ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್: ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭವಾಗಿದೆ. ಈ ಸೇಲ್ ಮೇ 24 ರಿಂದ ಆರಂಭವಾಗಿದ್ದು, ಮೇ 29 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಸೇಲ್‌ನಲ್ಲಿ ಸ್ಮಾರ್ಟ್ ಟಿವಿ ವಿಜೃಂಭಿಸುತ್ತಿದೆ. 32 ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ಡೀಲ್‌ಗಳು ಲಭ್ಯವಿವೆ. 18,000 ಮೌಲ್ಯದ ಕೊಡಾಕ್ 32-ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 500 ರೂ.ಗಳಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್: KODAK 7XPRO ಸರಣಿ 32-ಇಂಚಿನ ಸ್ಮಾರ್ಟ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು
KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ ರೂ. 18,499 ಆಗಿದೆ.  ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು ರೂ  11,499 ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಟಿವಿಯಲ್ಲಿ ಸಂಪೂರ್ಣ 37% ರಿಯಾಯಿತಿ ಲಭ್ಯವಿದೆ. ಇದಲ್ಲದೆ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಅದರ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.


ಇದನ್ನೂ ಓದಿ- WhatsApp ಬಳಕೆದಾರರಿಗಾಗಿ ಬರಲಿದೆ ಬ್ಯಾಂಗ್ ವೈಶಿಷ್ಟ್ಯ


ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: KODAK 7XPRO ಸರಣಿ 32-ಇಂಚಿನ ಸ್ಮಾರ್ಟ್ ಟಿವಿ ಎಕ್ಸ್‌ಚೇಂಜ್ ಆಫರ್:
KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ 10,975 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಟಿವಿಯನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 10,975 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ನೀವು ಸಂಪೂರ್ಣ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾದರೆ ಟಿವಿಯ ಬೆಲೆ 524 ರೂ.ಗಳಿಗೆ ಇಳಿಕೆ ಆಗಲಿದೆ.


ಇದನ್ನೂ ಓದಿ- 1000 ರೂ.ಗಿಂತ ಕಡಿಮೆ ಮೌಲ್ಯದ ವಾಟರ್‌ಪ್ರೂಫ್ ಇಯರ್‌ಬಡ್‌.. ನಿಮಿಷದಲ್ಲೇ ಚಾರ್ಜ್ ಆಗುತ್ತೆ!!


ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: KODAK 7XPRO ಸರಣಿ 32-ಇಂಚಿನ ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್:-
ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಳ್ಳಲು ಬಯಸದಿದ್ದರೆ, ಟಿವಿಯಲ್ಲಿ ಬ್ಯಾಂಕ್ ಕೊಡುಗೆಯೂ ಇದೆ. KODAK 7XPRO ಸರಣಿಯ 32-ಇಂಚಿನ ಸ್ಮಾರ್ಟ್ ಟಿವಿ ಖರೀದಿಸಲು, ನೀವು ಐಸಿಐಸಿಐ ಬ್ಯಾಂಕ್ ಅಥವಾ ಆರ್ಬಿಎಲ್ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ, ನೀವು 1,150 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಟಿವಿ ಬೆಲೆ 10,349 ರೂ.ಗಳಿಗೆ ಲಭ್ಯವಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.