ನವದೆಹಲಿ : ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ (Flipkart) ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಎಲೆಕ್ಟ್ರಾನಿಕ್ ಸಾಧನಗಳಿಂದ ಬಟ್ಟೆಯವರೆಗೆ, ಗ್ರಾಹಕರಿಗೆ ಅಗತ್ಯವಿರುವ  ಎಲ್ಲಾ ಸರಕುಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡುತ್ತಿದೆ. ಸದ್ಯಕ್ಕೆ ಸ್ಮಾರ್ಟ್‌ಫೋನ್ ಮೇಲೆ (Smartphone) ಇರುವ ಆಫರ್ ಪ್ರಕಾರ , ಕೆಲವು ಸ್ಮಾರ್ಟ್‌ಫೋನ್‌ಗಳನ್ನು 50 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.  


COMMERCIAL BREAK
SCROLL TO CONTINUE READING

 49 ರೂ.ಗೆ ಖರೀದಿಸಿ Realme C21:
Realme C21 4G ಸೇವೆಗಳೊಂದಿಗಿನ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ 10,999 ರೂ. ಆಗಿದೆ. ಫ್ಲಿಪ್‌ಕಾರ್ಟ್‌ನಿಂದ (Flipkart) 4GB RAM, 64GB ಇಂಟರ್ನಲ್ ಸ್ಟೋರೇಜ್ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು 9,999 ರೂ. ಗೆ ಖರೀದಿಸಬಹುದು. ಇನ್ನು ಖರೀದಿ ವೇಳೆ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಬಳಸಿದರೆ 500 ರೂ. ವರೆಗೆ ಉಳಿಸಬಹುದು. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಅದನ್ನು ಖರೀದಿಸಿದರೆ 9,450 ರೂ ವರೆಗೆ ಉಳಿತಾಯ್ ಮಾಡಬಹುದು. ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದರೆ, ಈ ಫೋನ್ ಅನ್ನು ಕೇವಲ 49 ರೂ.ಗಳಿಗೆ Realme C21 ಅನ್ನು ಪಡೆಯಬಹುದು. 


ಇದನ್ನೂ ಓದಿ : OPPO EV: 2024ರಲ್ಲಿ ಭಾರತದಲ್ಲಿ ಓಡಾಡಲಿವೆ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್?


140 ರೂಪಾಯಿಗೆ ಖರೀದಿಸಿ Oppo A12 :
 64GB ಸ್ಟೋರೇಜ್, 6.22-ಇಂಚಿನ HD + LCD ಡಿಸ್ಪ್ಲೇ ಮತ್ತು ಸ್ಟ್ರಾಂಗ್ ಬ್ಯಾಟರಿಯೊಂದಿಗೆ ಬರುವ Oppo ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 11,990 ರೂ.ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ,  5% ಕ್ಯಾಶ್‌ಬ್ಯಾಕ್ (Cash back) ಸಿಗಲಿದೆ. ಅಂದರೆ 600 ರೂ. ರಿಯಾಯಿತಿ. ಇನ್ನು ಹಳೆಯ ಫೋನ್‌ಗೆ ಬದಲಾಗಿ ಈ ಫೋನ್ ಅನ್ನು ಖರೀದಿಸಿದರೆ, 11,250 ರೂ.ವರೆಗೆ ಉಳಿಸಬಹುದು. ಈ ರೀತಿಯಾಗಿ, ಈ ಫೋನ್‌ ಅನ್ನು ಕೇವಲ 140 ರೂ. ಪಾವತಿಸಿ ನಿಮ್ಮದಾಗಿಸಿಕೊಳ್ಳಬಹುದು. 


149 ರೂ. ಗೆ ಖರೀದಿಸಿ Motorola E7 Power  :
4GB RAM ಮತ್ತು 64GB ಸ್ಟೋರೇಜ್ ಹೊಂದಿರುವ  Motorola ಫೋನ್ ಬೆಲೆ 11,999 ರೂ. ಆದರೆ ನೀವು ಇದನ್ನು 149 ರೂ.ಗೆ ಖರೀದಿಸಬಹುದು. Flipkart ನಲ್ಲಿ, ಈ ಫೋನ್‌ನಲ್ಲಿ 25% ರಿಯಾಯಿತಿಯನ್ನು ಸಿಗಲಿದೆ. ಈ ಕಾರಣದಿಂದಾಗಿ ಈ ಫೋನ್‌ ಅನ್ನು 8,999 ರೂ ಗೆ ಖರೀದಿಸುವುದು ಸಾಧ್ಯವಾಗುತ್ತದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, 450 ರೂ. ಹೆಚ್ಚು ಉಳಿತಾಯ ಮಾಡಬಹುದು. ಎಕ್ಸ್‌ಚೇಂಜ್ ಆಫರ್‌ನಲ್ಲಿ  (Exchange offer) ಮತ್ತೆ ಈ ಫೋನ್  ಮೇಲೆ 8,400 ರೂ. ಲಾಭಸಿಗಲಿದೆ. ಈ ರೀತಿಯಾಗಿ ಈ ಫೋನ್ ಅನ್ನು 149 ರೂ.ಗೆ ಖರೀದಿಸಬಹುದು.  


ಇದನ್ನೂ ಓದಿ : Joker Virus: ನಿಮ್ಮ ಫೋನ್ ದೋಚಲು ಬಂದಿದ್ದಾನೆ ಜೋಕರ್, ಈ 14 ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸಿ


ಇನ್ಫಿನಿಕ್ಸ್ ಸ್ಮಾರ್ಟ್ 5 ಅನ್ನು 200 ರೂ. ಖರೀದಿಸಿ :
Infinix ನ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ  8,999 ರೂ.ಗೆ ಲಭ್ಯವಿರುತ್ತದೆ. ಆದರೆ ಫ್ಲಿಪ್‌ಕಾರ್ಟ್‌ಮೇಲೆ 16% ರಿಯಾಯಿತಿಯ ನಂತರ  7,499 ರೂ.ಗೆ ಖರೀದಿಸಬಹುದು. ಈ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ಚೇಂಜ್ ಆಫರ್‌ನೊಂದಿಗೆ, 6,950 ರೂ. ವರೆಗೆ ಉಳಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Axis credit card) ಅನ್ನು ಬಳಸಿದರೆ,.375 ರೂ ರಿಯಾಯಿತಿ ಸಿಗಲಿದೆ. ಇಷ್ಟಾದ ಮೇಲೆ ಈ ಫೋನ್ ಅನ್ನು 174 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.