Auto Ride for Rs 1 in Bangalore: ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದ ದುಬಾರಿ ನಗರಗಳಲ್ಲಿ ಒಂದು. ಆದರೂ, ನೀವಿಲ್ಲಿ ಪೀಕ್ ಹವರ್‌ನಲ್ಲಿ ಕೇವಲ 1 ರೂ.ಗೆ ಆಟೋ ರೈಡ್ ಬುಕ್ ಮಾಡಬಹುದು. ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದ್ರೂ ಆಟೋ ದರ ಕೇವಲ 1 ರೂ. ಮಾತ್ರ ಎಂಬುದು ವಿಶೇಷ.  ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್ ಬೆಂಗಳೂರಿಗರಿಗೆ ಈ ಕೊಡುಗೆ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಹೌದು, ಭಾರತದಲ್ಲಿ ಮುಂಬೈ, ದೆಹಲಿ-ಎನ್‌ಸಿ‌ಆರ್ ಹೊರತುಪಡಿಸಿ ಅತಿಹೆಚ್ಚು ಟ್ರಾಫಿಕ್ ಗೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಬೇಕೆಂದರೆ ಬಿ‌ಎಂಟಿ‌ಸಿ, ನಮ್ಮ ಮೆಟ್ರೋ ಜೊತೆಗೆ ಆಟೋ ಅವಲಂಬಿಸುವವರ ಸಂಖ್ಯೆಯೂ ಅಧಿಕವಾಗಿದೆ. ಇದರೊಂದಿಗೆ ರಾಜ್ಯದ ಬೇರೆ ಭಾಗಗಳಿಗಿಂತ ಆಟೋ ದರವೂ ಕೊಂಚ ಹೆಚ್ಚಾಗಿಯೇ ಇದೆ. ಮೀಟರ್ ದರಕ್ಕಿಂತ ಆಟೋ ಚಾಲಕರ ಡಿಮ್ಯಾಂಡಿಂಗ್ ರೇಟ್ ತುಂಬಾನೇ ಜಾಸ್ತಿ. ಈ ಎಲ್ಲಾ ಜಂಜಾಟಗಳಿಂದ ಜನರಿಗೆ ಪರಿಹಾರ ನೀಡುವ ದೃಷ್ಟಿಯಿಂದ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್ ಬಂಪರ್ ಕೊಡುಗೆಯೊಂದನ್ನು ನೀಡಿದೆ. ಇದಕ್ಕೆ ಭಾರೀ ರೆಸ್ಪಾನ್ಸ್ ಕೂಡ ಸಿಕ್ಕಿದ್ದು ಅಗ್ಗದ ಆಟೋ ರೈಡ್ ಗಾಗಿ ಜನ ಕ್ಯೂ ನಿಲ್ಲುತ್ತಿದ್ದಾರೆ. 


ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!


ಏನಿದು ಕೊಡುಗೆ? 
ವಾಸ್ತವವಾಗಿ, ಫ್ಲಿಪ್‌ಕಾರ್ಟ್ ಆಟೋ ರಿಕ್ಷಾ ಚಾಲಕರ ಜೊತೆ ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದ್ದು ಇದರ ಭಾಗವಾಗಿ ಪ್ರಯಾಣಿಕರಿಗೆ ಕೇವಲ 1 ರೂ.ಗೆ ಆಟೋ ರೈಡ್ ಭಾಗ್ಯ ದೊರೆಯುತ್ತಿದೆ. 


ಈಗಾಗಲೇ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ವೇಳೆ ಯುಪಿಐ ಪಾವತಿ ಉತ್ತೇಜಿಸುವ ಉದ್ದೇಶದಿಂದ ಹಾಗೂ ಯುಪಿಐ ಪಾವತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ವೆಬ್ಸೈಟ್ ಮಾರಾಟದ ಭಾಗವಾಗಿ ಈ ಕೊಡುಗೆ ಅಭಿಯಾನವನ್ನು ಘೋಷಿಸಿದೆ. 


ಕೇವಲ 1 ರೂ.ಗೆ ಆಟೋ ರೈಡ್ ಅಭಿಯಾನ: 
ಫ್ಲಿಪ್‌ಕಾರ್ಟ್ ಆಟೋಚಾಲಕರು ಮತ್ತು ಪ್ರಯಾಣಿಕರಲ್ಲಿ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಅರಿವು ಮೂಡಿಸಿ ಯುಪಿಐ ಡಿಜಿಟಲ್ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇವಲ 1 ರೂಪಾಯಿ ಆಟೋ ರೈಡ್ ಅಭಿಯಾನವನ್ನು ಆರಂಭಿಸಿದೆ.  ಇದಕ್ಕಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಕೇವಲ 1 ರೂ.ಗೆ ಆಟೋ ಸೇವೆ ಕಲ್ಪಿಸುವ ಕೇಂದ್ರಗಳನ್ನು ಕೂಡ ಟೆತೆಯಲಾಗಿದೆ. 


ಇದನ್ನೂ ಓದಿ- ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ


ಪೀಕ್ ಹವರ್‌ನಲ್ಲಿ ಮಾತ್ರ ಈ ಸೇವೆ ಲಭ್ಯ, ಆಟೋ ಚಾಲಕರಿಗೆ ಲಾಭ: 
ಫ್ಲಿಪ್‌ಕಾರ್ಟ್ ನಡೆಸುತ್ತಿರುವ ಈ ಅಭಿಯಾನದ ಪ್ರಯೋಜನವನ್ನು ಬೆಳಿಗ್ಗೆ ಮತ್ತು ಸಂಜೆ ಪೀಕ್ ಹವರ್‌ನಲ್ಲಿ ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ, ಈ ಅಭಿಯಾನದಲ್ಲಿ ಆಟೋ ಚಾಲಕರಿಗೆ ಸ್ವತಃ ಫ್ಲಿಪ್‌ಕಾರ್ಟ್ ಯುಪಿಐ ಪಾವತಿ ಸೇವೆ ನೀಡುತ್ತಿದ್ದು, ಇದರಿಂದ ಆಟೋ ಚಾಲಕರು ನಗದು ವಹಿವಾಟಿನ ಬದಲಿಗೆ ಆತಂಕ ರಹಿತವಾಗಿ ಯುಪಿಐ ಪಾವತಿ ಮೂಲಕ ವಹಿವಾಟು ನಡೆಸುವಂತೆ ಜಾಗೃತಿ ಮೂಡಿಸುತ್ತಿದೆ.  


ಆಟೋ ಚಾಲಕರ ಸಹಭಾಗಿತ್ವದಲ್ಲಿ ಫ್ಲಿಪ್‌ಕಾರ್ಟ್ ನಡೆಸುತ್ತಿರುವ ಈ ಅಭಿಯಾನಕ್ಕೆ ಸಾರ್ವಜನಿಕರೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು 1 ರೂ.ಗೆ ಆಟೋ ರೈಡ್ ಗಾಗಿ ಕ್ಯೂ ನಲ್ಲಿ ನಿಂತು ಆಟೋ ಬುಕ್ ಮಾಡುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.