ನವದೆಹಲಿ : ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ (flipkart electronic sale) ಜನವರಿ 27 ರಿಂದ ಆರಂಭವಾಗಿದೆ. ಇದರಲ್ಲಿ  ಎಲ್ಲಾ ಬ್ರಾಂಡ್‌ಗಳ ಬೇರೆ ಬೇರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಈ ಸೇಲ್ ನಲ್ಲಿ TCL ಯ  50-ಇಂಚಿನ ಸ್ಮಾರ್ಟ್ ಟಿವಿಯನ್ನು  62,990  ರೂಪಾಯಿ ಬದಲಿಗೆ ಕೇವಲ 22,328 ರೂ. ಗಳಿಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಅಗ್ಗದ ಬೆಲೆಗೆ ಖರೀದಿಸಿ 50-ಇಂಚಿನ ಸ್ಮಾರ್ಟ್ ಟಿವಿ : 
TCL P615 126cm (50 inch) Ultra HD (4K) LED Smart TV (50P615)   ಮಾರುಕಟ್ಟೆಯಲ್ಲಿ 62,990 ರೂ. ಗೆ ಸಿಗುತ್ತಿದೆ. ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ನಲ್ಲಿ  (flipkart electronic sale) ಈ ಟಿವಿ ಮೇಲೆ  44% ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿಯ ನಂತರ ಟಿವಿಯ ಬೆಲೆ 34,990 ರೂ.ಗೆ ಇಳಿಯಲಿದೆ. ಡೆಲಿವರಿ ಆದ ಎರಡು ದಿನಗಳಲ್ಲಿ ಈ ಟಿವಿಯನ್ನು  ಉಚಿತವಾಗಿ ಗ್ರಾಹಕರ ಮನೆಯಲ್ಲಿ ಅಳವಡಿಸಲಾಗುವುದು. ಫ್ಲಿಪ್‌ಕಾರ್ಟ್ (Flipkart) ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್  (Credit card) ಬಳಸಿ ಈ ಟಿವಿಗೆ ಪಾವತಿ ಮಾಡಿದರೆ, 5% ಕ್ಯಾಶ್‌ಬ್ಯಾಕ್ ಅಂದರೆ 1,662 ರೂ.  ಅನ್ನು ಪಡೆಯಬಹುದು. ಇದರ ನಂತರ ಸ್ಮಾರ್ಟ್ ಟಿವಿಯನ್ನು 33,328 ರೂ ಗೆ ಖರೀದಿಸುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ :  ವಾಟ್ಸಾಪ್‌ನಲ್ಲಿ ಯಾರಾದರೂ ನಿಮ್ಮನ್ನು Block ಮಾಡಿದ್ದಾರಾ? Unblock ಮಾಡುವ ಟ್ರಿಕ್ ಇಲ್ಲಿದೆ ನೋಡಿ


ಎಕ್ಸ್‌ಚೇಂಜ್ ಆಫರ್‌ ಮೂಲಕ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು :   
TCL P615 126cm (50 inch) Ultra HD (4K) LED Smart TV (50P615)) ಡೀಲ್‌ನಲ್ಲಿ ಎಕ್ಸ್‌ಚೇಂಜ್ ಆಫರ್ (exchange offer) ಅನ್ನು ಕೂಡಾ ನೀಡಲಾಗುತ್ತಿದೆ.  ಹಳೆಯ ಟಿವಿಗೆ ಬದಲಾಗಿ  ಈ ಟಿವಿಯನ್ನು ಖರೀದಿಸಿದರೆ, 11 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ,  ಈ ಸ್ಮಾರ್ಟ್ ಟಿವಿಯ ಬೆಲೆಯು  33,328 ರೂ. ಯಿಂದ 22,328ರೂ.ಗೆ ಇಳಿಯಲಿದೆ.   


ಸ್ಮಾರ್ಟ್ ಟಿವಿಯ ಅದ್ಭುತ ವೈಶಿಷ್ಟ್ಯಗಳು :
TCL P615 126cm (50 inch) Ultra HD (4K) LED Smart TV (50P615) ಅಲ್ಟ್ರಾ HD 4K LED ಸ್ಮಾರ್ಟ್ ಟಿವಿ ಆಗಿದೆ. ಈ ಟಿವಿಯಲ್ಲಿ, 50-ಇಂಚಿನ ಅಲ್ಟ್ರಾ HD 4K LED ಡಿಸ್ಪ್ಲೇ ಮತ್ತು 3,840 x 2,160 ಪಿಕ್ಸೆಲ್ ರೆಸಲ್ಯೂಶನ್ ಇರಲಿದೆ. ಈ ಸ್ಮಾರ್ಟ್ ಟಿವಿ 24W ಸೌಂಡ್ ಔಟ್‌ಪುಟ್ ಮತ್ತು 60Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿ Netflix, Amazon Prime Video ಮತ್ತು YouTube ನಂತಹ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. 


ಇದನ್ನೂ ಓದಿ :  Republic Day Sale 2022: ಕೇವಲ 500 ರೂ.ಗೆ ಖರೀದಿಸಿ, ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್ , ಈ ಸುವರ್ಣಾವಕಾಶ ಇಂದು ಮಾತ್ರ


 ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ಜನವರಿ 27 ರಂದು ಪ್ರಾರಂಭವಾಗಿದ್ದು, ಜನವರಿ 31 ರವರೆಗೆ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.