ನಯಾ ಪೈಸೆ ಖರ್ಚಿಲ್ಲ ! ಮಳೆಗಾಲದಲ್ಲಿ ಕಾರಿನೊಳಗಿನಿಂದ ಬರುವ ದುರ್ವಾಸನೆ ತಡೆಯಲು ಇಷ್ಟು ಮಾಡಿ
ಮಳೆಗಾಲದಲ್ಲಿ ಕಾರುಗಳಿಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಈ ಸಮಸ್ಯೆಗಳಲ್ಲಿ ಒಂದು ಕ್ಯಾಬಿನ್ ಒಳಗಿನಿಂದ ಬರುವ ವಾಸನೆ.
ಬೆಂಗಳೂರು : ರಾಜ್ಯದ ಹಲವೆಡೆ ಎಡೆಬಿಡದೇ ಮಳೆ ಸುರಿಯುತ್ತಿದೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಹೆಜ್ಜೆ ಇಡುವುದು ಕೂಡಾ ಕಷ್ಟ.ಹಾಗಾಗಿ ದೂರವಿರಲಿ, ಸಮೀಪವಿರಲಿ ಎಲ್ಲಿಗೆ ಹೋಗಬೇಕಾದರೂ ಮನೆಯಲ್ಲಿರುವ ಕಾರನ್ನು ಹೊರ ತೆಗೆಯಬೇಕಾಗುತ್ತದೆ. ಆದರೆ ಮಳೆಗಾಲದಲ್ಲಿ ಕಾರುಗಳಿಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳು ಕೂಡಾ ಎದುರಾಗುತ್ತವೆ. ಈ ಸಮಸ್ಯೆಗಳಲ್ಲಿ ಒಂದು ಕ್ಯಾಬಿನ್ ಒಳಗಿನಿಂದ ಬರುವ ವಾಸನೆ. ನಿಜವಾಗಿ ಏನಾಗುತ್ತದೆ ಎಂದರೆ, ಮಳೆಗಾಲದಲ್ಲಿ ಒದ್ದೆಯಾದ ಬೂಟುಗಳನ್ನು ಹಾಕಿಕೊಂಡು ಕಾರಿನಲ್ಲಿ ಕುಳಿತಾಗ, ಬೂಟುಗಳೊಂದಿಗೆ ಬಂದ ನೀರು ಅದರ ಚಾಪೆಯೊಳಗೆ ಹೋಗುತ್ತದೆ ಮತ್ತು ನಂತರ ಅದು ಚಾಪೆಯಿಂದ ಕಾರಿನ ಕಾರ್ಪೆಟ್ ತಲುಪುತ್ತದೆ. ಇದರಿಂದ ಕಾರಿನಲ್ಲಿ ದುರ್ವಾಸನೆ ಹೊರ ಬರಲು ಆರಂಭವಾಗುತ್ತದೆ.
ಹಾಗೆಯೇ ಎಷ್ಟೋ ಸಲ ಮಳೆಗೆ ಹಿಡಿದ ಕೊಡೆ ತಂದು ಕಾರಿನಲ್ಲಿ ಕೂರುತ್ತೇವೆ. ಕಾರಿನ ನೆಲದ ಮೇಲೆ ಕೊಡೆ ಇತ್ತು ಬಿಡುತ್ತೇವೆ. ಈಗ ಛತ್ರಿಯ ಮೇಲ್ಮೈಯಲ್ಲಿರುವ ನೀರು, ಮ್ಯಾಟ್ ಮೂಲಕ ಹಾಡು ಹೋಗುತ್ತದೆ. ಮತ್ತೆ ಮ್ಯಾಟ್ ಮೂಲಕ ಹರಿದ ನೀರು ಕಾರ್ಪೆಟ್ ಸೇರುತ್ತದೆ. ಇದರಿಂದ ಕಾರಿನೊಳಗಿನಿಂದ ದುರ್ವಾಸನೆ ಬರಲು ಆರಂಭವಾಗುತ್ತದೆ. ಹಾಗಿದ್ದರೆ ಮಳೆಗಾಲದಲ್ಲಿ ಎದುರಾಗುವ ಈ ಸಮಸ್ಯೆಗೆ ಪರಿಹಾರ ಎನ್ನು ನೋಡೋಣ.
ಇದನ್ನೂ ಓದಿ : ಹೀಗೆ ಮಾಡಿದರೆ ನೀವು ಬುಕ್ ಮಾಡುವ ರೈಲು ಟಿಕೆಟ್ ಕನ್ಫರ್ಮ್ ಆಗುವುದು ಪಕ್ಕಾ !
ನಿಮಗೆ ಸಮಯ ಸಿಕ್ಕ ತಕ್ಷಣ, ನಿಮ್ಮ ಕಾರ್ ಮ್ಯಾಟ್‌ಗಳನ್ನು ಹೊರ ತೆಗೆದು ಒಣಗಿಸಿ. ಮ್ಯಾಟ್‌ಗಳನ್ನು ಒಣಗಿಸಿದ ತಕ್ಷಣ ಅದರ ವಾಸನೆ ಕೂಡಾ ಸತ್ತು ಹೋಗುತ್ತವೆ. ಮ್ಯಾಟ್ ಹೊರ ತೆಗೆಯುತ್ತಿದ್ದಂತೆಯೇ ಸವ್ಲಪ್ ಹೊತ್ತಿನವರೆಗೆ ಕಾರಿನ ಡೋರ್ ಕೂಡಾ ಓಪನ್ ಮಾಡಿ ಇಟ್ಟುಕೊಳ್ಳಿ. ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಕಾಲ ಕಾರನ್ನು ಹೀಗೆ ಬಿಡಿ. ಇದರ ನಂತರ, ಮ್ಯಾಟ್ ಅನ್ನು ಮತ್ತೆ ಕಾರಿನಲ್ಲಿ ಇರಿಸಿ.
ಇಷ್ಟು ಮಾಡಿದ ಮೇಲೆ ಕಾರಿನಿಂದ ವಾಸನೆ ಬರುವುದಿಲ್ಲ ಎನ್ನುವುದು ನಿಮಗೂ ಖಾತ್ರಿಯಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತ ಮಾರ್ಗವಾಗಿದೆ. ಇದಲ್ಲದೇ ಕ್ಯಾಬಿನ್ ನಲ್ಲಿ ಉತ್ತಮ ಸುಗಂಧ ಬೇಕೆಂದರೆ ಕಾರ್ ಪರ್ಫ್ಯೂಮ್ ಬಳಸಬಹುದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕಾರ್ ಪರ್ಫ್ಯೂಮ್ ಸಿಗುತ್ತವೆ. ಅವುಗಳಲ್ಲಿ ಯಾವುದನ್ನಾದರೂ ಖರೀದಿಸಿ ನಿಮ್ಮ ಕಾರಿನಲ್ಲಿ ಇರಿಸಿಕೊಳ್ಳಬಹುದು.
ಇದನ್ನೂ ಓದಿ : JioBharat phone: ಕೇವಲ 999 ರೂ.ಗೆ ರಿಲಯನ್ಸ್ ಜಿಯೋ 4G ಮೊಬೈಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.