SnapChat Paid Subscription - ತ್ವರಿತ ಸಂದೇಶ ರವಾನಿಸುವ ಅಪ್ಲಿಕೇಶನ್ ಆಗಿರುವ 'Snapchat' ಬಳಕೆದಾರರ ಪಾಲಿಗೆ ಕಹಿ ಸುದ್ದಿಯೊಂದು ಪ್ರಕಟವಾಗಿದೆ. ಶೀಘ್ರದಲ್ಲೇ ನೀವು ಈ ಅಪ್ಲಿಕೇಶನ್ ಅನ್ನು ಬಳಸಲು ದೊಡ್ಡ ಶುಲ್ಕವನ್ನೇ ಪಾವತಿಸಬೇಕಾಗಲಿದೆ. ವರದಿಗಳ ಪ್ರಕಾರ ಸ್ನಾಪ್ ಚಾಟ್ ತನ್ನ ಪೇಯ್ಡ್ ಸಬ್ಸ್ಕ್ರಿಪ್ಶನ್ ಆಪ್ ಆಗಿರುವ ಸ್ನಾಪ್ ಚಾಟ್ + ನ ಪರೀಕ್ಷೆ ನಡೆಸುತ್ತಿದೆ ಎನ್ನಲಾಗಿದೆ. ಸ್ನಾಪ್ ಚಾಟ್ ವಕ್ತಾರ ಲಿಜ್ ಮಾರ್ಕ್‌ಮನ್ ಈ ಕುರಿತು ಮಾಹಿತಿ ನೀಡಿದ್ದಾರೆ. Snapchat ನ ಪೇಯ್ಡ್ ಸಬ್ಸ್ಕ್ರಿಪ್ಶನ್ ಅಪ್ಲಿಕೇಶನ್‌ನಲ್ಲಿ ಘೋಷಿಸಲಾದ ವೈಶಿಷ್ಟ್ಯಗಳು ಮತ್ತು ಇತರ ಸಾಮರ್ಥ್ಯಗಳಿಗೆ ಆರಂಭಿಕ ಪ್ರವೇಶವನ್ನು ನೀಡಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಬಳಕೆದಾರರು ಕಂಪನಿಗೆ  ಎಷ್ಟು ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಸ್ನಾಪ್ ಚಾಟ್ ಪ್ಲಸ್ ಚಂದಾದಾರಿಕೆಯ ಶುಲ್ಕ ಇಂತಿದೆ
ವರದಿಗಳ ಪ್ರಕಾರ ಸ್ನಾಪ್ ಚಾಟ್ ನ ಒಂದು ತಿಂಗಳ ಚಂದದಾರಿಕೆಯ ಶುಲ್ಕ EUR 4.59 (ಅಂದರೆ ಸುಮಾರು 370 ರೂ.) ನಿಗದಿಪಡಿಸಿದೆ ಎನ್ನಲಾಗಿದೆ. ಬಳಕೆದಾರರು 24.99 ಯುರೋ (ಅಂದರೆ, ಸುಮಾರು 2000 ರೂ.) ಪಾವತಿಸಿ 6 ತಿಂಗಳ ಚಂದಾದರಿಕೆಯನ್ನು ಪಡೆದುಕೊಳ್ಳಬಹುದು. ಒಂದು ವರ್ಷದ ಚಂದಾದಾರಿಕೆ ಬೇಕಾದರೆ ಬಳಕೆದಾರರು 45.99 ಯುರೋ ಅಂದರೆ, ವರ್ಷಕ್ಕೆ ರೂ.3700 ಪಾವತಿಸಬೇಕಾಗಲಿದೆ. 

ಈ ಕುರಿತು 'ದಿ ವರ್ಜ್'ಗೆ ಹೇಳಿಕೆ ನೀಡಿರುವ ಸ್ನಾಪ್ ಚಾಟ್ ವಕ್ತಾರ ಲೀಜ್ ಮಾರ್ಕ್ಮನ್, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಆಗಿರುವ ಸ್ನಾಪ್ ಚಾಟ್ ತನ್ನ ಪೇಯ್ಡ್ ಸಬ್ಸ್ಕ್ರಿಪ್ಶನ್ ಮೇಲೆ ಅಂತಿಮ ಹಂತದ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ. ಕಂಪನಿಯು ವರ್ತಮಾನದಲ್ಲಿ ಬಿಡುಗಡೆಗೊಳಿಸಲು ಉದ್ದೇಶಿಸಿರುವ ಸ್ನಾಪ್ ಚಾಟ್ ಪ್ಲಸ್ ಕುರಿತು ಅಂತಿಮ ಹಂತದ ಪರೀಕ್ಷೆ ನಡೆಸುತ್ತಿದೆ ಎಂದು ಮಾರ್ಕ್ಮನ್ ಹೇಳಿದ್ದಾರೆ. 'ನಾವು ನಮ್ಮ ಗ್ರಾಹಕರ ಜೊತೆಗೆ ಎಕ್ಸ್ ಕ್ಲೂಸಿವ್, ಎಕ್ಸ್ಪಿರಿಮೆಂಟಲ್ ಹಾಗೂ ಪ್ರೀ-ರಿಲೀಸ್ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲು ತುಂಬಾ ಉತ್ಸುಕರಾಗಿದ್ದೇವೆ ಹಾಗೂ ಬಳಕೆದಾರರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅತ್ಯುತ್ತಮ ಸೇವೆಯನ್ನು ಹೇಗೆ ಒದಗಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ' ಎಂದು ಮಾರ್ಕ್ಮನ್ ಹೇಳಿದ್ದಾರೆ.

ಬಳಕೆದಾರರ ಪ್ಲೇ ಸ್ಟೋರ್ ಖಾತೆಯೊಂದಿಗೆ ಪೇಮೆಂಟ್ ಆಯ್ಕೆ ಜೋಡಣೆ
>> ಈ ಮೊದಲೇ ಉಲ್ಲೇಖಿಸಿದಂತೆ, ಆಪ್ ಸಂಶೋಧಕ ಅಲೆಸೇಂಡ್ರೋ ಪಲುಜಿ ಅವರು ಈ ಮೊದಲೇ ಸ್ನಾಪ್ ಚಾಟ್ ಪ್ಲಸ್ ನ ವಿವಿಧ ಚಂದಾದಾರಿಕೆಯ ಯೋಜನೆಗಳ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.


VPN, Google Drive ಮೇಲೆ ಕೇಂದ್ರ ಸರ್ಕಾರದ ನಿರ್ಬಂಧ, ಸರ್ಕಾರಿ ಕಛೇರಿಗಳಲ್ಲಿ ಬಳಕೆ ಇಲ್ಲ


>> ಇದಲ್ಲದೆ ಕಂಪನಿ ಚಂದಾದಾರಿಕೆ ಪಾವತಿಯನ್ನು ಉತ್ತೇಜಿಸಲು ತನ್ನ ಬಳಕೆದಾರರಿಗೆ ಶಾಪ್ ಚಾಟ್ ಪ್ಲಸ್ ನ ಒಂದು ವಾರದ ಉಚಿತ ಬಳಕೆಯನ್ನು ಕೂಡ ಅನುಮತಿಸಲಿದೆ ಎನ್ನಲಾಗಿದೆ. ಶುಲ್ಕ ಪಾವತಿಯ ಆಯ್ಕೆ ಬಳಕೆದಾರರ ಪ್ಲೇ ಸ್ಟೋರ್ ಖಾತೆಯೊಂದಿಗೆ ಜೋಡಣೆಯಾಗಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಬಳಕೆದಾರರು ಚಂದಾದಾರಿಕೆಯನ್ನು ರದ್ದುಗೊಳಿಸುವವರೆಗೆ ಅದು ಪುನಃ ಪುನಃ ಸ್ವಯಂಚಾಲಿತವಾಗಿ ಸಕ್ರೀಯಗೊಳ್ಳುತ್ತಲೇ ಇರಲಿದೆ.


ಇದನ್ನೂ ಓದಿ-ಐಫೋನ್ ಫುಲ್ ಚಾರ್ಜ್ ಮಾಡಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ ಗೊತ್ತಾ?

ಸ್ನಾಪ್ ಚಾಟ್ ಪ್ಲಸ್ ನಲ್ಲಿ ಈ ವೈಶಿಷ್ಟ್ಯಗಳು ಸಿಗಲಿವೆ
ಸ್ನಾಪ್ ಚಾಟ್ ಪ್ಲಸ್ ಕುರಿತು ಮಾತನಾಡುವುದಾದರೆ, ಇದು ಬಳಕೆದಾರರಿಗೆ ಕಸ್ಟಮ್ ಸ್ನಾಪ್ ಚಾಟ್ ಐಕಾನ್ ಹಾಗೂ ಒಂದು ವಿಶೇಷ ಬ್ಯಾಜ್ ನೀಡಲಿದೆ. ಯಾವುದೇ ಓರ್ವ ಸ್ನೇಹಿತನ ಜೊತೆಗೆ ಮಾತನಾಡಲು ಬಳಕೆದಾರರಿಗೆ ಪಿಂಗ್ ಆಯ್ಕೆಯನ್ನು ಕೂಡ ನೀಡಲಾಗುವುದು ಎನ್ನಲಾಗಿದೆ. ಇದಲ್ಲದೆ ಎಷ್ಟು ಜನ ಸ್ನೇಹಿತರು ನಿಮ್ಮ ಸ್ಟೋರಿಯನ್ನು ಪದೇ ಪದೇ ವೀಕ್ಷಿಸಿದ್ದಾರೆ ಎಂಬುದರ ಮಾಹಿತಿಯನ್ನು ಕೂಡ ನೀಡಲಾಗುವುದು ಎನ್ನಲಾಗಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.