Fraudulent Loan Apps Removed By Google: ಈ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಲೇ ಇದೆ. ಆದರೂ ವಂಚನೆ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಈ ಮಧ್ಯೆ ಟೆಕ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಇದ್ದಕ್ಕಿದ್ದಂತೆ 2,500 ಮೋಸದ ಲೋನ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಲೋನ್ ಅಪ್ಲಿಕೇಶನ್‌ಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಬರೋಬ್ಬರಿ 2,500 ವಂಚನೆಯ ಲೋನ್ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವಂತೆ ಭಾರತ ಸರ್ಕಾರ ಗೂಗಲ್‌ಗೆ ಮನವಿ ಮಾಡಿತ್ತು. ಭಾರತ ಸರ್ಕಾರದ ಮನವಿ ಮೇರೆಗೆ ಕ್ರಮ ಕೈಗೊಂಡಿರುವ ಗೂಗಲ್ ಏಪ್ರಿಲ್ 2021 ಮತ್ತು ಜುಲೈ 2022 ರ ನಡುವೆ ತನ್ನ ಪ್ಲೇ ಸ್ಟೋರ್‌ನಿಂದ 2,500 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ. 


ವಾಸ್ತವವಾಗಿ, ಸಾಲದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಈ ಫ್ರಾಡ್ ಲೋನ್ ಅಪ್ಲಿಕೇಶನ್‌ಗಳು ಜನಸಾಮಾನ್ಯರಿಗೆ ಕಡಿಮೆ ಬಡ್ಡಿ ದರಗಳು ಹಾಗೂ ಸುಲಭ ಸಾಲದ ಭರವಸೆಗಳ ಮೂಲಕ ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದವು. 


ಇದನ್ನೂ ಓದಿ- 84 ದಿನಗಳವರೆಗೆ ಉಚಿತ ಇಂಟರ್ನೆಟ್, ಕಾಲಿಂಗ್ ಜೊತೆಗೆ 900 ಎಸ್ಎಂಎಸ್, ಬೆಲೆಯೂ ಕಡಿಮೆ!


ಈ ಕುರಿತಂತೆ ಮಾಹಿತಿ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರವು ಇಂತಹ ವಂಚಿತ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಲೇ ಇದೆ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. 


ಈ ಸರಣಿಯಲ್ಲಿ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 2,500 ವಂಚನೆ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ ಆ್ಯಪ್‌ಗಳು ಸಾಲ ನೀಡುವ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದವು. ಈ ಕ್ರಮವನ್ನು ಎಫ್‌ಎಸ್‌ಡಿಸಿ ಸಭೆಯಲ್ಲೂ ಚರ್ಚಿಸಲಾಗಿದೆ. FSDC ಸೈಬರ್ ಭದ್ರತೆಯ ಮೇಲೆ ಕೆಲಸ ಮಾಡುವ ಸಂಸ್ಥೆಯಾಗಿದೆ. ಈ ವಿಷಯದಲ್ಲಿ ಸರ್ಕಾರ ಮತ್ತು ಗೂಗಲ್ ನಡುವೆ ಸಹಕಾರವನ್ನು ಈ ಸಂಸ್ಥೆ ಕೇಳಿತ್ತು ಎಂದವರು ಮಾಹಿತಿ ನೀಡಿದ್ದಾರೆ. 


'ಆರ್‌ಬಿಐ ಅಂತಹ ಅಪ್ಲಿಕೇಶನ್‌ಗಳ ಬಿಳಿ ಪಟ್ಟಿಯನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಈ ಪಟ್ಟಿಯನ್ನು ಈ ಪಟ್ಟಿಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗೂಗಲ್ ಜೊತೆ ಹಂಚಿಕೊಂಡಿತ್ತು. ಈ 2,500 ವಂಚನೆ ಸಾಲದ ಆ್ಯಪ್‌ಗಳನ್ನು ಆಪ್ ಸ್ಟೋರ್‌ಗಳ ಸಹಾಯದಿಂದ ವಿತರಿಸುತ್ತಿರುವುದು ಕಂಡುಬಂದಿದೆ. ಈ ಕಾರಣಕ್ಕಾಗಿಯೇ ಗೂಗಲ್ ಈ ಆ್ಯಪ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 


ಇದನ್ನೂ ಓದಿ- ಈ ಎರಡು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದ ಭಾರತ ಸರ್ಕಾರ... ನಿಮ್ಮ ಫೋನ್ ಯಾವುದು?


3500 ಆಪ್‌ಗಳು ವಂಚನೆ ಆ್ಯಪ್‌ಗಳು: 
ಗೂಗಲ್ ಇತ್ತೀಚೆಗೆ ಲೋನ್ ನೀಡುವ ಅಪ್ಲಿಕೇಶನ್‌ಗಳ ನೀತಿಗಳನ್ನು ಬದಲಾಯಿಸಿದೆ. ಇದರ ಭಾಗವಾಗಿ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಎಲ್ಲಾ ಸಾಲ ನೀಡುವ ಅಪ್ಲಿಕೇಶನ್‌ಗಳು ಗೂಗಲ್‌ನ ಈ ಹೊಸ ನೀತಿಯನ್ನು ಅನುಸರಿಸುವುದು ಕಡ್ಡಾಯವಾಗಿದೆ. 


ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಾಲ ನೀಡುವ ಹಲವು ಅಪ್ಲಿಕೇಶನ್‌ಗಳು ವಂಚನೆಯ ಅಪ್ಲಿಕೇಶನ್‌ಗಳು ಎಂದು ಸರ್ಕಾರ ಗೂಗಲ್‌ಗೆ ಮಾಹಿತಿ ನೀಡಿತ್ತು. ಜೊತೆಗೆ ಈ ಆ್ಯಪ್‌ಗಳು ಕಡಿಮೆ ಬಡ್ಡಿ, ಸುಲಭ ಸಾಲದ ಹೆಸರಿನಲ್ಲಿ ಜನಸಾಮಾನ್ಯರನ್ನು ವಂಚಿಸುತ್ತಿವೆ ಎಂದು ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ತನಿಖೆ ನಡೆಸಿದಾಗ  ಸುಮಾರು 3500 ಸಾಲ ನೀಡುವ ಅಪ್ಲಿಕೇಶನ್‌ಗಳು ವಂಚನೆ ಆ್ಯಪ್‌ಗಳು ಎಂದು ಕಂಡು ಬಂದಿದೆ. ಈ ಕುರಿತಂತೆ ಕ್ರಮ ಕೈಗೊಂಡಿರುವ ಗೂಗಲ್ ಸುಮಾರು 2500 ಆ್ಯಪ್‌ಗಳನ್ನು ತಕ್ಷಣವೇ ತೆಗೆದುಹಾಕಿದೆ. 


ನೀವೂ ಸಹ ಇಂತಹ ಸುಲಭ ಲೋನ್  ಆ್ಯಪ್‌ಗಳನ್ನು ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಇನ್ಸ್ಟಾಲ್ ಮಾಡಿದ್ದರೆ ಕೂಡಲೇ ಅಂತಹ ಅಪ್ಲಿಕೇಶನ್‌ಗಳನ್ನು ಅನ್ಇನ್ಸ್ಟಾಲ್ ಮಾಡಿ ವಂಚನೆಗೆ ಬಲಿಯಾಗುವುದರಿಂದ ಬಚಾವ್ ಆಗಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.