ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಲಹೆಗಳು: ಫೋನ್ ಚಿಟಿಕೆಯಲ್ಲಿ ಫುಲ್ ಚಾರ್ಜ್ ಆಗಲು ಇಲ್ಲಿದೆ ಸಲಹೆ
ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಲಹೆಗಳು: ಸಾಮಾನ್ಯವಾಗಿ ಕೆಲವರು ನಮ್ಮ ಸ್ಮಾರ್ಟ್‌ಫೋನ್ ತುಂಬಾ ಸ್ಲೋ ಆಗಿ ಚಾರ್ಜ್ ಆಗುತ್ತೆ ಮತ್ತು ಬ್ಯಾಟರಿ ಸಹ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ ಎಂದು ದೂರುತ್ತಾರೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ನಿಮಗಾಗಿ ನಾವು ಕೆಲವು ಸುಲಭವಾದ ಸಲಹೆಗಳನ್ನು ತಂದಿದ್ದೇವೆ. ನೀವು ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ನಿಮ್ಮ ಫೋನ್ ಚಿಟಿಕೆಯಲ್ಲಿ ಚಾರ್ಜ್ ಆಗುವುದು ಮಾತ್ರವಲ್ಲ ಬ್ಯಾಟರಿ ಸಹ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.
ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಲಹೆಗಳು: ಈಗ ಯಾರ ಕೈನಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳದ್ದೇ ಸಾಮ್ರಾಜ್ಯ. ನಾವು ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ ಸ್ಮಾರ್ಟ್‌ಫೋನ್ ಕೂಡ ಅಷ್ಟೇ ಮುಖ್ಯ ಎಂಬಂತಾಗಿದೆ. ಒಡವೆ, ವಸ್ತ್ರ ಕೊಳ್ಳುವಾಗ ಅದರ ಗುಣಮಟ್ಟ ಹೇಗಿದೆ ಎಂಬುದನ್ನು ಸರಿಯಾಗಿ ಪರೀಕ್ಷಿಸುತ್ತೇವೋ ಇಲ್ಲವೋ... ಆದರೆ ಸ್ಮಾರ್ಟ್‌ಫೋನ್ ಕೊಳ್ಳುವಾಗ ಅದರ ಬ್ಯಾಟರಿ ಚಿನ್ನಾಗಿದೆಯಾ, ಒಮ್ಮೆ ಫುಲ್ ಚಾರ್ಜ್ ಮಾಡಿದ ಬಳಿಕ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದು. ಫೋನಿನ ಸಂಗ್ರಹಣಾ ಸಾಮರ್ಥ್ಯ ಎಷ್ಟಿದೆ. ಅದರ ಕ್ಯಾಮರ ಹೇಗಿದೆ ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ವಿವರ ಪಡೆಯುತ್ತೇವೆ. ನಂತರ ಮನಸ್ಸಿಗೆ ಸಮಾಧಾನವಾದರಷ್ಟೇ ಫೋನ್ ಖರೀದಿಸುತ್ತೇವೆ. ಆದಾಗ್ಯೂ, ಹಲವು ಬಾರಿ ಕೆಲವರು ನಮ್ಮ ಸ್ಮಾರ್ಟ್‌ಫೋನ್ ತುಂಬಾ ಸ್ಲೋ ಆಗಿ ಚಾರ್ಜ್ ಆಗುತ್ತೆ ಮತ್ತು ಬ್ಯಾಟರಿ ಸಹ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ ಎಂದು ದೂರುತ್ತಾರೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ನಿಮಗಾಗಿ ನಾವು ಕೆಲವು ಸುಲಭವಾದ ಸಲಹೆಗಳನ್ನು ತಂದಿದ್ದೇವೆ.
ಹೌದು, ಬಹುತೇಕ ಮಂದಿ ಫೋನಿನ ಬ್ಯಾಟರಿ ಕಡಿಮೆಯಾದರೂ ಸಹ ಏನೋ ಕಳೆದುಕೊಂಡಂತೆ ಪರದಾಡುವುದನ್ನು ನೋಡಬಹುದು. ಜೊತೆಗೆ ಈಗ ಸ್ವಲ್ಪ ಹೊತ್ತಿನ ಮುಂಚೆ ಅಷ್ಟೇ ಫೋನ್ ಚಾರ್ಜ್ ಮಾಡಿದ್ದೆ ಬ್ಯಾಟರಿ ಇಷ್ಟು ಬೇಗ ಖಾಲಿಯಾಗಿದೆ ಎಂದು ಬೇಸರಪಟ್ಟುಕೊಳ್ಳುತ್ತಾರೆ. ಇದಕ್ಕೆ ನೀವು ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮಾಡುವಾಗ ಆಗುವಂತಹ ಕೆಲವು ತಪ್ಪುಗಳು ಕೂಡ ಕಾರಣವಾಗಿರಬಹುದು. ಹಾಗಿದ್ದರೆ ಫೋನ್‌ನ ಚಾರ್ಜಿಂಗ್ ವೇಗವನ್ನು ಹೆಚ್ಚಿಸಲು ಯಾವ ರೀತಿ ಚಾರ್ಜ್ ಮಾಡಬೇಕು. ಫೋನ್ ಚಾರ್ಜ್ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ...
ಇದನ್ನೂ ಓದಿ- ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತಂತೆ ರಿಯಲ್ಮಿಯ ಈ ಫೋನ್, ಇಲ್ಲಿದೆ ಇದರ ವೈಶಿಷ್ಟ್ಯ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಯಾವುದೇ ಕಾರಣಕ್ಕೂ ಬೇರೆ ಚಾರ್ಜರ್ ಬಳಸಬೇಡಿ:
ಸಾಮಾನ್ಯವಾಗಿ ನಾವು ಆತುರದಲ್ಲಿ ಚಾರ್ಜರ್ ಎಲ್ಲಾದರೂ ಇಟ್ಟು ಮರೆತಿರುತ್ತೇವೆ ಅಥವಾ ಹೊರಗೆ ಹೋಗುವಾಗ ನಮ್ಮ ಚಾರ್ಜರ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುತ್ತೇವೆ. ಇಂತಹ ಸಂದರ್ಭದಲ್ಲಿ ಬೇರೆ ಕಂಪನಿಯ ಫೋನ್‌ನ ಚಾರ್ಜರ್ ಅನ್ನು ಬಳಸಿ ಫೋನ್ ಚಾರ್ಜ್ ಮಾಡುತ್ತೇವೆ. ಆದರೆ, ನಿಮ್ಮ ಸ್ವಂತ ಫೋನ್‌ನ ಚಾರ್ಜರ್ ಬಳಸದೆ ಬೇರೆ ಕಂಪನಿಯ ಫೋನ್ ಚಾರ್ಜರ್ ಬಳಸುವುದರಿಂದ ಸ್ಮಾರ್ಟ್‌ಫೋನ್ ಬೇಗನೆ ಫುಲ್ ಚಾರ್ಜ್ ಆಗಬಹುದು ಅಥವಾ ಸ್ಲೋ ಆಗಿ ಚಾರ್ಜ್ ಆಗಬಹುದು. ಇದು ನಿಮ್ಮ ಬ್ಯಾಟರಿ ಲೈಫ್ ಮೇಲೆ ಪರಿಣಾಮ ಬೀರುತ್ತದೆ.
ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಪೋರ್ಟ್ ಬಗ್ಗೆ ಇರಲಿ ಎಚ್ಚರ:
ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಪೋರ್ಟ್‌ನಲ್ಲಿ ಸಮಸ್ಯೆ ಇದ್ದರೆ ಅಥವಾ ಅದು ಕೆಟ್ಟಿದ್ದರೂ ಸಹ ನಿಮ್ಮ ಫೋನ್ ನಿಧಾನವಾಗಿ ಚಾರ್ಜ್ ಆಗುತ್ತದೆ. ಇದಲ್ಲದೆ ಚಾರ್ಜಿಂಗ್ ಕೇಬಲ್‌ನೊಂದಿಗೆ ಸಮಸ್ಯೆ ಇದ್ದಾಗಲೂ ಸಹ ಇದು ನಿಮ್ಮ ಫೋನ್ ಚಾರ್ಜಿಂಗ್ ಮೇಲೆ ಪರಿಣಾಮ ಬೀರಬಹುದು. ಅಂತಹ ಸಂದರ್ಭದಲ್ಲಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮೊಬೈಲ್ ಸರ್ವಿಸ್ ಸೆಂಟರ್ ಗೆ ತೋರಿಸಿ ಸರಿಪಡಿಸಿಕೊಳ್ಳಿ.
ಇದನ್ನೂ ಓದಿ- ಫ್ಲಿಪ್‌ಕಾರ್ಟ್ ಮಾರಾಟ: ₹30,000 ಸ್ಮಾರ್ಟ್‌ಫೋನ್ ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ
ವೈರ್‌ಲೆಸ್ ಚಾರ್ಜಿಂಗ್ ಮಾಡುವುದನ್ನು ತಪ್ಪಿಸಿ:
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬಳಸಲು ಇಚ್ಚಿಸುತ್ತಾರೆ. ಆದರೆ ವೈರ್‌ಲೆಸ್ ಚಾರ್ಜಿಂಗ್ ಬಳಸುವುದರಿಂದ ಫೋನಿನ ಇಂಡಕ್ಷನ್ ಕಾಯಿಲ್ ಹೆಚ್ಚು ಬಿಸಿ ಆಗಬಹುದು ಮತ್ತು ನಿಮ್ಮ ಫೋನ್ ನಿಧಾನವಾಗಿ ಚಾರ್ಜ್ ಆಗಲು ಇದೂ ಒಂದು ಕಾರಣವಿರಬಹುದು. ಹಾಗಾಗಿ ಫೋನ್ ಚಾರ್ಜ್ ಮಾಡಲು ವೈರ್‌ಲೆಸ್ ಚಾರ್ಜಿಂಗ್ ಬದಲಿಗೆ ಚಾರ್ಜ್ ಮಾಡುವ ಹಳೆಯ ವಿಧಾನವೇ ಉತ್ತಮ ಎಂದು ಹೇಳಲಾಗುತ್ತದೆ.
ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಮಾಡುವಾಗ ಈ ಅಂಶಗಳ ಬಗ್ಗೆ ನಿಗಾವಹಿಸುವುದರಿಂದ ಫೋನ್ ನಿಧಾನವಾಗಿ ಚಾರ್ಜ್ ಆಗುವುದನ್ನು ತಪ್ಪಿಸಬಹುದು. ಜೊತೆಗೆ ನಿಮ್ಮ ಫೋನ್ ಬ್ಯಾಟರಿ ಕೂಡ ಹೆಚ್ಚು ಕಾಲ ಬಾಳಿಕ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.