Fraud Alert! Gmail-Outlook ಬಳಕೆದಾರರೇ ಎಚ್ಚರ! ಈ ಖತರ್ನಾಕ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ...!
Fraud Alert! - Gmail-Outlook ಗಳಂತಹ ಜನಪ್ರೀಯ ಇಮೇಲ್ ಸೇವೆಗಳನ್ನು ಬಳಸುವ ಬಳಕೆದಾರರೇ ಎಚ್ಹೆತ್ತುಕೊಳ್ಳಿ. ಏಕೆಂದರೆ ಈ ಮೇಲ್ ಸೇವೆ ಬಳಸುವ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸಂದೇಶ ಜಾರಿಯಾಗಿದೆ. ಈ ಎಚ್ಚರಿಕೆಯ ಪ್ರಕಾರ ಸೈಬರ್ ವಂಚಕರು (Hackers) ಇ-ಮೇಲ್ (e-Mail) ಮೂಲಕ ಅಪಾಯಕಾರಿ ಲಿಂಕ್ (Dangerous Link Mail) ಕಳುಹಿಸುತ್ತಿದ್ದಾರೆ.
Fraud Alert! - Gmail-Outlook ಗಳಂತಹ ಜನಪ್ರೀಯ ಇಮೇಲ್ ಸೇವೆಗಳನ್ನು ಬಳಸುವ ಬಳಕೆದಾರರೇ ಎಚ್ಹೆತ್ತುಕೊಳ್ಳಿ. ಏಕೆಂದರೆ ಈ ಮೇಲ್ ಸೇವೆ ಬಳಸುವ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸಂದೇಶ ಜಾರಿಯಾಗಿದೆ. ಈ ಎಚ್ಚರಿಕೆಯ ಪ್ರಕಾರ ಸೈಬರ್ ವಂಚಕರು (Hackers) ಇ-ಮೇಲ್ (e-Mail) ಮೂಲಕ ಅಪಾಯಕಾರಿ ಲಿಂಕ್ (Dangerous Link Mail) ಕಳುಹಿಸುತ್ತಿದ್ದಾರೆ. ನೀವೂ ಕೂಡ ಈ ಇ-ಮೇಲ್ ಬಲೆಗೆ ಬಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿಯ ಜೊತೆಗೆ ನಿಮ್ಮ ಖಾತೆಯಲ್ಲಿರುವ ಹಣವೂ ಕೂಡ ಪೋಲಾಗಲಿದೆ. ಇದರಲ್ಲಿ ವಿಶೇಷ ಸಂಗತಿ ಎಂದರೆ, ಈ ಅಪಾಯಕಾರಿ ಮೇಲ್ ನಿಮ್ಮ ಅಧಿಕೃತ ಇ-ಮೇಲ್ ನಂತೆಯೇ ಕಾಣಿಸುತ್ತದೆ.
ಆಮೀಷವೊಡ್ಡಿ ಜನರನ್ನು ವಂಚಿಸಲಾಗುತ್ತಿದೆ
ವರದಿಗಳ ಪ್ರಕಾರ, Gmail ಮತ್ತು Outlook ಬಳಕೆದಾರರಿಗೆ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಹ್ಯಾಕರ್‌ಗಳು ಇಮೇಲ್‌ಗಳಲ್ಲಿ ಉಡುಗೊರೆ ಕಾರ್ಡ್‌ಗಳನ್ನು ಕಳುಹಿಸಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಉಡುಗೊರೆ ಕಾರ್ಡ್ ಪಡೆಯಲು, ಬಳಕೆದಾರರು ಸಮೀಕ್ಷೆಯಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಕೆದಾರರನ್ನು ವೆಬ್‌ಸೈಟ್‌ಗೆ ಕರೆದೊಯ್ಯಲಾಗುತ್ತದೆ. ದುರದೃಷ್ಟವಶಾತ್, ಸಮೀಕ್ಷೆಯಲ್ಲಿ ಭಾಗವಹಿಸಿದ ನಂತರವೂ ನಿಮಗೆ ಯಾವುದೇ ಉಡುಗೊರೆ ಕಾರ್ಡ್ ಸಿಗುವುದಿಲ್ಲ. ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ಅಥವಾ ಸಮೀಕ್ಷೆಗಳಲ್ಲಿ ಭಾಗವಹಿಸುವುದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತದೆ.
ಇದನ್ನೂ ಓದಿ- BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಈ ವಂಚನೆಯ ಮೇಲ್ ಗುರುತಿಸುವುದು ಹೇಗೆ?
ಒಂದು ವೇಳೆ ನಿಮ್ಮ ಮೇಲ್ ಖಾತೆಗೂ ಕೂಡ ಈ ರೀತಿಯ ಗಿಫ್ಟ್ ಕಾರ್ಡ್ ಅಥವಾ ಬಹುಮಾನ ಗೆಲ್ಲುವ ಮೇಲ್ ಬಂದಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇಮೇಲ್ ನಕಲಿಯಾಗಿದೆಯೋ ಅಥವಾ ಅಸಲಿಯಾಗಿದೆಯೋ ಎಂಬುದನ್ನು ಗುರುತಿಸಲು ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳುತ್ತಿದ್ದೇವೆ. ಅಂತಹ ಮೇಲ್‌ಗಳು ಹೆಚ್ಚಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಲು ನಿಮ್ಮನ್ನು ಕೇಳುತ್ತವೆ. ಕೆಲವೊಮ್ಮೆ ನೀವು ಯಾವುದೇ ಡ್ರಾಗಳಲ್ಲಿ ಭಾಗವಹಿಸದಿದ್ದರೂ ದೊಡ್ಡ ಮೊತ್ತದ ಹಣವನ್ನು ಮೇಲ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಇದರ ಜೊತೆಗೆ, ವಂಚಕರು ಮೇಲ್ ಬರೆಯುವಾಗ ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳನ್ನು ಮಾಡುತ್ತಾರೆ.
ಪಾರಾಗಬೇಕಿದ್ದರೆ ಈ ವಿಧಾನ ಬಳಸಿ
1. ಬಳಕೆದಾರರು ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ನೋಡಿಕೊಳ್ಳಬೇಕು.
2. ಅಪರಿಚಿತ ಮೇಲ್ ನಲ್ಲಿ ನೀಡಿರುವ ಯಾವುದೇ ಅಟ್ಯಾಚ್ಮೆಂಟ್ ತೆರೆಯಬೇಡಿ.
3. ಅಜ್ಞಾತ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಡಿ.
4. ಇಮೇಲ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಬೇಡಿ, ಅದರಲ್ಲೂ ವಿಶೇಷವಾಗಿ ಒಂದು ವೇಳೆ ಅದು ಸಮೀಕ್ಷೆಯ ಭಾಗವಾಗಿದ್ದರೆ.
ಇದನ್ನೂ ಓದಿ-Viral Video: ಪುಟ್ಟ ಬಾಲಕಿಯ ಮಡಿಲಲ್ಲಿ ಮಲಗಿದ ಭಾರಿ ಹೆಬ್ಬಾವು, ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ