ನವದೆಹಲಿ :  ಎಲ್ಲಾ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ (Prepaid) ಗ್ರಾಹಕರಿಗೆ ಹೊಸ ಹೊಸ ಪ್ಲಾನ್ ಗಳನ್ನ ನೀಡುತ್ತಿದೆ. ಪ್ರತಿ ಕಂಪನಿಯು ಆಯಾ ಕಂಪನಿಯ ಪ್ಲಾನ್ ಇತರರಿಗಿಂತ ಉತ್ತಮವಾಗಿದೆ ಎಂದೆ ಹೇಳುತ್ತಿರುತ್ತದೆ. ಹೀಗಿರುವಾಗ ಯಾವ ಪ್ಲಾನ್ ಆರಿಸಿಕೊಳ್ಳುವುದು ಎಂಬ ಬಗ್ಗೆ ಗ್ರಾಹಕರು ಕೂಡಾ ಗೊಂದಲಕ್ಕೀಡಾಗುತ್ತಾರೆ. ಟೆಲಿಕಾಂ ಕಂಪನಿಗಳಾದ Airtel, Vi ಮತ್ತು  Jio ಕಂಪನಿ ಗ್ರಾಹಕರಿಗಾಗಿ ಉತ್ತಮ ಪ್ಲಾನ್ ಗಳನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಏರ್ಟೆಲ್ 28 ದಿನ ವ್ಯಾಲಿಡಿಟಿ ಪ್ಲಾನ್ : 
ಏರ್‌ಟೆಲ್‌ನ 298 ರೂ.ಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ (Pepaid plan) ೨೮ ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಪ್ಲಾನ್ ನಲ್ಲಿ ಪ್ರತಿದಿನ 2 GB ಡೇಟಾ ಕೂಡಾ ಸಿಗುತ್ತದೆ. ಇದಲ್ಲದೆ, ಅನಿಯಮಿತ ಕರೆ (Unlimited calls) ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಈ ಪ್ಲಾನ್ ನಲ್ಲಿ 100 SMS ಫ್ರೀ ಇರುತ್ತದೆ. ಅಲ್ಲದೆ, ಈ ಪ್ಲಾನ್ ನಲ್ಲಿ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ, ಫ್ರೀ ಮ್ಯೂಸಿಕ್ ಆಕ್ಸೆಸ್ಸ್  ಜೊತೆಗೆ Wynk ಮ್ಯೂಸಿಕ್  ಮತ್ತು ಫಾಸ್ಟ್ಯಾಗ್‌ನೊಂದಿಗೆ 150 ರೂ. ಕ್ಯಾಶ್ ಬ್ಯಾಕ್ ಕೂಡಾ ಸಿಗಲಿದೆ. 


ಇದನ್ನೂ ಓದಿ :  Gmail ಬಳಕೆದಾರರಿಗೆ ಒಳ್ಳೆಯ ಸುದ್ದಿ, ಜೂನ್‌ವರೆಗೆ ಉಚಿತವಾಗಿ ಸಿಗಲಿದೆ ಈ ಸೇವೆ


Vi  ಕೂಡ ನೀಡುತ್ತಿದೆ ಉತ್ತಮ ಆಫರ್ :
Vodafone-Idea  (Vi) ತನ್ನ ಗ್ರಾಹಕರಿಗೆ 29 ದಿನಗಳ ರೀಚಾರ್ಜ್ ಪ್ಲಾನ್ ಅನ್ನು 28 ದಿನಗಳ validity ಜೊತೆಗೆ ನೀಡುತ್ತಿದೆ.  ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 2 GB ಡೇಟಾವನ್ನು ಪಡೆಯುತ್ತಾರೆ. ಆದರೆ ಈ ದಿನಗಳಲ್ಲಿ, ವಿಶೇಷ ಆಫರ್ ಆಗಿ ಪ್ರತಿದಿನ 2 GB ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತಿದೆ. ಅಂದರೆ, ಬಳಕೆದಾರರು ಪ್ರತಿದಿನ 4 ಜಿಬಿ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ, ಇತರ ಕಂಪನಿಗಳಂತೆ, Vi ತನ್ನ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು 100 ಉಚಿತ ಎಸ್‌ಎಂಎಸ್ ನೀಡುತ್ತಿದೆ. Vi ಗ್ರಾಹಕರಿಗೆ ವಾರಾಂತ್ಯದ ರೋಲ್‌ಓವರ್ ಡೇಟಾದ ಪ್ರಯೋಜನವನ್ನು ಸಹ ನೀಡಲಾಗುತ್ತದೆ. ಇದರಲ್ಲಿ ಬಳಸದೆ  ಉಳಿದ ಡೇಟಾವನ್ನು ವಾರಾಂತ್ಯದಲ್ಲಿ ಏಕಕಾಲದಲ್ಲಿ ಬಳಸಬಹುದಾಗಿದೆ. 


ಆಫರ್ ನೀಡುವುದರಲ್ಲಿ ಜಿಯೋ ಕೂಡಾ ಹಿಂದೆ ಬಿದ್ದಿಲ್ಲ :  
Jio ನ 249 ರೂ ಪ್ಲಾನ್ ನಲ್ಲಿ ಅನಿಯಮಿತ ಕರೆ ಸೌಲಭ್ಯ ಇರುತ್ತದೆ. 28 ದಿನಗಳ validity ಜೊತೆಗೆ  100 ಉಚಿತ ಎಸ್‌ಎಂಎಸ್ ಸಿಗಲಿದೆ. ಅಲ್ಲದೆ, ಒಟ್ಟು 56 GB ಡೇಟಾ ಕೂಡಾ ಸಿಗಲಿದೆ.  ಬಳಕೆದಾರರು ಪ್ರತಿದಿನ 2 GB ಡೇಟಾವನ್ನು ಬಳಸಬಹುದು.


ಇದನ್ನೂ ಓದಿ:  Samsung Galaxy S20 FE 5G ಬಿಡುಗಡೆ, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.