ನವದೆಹಲಿ : Flipkart Month End Mobiles Fest: Flipkart ನಲ್ಲಿ Month End Mobiles Fest ಮಾರಾಟ ನಡೆಯುತ್ತಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸೇಲ್ ನಲ್ಲಿ  Apple, Samsung, Xiaomi, Oppo ನಂತಹ ಅನೇಕ ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು.  ಇಲ್ಲಿ Apple iPhone SE ಅನ್ನು ಕೇವಲ 12,799 ರೂಗಳಲ್ಲಿ ಖರೀದಿಸಬಹುದು. 


COMMERCIAL BREAK
SCROLL TO CONTINUE READING

Flipkart Month End Mobiles Fest: Apple iPhone SE ಕೊಡುಗೆಗಳು ಮತ್ತು ರಿಯಾಯಿತಿಗಳು :
Apple iPhone SE 64GB ಸ್ಟೋರೇಜ್ ರೂಪಾಂತರದ ಲಾಂಚಿಂಗ್ ಪ್ರೈಸ್ 39,900 ರೂ. ಆಗಿದೆ. ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಈ ಫೋನ್ ಮೇಲೆ 10,601 ರೂಪಾಯಿ ಡಿಸ್ಕೌಂಟ್ (Discount ) ಸಿಗುತ್ತಿದೆ.  ಅಂದರೆ, ಫೋನ್ 29,299 ರೂ.ಗೆ ಲಭ್ಯವಿದೆ.  ಅಲ್ಲದೆ, ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಕೂಡಾ ಇದರಲ್ಲಿ ಸೇರಿಕೊಂಡಿವೆ. 


ಇದನ್ನೂ ಓದಿ : Reliance Jio: ಬ್ಯಾಂಗ್ ಯೋಜನೆ ಪ್ರಾರಂಭಿಸಿದ ಜಿಯೋ, ಅಗ್ಗದ ದರದಲ್ಲಿ ಸಿಗುತ್ತೆ ಹಲವು ಲಾಭ


iPhone SE ಮೇಲೆ ಬ್ಯಾಂಕ್ ಆಫರ್ :
ನೀವು ಫೋನ್ ಖರೀದಿಸಲು IDFC ಕ್ರೆಡಿಟ್ ಕಾರ್ಡ್ (Credit Card) ಅನ್ನು ಬಳಸಿದರೆ,  10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಂದರೆ ಫೋನ್ ಬೆಲೆ ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಅಂದರೆ, ಈಗ ಫೋನ್ ಅನ್ನು 28,299 ರೂ.ಗೆ ಖರೀದಿಸಬಹುದು. 


iPhone SE ಎಕ್ಸ್ಚೇಂಜ್ ಆಫರ್ :
iPhone SE ನಲ್ಲಿ 15,500 ರೂಪಾಯಿಗಳ ಎಕ್ಸ್ಚೇಂಜ್ ಆಫರ್ (Exchange offer) ಇದೆ.  ಹಳೆಯ ಸ್ಮಾರ್ಟ್‌ಫೋನ್ (Samrtphone)ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ,  ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದು, ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 15,500 ರೂ. ಡಿಸ್ಕೌಂಟ್  ಸಿಗಲಿದೆ.   ಈ ರೀತಿ ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಫೋನ್‌ನ ಬೆಲೆ 12,799 ಆಗಿರಲಿದೆ. 


ಇದನ್ನೂ ಓದಿ : 8 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತೆ ಈ ಸ್ಮಾರ್ಟ್‌ಫೋನ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.