Air Cooler Offers And Discounts: ಕೇವಲ 500 ರೂ.ಗೆ ಕಾಶ್ಮೀರದಂತೆ ಕೋಣೆಯನ್ನು ತಂಪಾಗಿಸುತ್ತಂತೆ ಈ ಏರ್ ಕೂಲರ್ಗಳು
Air Cooler Offers And Discounts: ಬೇಸಿಗೆ ಕಾಲದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸಲು ಯೋಚಿಸುತ್ತಿದ್ದೀರಾ... ನಾವು ನಿಮಗೆ ಅಂತಹ 5 ಏರ್ ಕೂಲರ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಏರ್ ಕೂಲರ್ಗಳನ್ನು ನೀವು ತುಂಬಾ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
ಏರ್ ಕೂಲರ್ ಕೊಡುಗೆಗಳು ಮತ್ತು ರಿಯಾಯಿತಿಗಳು: ಭಾರತದಲ್ಲಿ ಈ ವರ್ಷ ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಮೀರಿದೆ. ಹೀಗಿರುವಾಗ ಸಹಜವಾಗಿಯೇ ಬಹುತೇಕ ಜನರು ಕೂಲರ್, ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ, ಬೇಸಿಗೆಯ ಆಗಮನದೊಂದಿಗೆ ಕೂಲರ್‌ಗಳ ಬೆಲೆಯೂ ಹೆಚ್ಚಾಗಿರುವುದು ಹಲವರಿಗೆ ತಲೆನೋವಾಗಿದೆ. ಆದರೆ ಈ ಬಗ್ಗೆ ಚಿಂತಿಸಬೇಡಿ, ಈ ಲೇಖನದಲ್ಲಿ ನಾವು ಅತ್ಯಂತ ಕಡಿಮೆ ಬೆಲೆಯಲ್ಲಿ ಬ್ರಾಂಡ್ ಕೂಲರ್ ಅನ್ನು ಹೇಗೆ ಖರೀದಿಸಬಹುದು. ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಕೂಲರ್ ಅನ್ನು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಉಷಾ 100 ಎಲ್ ಡೆಸರ್ಟ್ ಏರ್ ಕೂಲರ್:
ಉಷಾ 100 ಎಲ್ ಡೆಸರ್ಟ್ ಏರ್ ಕೂಲರ್ ನಿಮಗೆ ಉತ್ತಮವಾಗಿದೆ ಎಂದು ಸಾಬೀತುಪಡಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ. ಉಷಾ ಏರ್ ಕೂಲರ್‌ನ ಬಿಡುಗಡೆ ಬೆಲೆ 17,390 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 12,980 ರೂ.ಗೆ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಿಂದ ಇಎಂಐ ನಲ್ಲಿ ಕೂಲರ್ ಅನ್ನು ಖರೀದಿಸಿದರೆ, ನೀವು 36 ತಿಂಗಳವರೆಗೆ ತಿಂಗಳಿಗೆ 450 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಓರಿಯಂಟ್ ಎಲೆಕ್ಟ್ರಿಕ್ 65 ಎಲ್ ಡೆಸರ್ಟ್ ಏರ್ ಕೂಲರ್ :
ಓರಿಯಂಟ್ ಎಲೆಕ್ಟ್ರಿಕ್ 65 ಎಲ್ ಡೆಸರ್ಟ್ ಏರ್ ಕೂಲರ್ ಕೂಡ ನಿಮಿಷಗಳಲ್ಲಿ ತಂಪಾದ ಗಾಳಿಯನ್ನು ನೀಡುತ್ತದೆ. ಕೂಲರ್‌ನಲ್ಲಿ ಮೂರು ಆಯ್ಕೆಗಳು ಲಭ್ಯವಿವೆ, ಇದರಿಂದ ನೀವು ಹೆಚ್ಚಿನ, ಮಧ್ಯಮ ಮತ್ತು ಕಡಿಮೆ ಮಟ್ಟದಲ್ಲಿ ಕೂಲರ್ ಅನ್ನು ಚಲಾಯಿಸಬಹುದು. ಕೂಲರ್‌ನ ಬಿಡುಗಡೆಯ ಬೆಲೆ 15,000 ರೂ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ರೂ.11,800ಕ್ಕೆ ಲಭ್ಯವಿದೆ. ನೀವು ಎಚ್‌ಡಿಎಫ್‌ಸಿ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಕೂಲರ್ ಅನ್ನು ಖರೀದಿಸಿದರೆ, ನೀವು 24 ತಿಂಗಳವರೆಗೆ ತಿಂಗಳಿಗೆ 573 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- EV charging stations: ಶೀಘ್ರದಲ್ಲೇ ರಾಜ್ಯದಲ್ಲಿ 1000 EV ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ
ಸಿಂಫನಿ 125 ಎಲ್ ಡೆಸರ್ಟ್ ಏರ್ ಕೂಲರ್:
ಸಿಂಫನಿ 125 ಎಲ್ ಡೆಸರ್ಟ್ ಏರ್ ಕೂಲರ್ 1000 ಚದರ ಅಡಿಯ ಕೋಣೆಯನ್ನು ಸಂಪೂರ್ಣವಾಗಿ ತಂಪಾಗಿಸುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದನ್ನು ಮತ್ತೆ ಮತ್ತೆ ನೀರಿನಿಂದ ತುಂಬಿಸಬೇಕಾಗಿಲ್ಲ. ಇದರ ತೂಕ ಕೂಡ ಕೇವಲ 24 ಕೆ.ಜಿ. ಇದನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಬಹುದು. ನೀರು ಖಾಲಿಯಾದಾಗ, ಅಲಾರಂ ರಿಂಗಣಿಸಲು ಪ್ರಾರಂಭಿಸುತ್ತದೆ. ಸಿಂಫನಿ ಕೂಲರ್‌ನ ಲಾಂಚ್ ಬೆಲೆ ರೂ. 21,990, ಆದರೆ ಅಮೇಜಾನ್ನಲ್ಲಿ ಕೂಲರ್ ರೂ. 19,990ಕ್ಕೆ ಲಭ್ಯವಿದೆ. ಕೂಲರ್‌ಗೆ 2,000 ರೂಪಾಯಿ ರಿಯಾಯಿತಿ ಸಿಗುತ್ತಿದೆ. ನೀವು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಕೂಲರ್ ಅನ್ನು ಖರೀದಿಸಿದರೆ, ನಂತರ ನೀವು 24 ತಿಂಗಳವರೆಗೆ ತಿಂಗಳಿಗೆ ರೂ. 969 ಪಾವತಿಸಬೇಕಾಗುತ್ತದೆ.
ಫೆಲ್ಟ್ರಾನ್ 100 ಲೀ. ಡಸರ್ಟ್ ಏರ್ ಕೂಲರ್:
ಫೆಲ್ಟ್ರಾನ್ 100 ಲೀ. ಡೆಸರ್ಟ್ ಏರ್ ಕೂಲರ್‌ನ ಪ್ರಾರಂಭಿಕ ಬೆಲೆ ರೂ. 16,990 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ. 16,065 ಗೆ ಲಭ್ಯವಿದೆ. ನೀವು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 1,250 ರೂ .ರಿಯಾಯಿತಿ ಸಿಗುತ್ತದೆ. ನೀವು ಎಚ್‌ಡಿಎಫ್‌ಸಿ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಕೂಲರ್ ಅನ್ನು ಖರೀದಿಸಿದರೆ, ನಂತರ ನೀವು 24 ತಿಂಗಳವರೆಗೆ ಪ್ರತಿ ತಿಂಗಳು 779 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- Smartphone Tips: ಇನ್ಮುಂದೆ ಥರ್ಡ್ ಪಾರ್ಟಿ ಆಪ್ ಮೂಲಕ ಕಾಲ್ ರೆಕಾರ್ಡಿಂಗ್ ಅನುಮತಿಸಲ್ಲ ಗೂಗಲ್!
ಕ್ರೋಂಪ್ಟನ್ 100 ಲೀ. ಡೆಸರ್ಟ್ ಏರ್ ಕೂಲರ್:
ಕ್ರೋಂಪ್ಟನ್ 100 ಲೀ. ಡೆಸರ್ಟ್ ಏರ್ ಕೂಲರ್ನ ಬಿಡುಗಡೆಯ ಬೆಲೆ ರೂ. 21,500 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ. 13,760 ಕ್ಕೆ ಲಭ್ಯವಿದೆ. ನೀವು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 1,250 ರೂ ರಿಯಾಯಿತಿ ಸಿಗುತ್ತದೆ. ನೀವು ಎಚ್‌ಡಿಎಫ್‌ಸಿ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಕೂಲರ್ ಅನ್ನು ಖರೀದಿಸಿದರೆ, ನಂತರ ನೀವು 24 ತಿಂಗಳವರೆಗೆ ತಿಂಗಳಿಗೆ 668 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.