5G Smartphone In Low Cost: ಸಾಲು ಸಾಲು ಹಬ್ಬಗಳ ಋತುವಿನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಶುಭ ಸುದ್ದಿ ಇದೆ. ಇ-ಕಾಮರ್ಸ್ ವೆಬ್ಸೈಟ್ ಗಳಲ್ಲಿ ಮೊಬೈಲ್ ಫೋನ್‌ಗಳ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ಭಾರತದ ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ಸಹ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸಲು ಅವಕಾಶ ನೀಡುತ್ತಿದೆ. ಈ  ಆಫರ್‌ಗಳ ಕುರಿತಂತೆ ತಿಳಿಯಲು ಮುಂದೆ ಓದಿ... 


COMMERCIAL BREAK
SCROLL TO CONTINUE READING

7,500 ರೂ.ನಲ್ಲಿ 5G ಸ್ಮಾರ್ಟ್‌ಫೋನ್: 
Poco M6 5G ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಫ್ಲಿಪ್‌ಕಾರ್ಟ್ 33% ರಿಯಾಯಿತಿ ನೀಡುತ್ತಿದ್ದು,  11,999ರೂ. ಗಳ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 7,000 ರೂ.ಗಳಿಗೆ ಖರೀದಿಸಬಹುದು. 


ಇದನ್ನೂ ಓದಿ- 6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !


5G ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಭರ್ಜರಿ ಕೊಡುಗೆಗಳು: 
64 GB ಮೆಮೊರಿ ಮತ್ತು 4 GB RAM ಜೊತೆಗೆ ಬರುವ ಈ 5G ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಫ್ಲಿಪ್‌ಕಾರ್ಟ್ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ 2,450ರೂ.ವರೆಗೆ ಎಕ್ಸ್ಛೇಂಜ್ ಆಫರ್ ಕೂಡ ಲಭ್ಯವಿದೆ. ಇದಲ್ಲದೆ, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಯಲ್ಲಿ 500 ರೂ. ರಿಯಾಯಿತಿ ನೀಡಲಾಗುತ್ತಿದೆ. ಅರ್ಥಾತ್ ಈ ಫೋನ್ ಅನ್ನು 7,499ರೂ.ಗಳಿಗೆ ನಿಮ್ಮದಾಗಿಸಬಹುದು. 


ತಿಂಗಳಿಗೆ ಕೇವಲ 400 ರೂ. ಪಾವತಿಸಿ ಫೋನ್ ಖರೀದಿಸಿ: 
ಒಂದೊಮ್ಮೆ ನೀವು ಒಟ್ಟಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಫೋನ್ ಖರೀದಿಸಲು ಸಾಧ್ಯವಾಗದಿದ್ದರೆ, ಫ್ಲಿಪ್‌ಕಾರ್ಟ್ ಇದಕ್ಕಾಗಿ ಇಎಂಐ ಕೊಡುಗೆಯನ್ನು ಕೂಡ ನೀಡುತ್ತಿದೆ. ಇದರ ಅಡಿಯಲ್ಲಿ ನೀವು  24 ತಿಂಗಳ ಅವಧಿಯನ್ನು ಆರಿಸಿದರೆ ಮಾಸಿಕ 400 ರೂ. ಇಎಂಐ ಪಾವತಿಸಿ ಫೋನ್ ಖರೀದಿಸಬಹುದು.  


ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!


Poco M6 5G ಸ್ಮಾರ್ಟ್‌ಫೋನ್ ವಿಶೇಷತೆಗಳು: 
ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ Poco M6 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡಿಮೆನ್ಶಿಯಾ 6100 ಪ್ಲಸ್ ಪ್ರೊಸೆಸರ್ ಜೊತೆಗೆ ಬರುತ್ತದೆ. 6.74 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ನಲ್ಲಿ 50 ಎಂಪಿ ರಿಯರ್ ಕ್ಯಾಮೆರಾ, 5 ಎಂಪಿ ಫ್ರಂಟ್ ಕ್ಯಾಮೆರಾ, 5000 ಎಂಎಎಚ್ ಬ್ಯಾಟರಿ, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 90 ಹರ್ಟ್ಸ್ ರಿಫ್ರೆಶ್ ರೇಟ್‌ನಂತಹ ವೈಶಿಷ್ಟ್ಯಗಳು ಕೂಡ ಲಭ್ಯವಿವೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.