ISRO Satellite GSAT-20 Launching : ISRO ಮತ್ತು SpaceX ಗೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬಿದ್ದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಎಲೋನ್ ಮಸ್ಕ್ ಅವರ ಬಾಹ್ಯಾಕಾಶ ಕಂಪನಿ ಸ್ಪೇಸ್‌ಎಕ್ಸ್‌ನ ಸಹಾಯವನ್ನು ತೆಗೆದುಕೊಳ್ಳಲಿದೆ.ಸ್ಪೇಸ್‌ಎಕ್ಸ್‌ನ ಸಹಾಯದಿಂದ ತನ್ನ ಸಂವಹನ ಉಪಗ್ರಹ ಜಿಸ್ಯಾಟ್-20 ಅನ್ನು ಉಡಾವಣೆ ಮಾಡುವುದಾಗಿ ಇಸ್ರೋ ಘೋಷಿಸಿದೆ.ಚಂದ್ರಯಾನದಂಥಹ ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿರುವ ಇಸ್ರೋ  ಸ್ಪೇಸ್‌ಎಕ್ಸ್‌ನ ಸಹಾಯ ತೆಗೆದುಕೊಳ್ಳುವ ಸ್ಥಿತಿ ಎದುರಾಗಿರುವುದು ಯಾಕೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡದೇ ಇರದು. 


COMMERCIAL BREAK
SCROLL TO CONTINUE READING

SpaceX ಸಹಾಯ ಪಡೆದ ಇಸ್ರೋ : 
ಸ್ಪೇಸ್‌ಎಕ್ಸ್ ಇಸ್ರೋದ ಸಂವಹನ ಉಪಗ್ರಹ GSAT-20 ಅನ್ನು ಉಡಾವಣೆ ಮಾಡುತ್ತದೆ.ಮಾಹಿತಿ ಪ್ರಕಾರ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ GSAT-20 ಅನ್ನು ಉಡಾವಣೆ ಮಾಡಲಾಗುವುದು. GSAT-20 ಉಪಗ್ರಹವು ಅತ್ಯಂತ ಭಾರವಾಗಿರುವ ಕಾರಣದಿಂದಾಗಿಯೇ ISRO ಅದನ್ನು ಉಡಾವಣೆ ಮಾಡಲು SpaceX ನ ಸಹಾಯವನ್ನು ತೆಗೆದುಕೊಳ್ಳಬೇಕಾಗಿದೆ.


ಇದನ್ನೂ ಓದಿ : ವಿಮಾನಗಳು ರಿವರ್ಸ್ ಗೇರ್ ಹೊಂದಿವೆಯೇ? ಏವಿಯೇಷನ್‌ ಮೆಕ್ಯಾನಿಕ್ಸ್‌ ಬಗ್ಗೆ ನಿಮಗೇಷ್ಟು ಗೊತ್ತು.!


ಉಪಗ್ರಹದ ತೂಕ 4 ಸಾವಿರದ 700 ಕೆ.ಜಿ: 
ನ್ಯೂಸ್‌ಪೇಸ್ ಇಂಡಿಯಾ ಲಿಮಿಟೆಡ್ ಪ್ರಕಾರ, ಜಿಸ್ಯಾಟ್-20 ಉಪಗ್ರಹದ ತೂಕ 4 ಸಾವಿರದ 700 ಕೆ.ಜಿ.ಆದರೆ ಇಸ್ರೋ ಹೊಂದಿರುವ ರಾಕೆಟ್ ಗರಿಷ್ಠ 4 ಸಾವಿರ ತೂಕದ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡಬಲ್ಲದು. GSAT-20 ಉಪಗ್ರಹವು 700 ಕೆಜಿ ಹೆಚ್ಚು ತೂಕ ಹೊಂದಿದೆ. ಇದರಿಂದಾಗಿ ಇಸ್ರೋ ಸ್ಪೇಸ್‌ಎಕ್ಸ್‌ನಿಂದ ಸಹಾಯ ಪಡೆಯಬೇಕಾಗಿದೆ. ಇಸ್ರೋದ GSAT-20 ಉಪಗ್ರಹವನ್ನು SpaceX ನ Falcon-9 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು ಎಂಬುದು ಗಮನಾರ್ಹ. ಇಸ್ರೋ ಪ್ರಸ್ತುತ LVM3 ರಾಕೆಟ್ ಅನ್ನು ಹೊಂದಿದ್ದು ಅದು 4 ಟನ್ ಗಳಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣಕ್ಕಾಗಿ, ಉಪಗ್ರಹ ಉಡಾವಣೆಗಾಗಿ ಈ ಒಪ್ಪಂದವನ್ನು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ಗೆ ನೀಡುವ ಅನಿವಾರ್ಯತೆ ಎದುರಾಯಿತು.


ವೆಚ್ಚ ಇಸ್ರೋಗಿಂತ ಕಡಿಮೆ: 
ದೇಶದ ಬ್ರಾಡ್‌ಬ್ಯಾಂಡ್ ಸಂವಹನ ಅಗತ್ಯಗಳನ್ನು ಪೂರೈಸಲು, GSAT-20 ಅನ್ನು ಉಪಗ್ರಹ ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. GSAT-20 ಕೆಎ -ಬ್ಯಾಂಡ್ ಉಪಗ್ರಹವಾಗಿದ್ದು, ಇದು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ, ಡಿಜಿಟಲ್ ವಿಡಿಯೋ ಮತ್ತು ಆಡಿಯೋ ಟ್ರಾನ್ಸ್‌ಮಿಷನ್ ಅನ್ನು ಒದಗಿಸುತ್ತದೆ. ಆದರೂ ಭಾರತದ ಎಲ್ಲಾ ಪ್ರೈವೇಟ್ ಸ್ಯಾಟಲೈಟ್ ಪ್ಲೇಯರ್ಸ್  ಈಗಾಗಲೇ SpaceXನಿಂದ ಅನೇಕ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿದ್ದಾರೆ.ಸ್ಪೇಸ್‌ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುವ ವೆಚ್ಚ ಇಸ್ರೋಗಿಂತ ಕಡಿಮೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ :  WhatsApp Call ರೆಕಾರ್ಡ್ ಮಾಡಲು ಇಲ್ಲಿದೆ ಸುಲಭ ವಿಧಾನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ