವೈ-ಫೈ ಮತ್ತೆ ಆನ್ ಆಗುತ್ತದೆ. ಇದರಿಂದಾಗಿ ಕೆಲಸ ಮಾಡಲು ತೊಂದರೆ ಆಗುತ್ತದೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ನೀವು ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ವಾಸ್ತವವಾಗಿ, ಪವರ್ ಕಟ್ ಆದ ಸಂದರ್ಭದಲ್ಲಿ Wi-Fi ಅಡಚಣೆಯನ್ನು ತಪ್ಪಿಸಲು ಅನೇಕ ಜನರು ಇನ್ವರ್ಟರ್ ಅನ್ನು ಬಳಸುತ್ತಾರೆ. ಆದರೆ ಎಲ್ಲರಿಗೂ ಅಷ್ಟು ಸೌಕರ್ಯವಿರುವುದಿಲ್ಲ. ಆದರೆ ನಿಮ್ಮ ಈ ಸಮಸ್ಯೆಯಿಂದ ಪಾರಾಗಲು ಒಂದು ಡಿವೈಸ್ ನಿಮಗೆ ಸಹಾಯಕವಾಗಬಹುದು. ಇದು ವೈ-ಫೈ ರೂಟರ್‌ನೊಂದಿಗೆ ಕಾರ್ಯನಿರ್ವಹಿಸುವ ಮಿನಿ ಯುಪಿಎಸ್ ಆಗಿದೆ. ಈ ಸಾಧನದ ಬಗ್ಗೆ ತಿಳಿಯೋಣ...
ಇದನ್ನೂ ಓದಿ- ಚಾರ್ಜರ್ ಬಿಡಿ! ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್
ರೂಟರ್‌ಗಾಗಿ ಜಿಂಕ್ ಯುಪಿಎಸ್:
ಈ ಸಾಧನದ ಹೆಸರು Zinq UPS for Router. ಅದರ ಬೆಲೆ 2,999 ರೂ. ಆಗಿದ್ದರೂ, ಇದನ್ನು ಅಮೆಜಾನ್ ನಿಂದ ಅಗ್ಗವಾಗಿ ಖರೀದಿಸಬಹುದು. ಅಮೆಜಾನ್ನಲ್ಲಿ ಇದನ್ನು 53% ರಿಯಾಯಿತಿಯೊಂದಿಗೆ 1,399 ರೂ.ಗಳಿಗೆ ಖರೀದಿಸಬಹುದು. ಇದು Wi-Fi ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್ ಆಗಿದೆ. ಇದು ಸಾಕಷ್ಟು ಲೈಟ್ ಮತ್ತು ಸಾಂದ್ರವಾಗಿರುತ್ತದೆ.
ಇದನ್ನೂ ಓದಿ- WhatsApp Rules: ವಾಟ್ಸಾಪ್‌ನಲ್ಲಿ ಮಿಸ್ ಆಗಿ ಇಂತಹ ಸಂದೇಶ ಕಳುಹಿಸಿದರೂ ಜೈಲು ಪಾಲಾಗುತ್ತೀರಿ, ಹುಷಾರ್!
ರೂಟರ್‌ಗಾಗಿ ಜಿಂಕ್ ಯುಪಿಎಸ್: ಇದು ಹೇಗೆ ಕೆಲಸ ಮಾಡುತ್ತದೆ?
ಇದು ಮಿನಿ ಯುಪಿಎಸ್ ಆಗಿದೆ, ಇದು 12V ವೈಫೈ ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಿದ್ಯುತ್ ಸ್ಥಗಿತಗೊಂಡ ನಂತರ ಸುಮಾರು 4 ಗಂಟೆಗಳ ಪವರ್ ಬ್ಯಾಕಪ್ ನೀಡುತ್ತದೆ. ಇದು ನಿಮ್ಮ ಅಸ್ತಿತ್ವದಲ್ಲಿರುವ ಅಡಾಪ್ಟರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ಚಾರ್ಜಿಂಗ್ ತನ್ನ UPS ಬ್ಯಾಟರಿಯನ್ನು ಬ್ಯಾಟರಿ ನಿರ್ವಹಣೆಯೊಂದಿಗೆ ಸ್ವಯಂಚಾಲಿತವಾಗಿ ಚಾರ್ಜ್ ಮಾಡುತ್ತದೆ. ಇದರ ಅನುಸ್ಥಾಪನೆಯು ಸಾಕಷ್ಟು ಸುಲಭವಾಗಿದೆ. ಅಲ್ಲದೆ ಇದು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.