Flipkart Big Billion Days 2022 Sale: ಟಾಪ್ ಬ್ರಾಂಡ್ ಫೋನ್ಗಳ ಮೇಲೆ ಭಾರೀ ರಿಯಾಯಿತಿ
Flipkart Big Billion Days 2022 sale : ಆನ್‌ಲೈನ್ ಶಾಪಿಂಗ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಬಹಳ ಒಳ್ಳೆಯ ಸುದ್ದಿ. ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ.
Flipkart Big Billion Days 2022 sale : ಆನ್‌ಲೈನ್ ಶಾಪಿಂಗ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಬಹಳ ಒಳ್ಳೆಯ ಸುದ್ದಿ. ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ. ಈ ಎರಡೂ ಸೇಲ್ ನಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಮತ್ತು ಆಫರ್ ನೀಡುವ ನಿರೀಕ್ಷೆಯಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಎರಡೂ ಇ-ಕಾಮರ್ಸ್ ದೈತ್ಯರು ಮೊಬೈಲ್ ಬ್ರಾಂಡ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತವೆ.
Poco X4 Pro 5G :
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ 2022 ರಲ್ಲಿ, ನೀವು Poco X4 Pro 5G ಫೋನ್ ಅನ್ನು 13,999 ರೂ.ಗೆ ಖರೀದಿಸಬಹುದು. ಈ ಫೋನ್ ಮೇಲೆ 4,000 ರೂಪಾಯಿ ರಿಯಾಯಿತಿ ಸಿಗುತ್ತಿದೆ. Poco X4 Pro 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಿಂದ ನಡೆಸಲ್ಪಡುವ 120Hz ಸೂಪರ್ AMOLED ಪರದೆಯನ್ನು ಹೊಂದಿದೆ. ಅಲ್ಲದೆ, ಇದು 67W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ : ಮೊಬೈಲ್‌ನಿಂದ MMS ಹೀಗೆ ಲೀಕ್ ಆಗುತ್ತೆ! ನಿಮ್ಮ ಈ ತಪ್ಪು ಜೀವನವನ್ನೇ ಹಾಳುಮಾಡುತ್ತೆ
ನಥಿಂಗ್ ಫೋನ್ 1 :
ಈ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ನಥಿಂಗ್ ಫೋನ್ 1 ಮತ್ತು ಗೂಗಲ್ ಪಿಕ್ಸೆಲ್ 6ಎ ಕೂಡಾ ಭಾರಿ ರಿಯಾಯಿತಿಯೊಂದಿಗೆ ಮಾರಾಟವಾಗಲಿದೆ. ನಥಿಂಗ್ ಫೋನ್ 1 ಆರಂಭಿಕ ಬೆಲೆ 28,999 ರೂ . ಆಗಿದ್ದು, Google Pixel 6A 27,699 ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
Realme 9 Pro 5g
21,999 ರೂ. ಬೆಲೆಯ ಈ ಫೋನ್ 14,999ಕರೂ. ಗೆ ಮಾರಾಟವಾಗಲಿದೆ. ಕಂಪನಿಯು ಈ 5G ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಅನ್ನು ನೀಡುತ್ತದೆ. ವಿಡಿಯೋ ಚಿತ್ರೀಕರಣಕ್ಕಾಗಿ, ಫೋನ್ ಹಿಂಭಾಗದಲ್ಲಿ 64-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನ್ 6.6-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 5000mAh ಬ್ಯಾಟರಿಯಿಂದ ಚಾಲಿತವಾಗಿದೆ.
ಇದನ್ನೂ ಓದಿ : ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುವವರೇ ಎಚ್ಚರ! ಮೈಮೆರೆತರೆ ಅಪಾಯ ಫಿಕ್ಸ್!ಹಳೆಯ ಸ್ಮಾರ್ಟ್‌ಫೋನ್ ಕೊಟ್ಟು ಹೊಸ ಫೋನ್ ಖರೀದಿ :
ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ತಮ್ಮ ಹಳೆಯ ಸ್ಮಾರ್ಟ್‌ಫೋನ್ ಮೇಲೆ 17,000 ರೂಪಾಯಿ ರಿಯಾಯಿತಿಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2022 ರಲ್ಲಿ ಲಭ್ಯವಿರುವ ಎಲ್ಲಾ ಕೊಡುಗೆಗಳನ್ನು ಸೇರಿಸಿದರೆ, ದುಬಾರಿ ಎಂದು ಭಾವಿಸಲಾದ Apple iPhone 13 ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಓಪನ್ ಬಾಕ್ಸ್ ಡೆಲಿವರಿ ಸೌಲಭ್ಯ :
ಫ್ಲಿಪ್‌ಕಾರ್ಟ್ ಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಹೆಚ್ಚಿನ ಬೆಲೆಯ ವಸ್ತುಗಳಿಗೆಓಪನ್ ಬಾಕ್ಸ್ ಡೆಲಿವರಿ ಸೌಲಭ್ಯಯನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಅಡಿಯಲ್ಲಿ, ವಿತರಣಾ ಪಾಲುದಾರನು ಗ್ರಾಹಕರ ಮುಂದೆ ಸರಕುಗಳ ಪೆಟ್ಟಿಗೆಯನ್ನು ತೆರೆಯುತ್ತಾನೆ. ಗ್ರಾಹಕರು ಆರ್ಡರ್ ಮಾಡಿದ ಸರಕುಗಳು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಡೆಲಿವರಿ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಗ್ರಾಹಕರು ಹೊಂದಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.