Free ಯಾಗಿ ಸಿಗುತ್ತಿದೆ YouTube Premium ನ ಒಂದು ವರ್ಷದ ಚಂದಾದಾರಿಕೆ, ಈ ರೀತಿ ಲಾಭ ಪಡೆಯಿರಿ
Free YouTube Premium Subscription: ಯುಟ್ಯೂಬ್ ಮೇಲೆ ವಿಡಿಯೋ ನೋಡಲು ನಿಮಗೂ ಕೂಡ ಇಷ್ಟವಾಗುತ್ತಿದ್ದರೆ, ಈ ಜಬರ್ದಸ್ತ್ ಕೊಡುಗೆ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಯುಟ್ಯೂಬ್ ನ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ.
Free Annual YouTube Premium Subscription Know How: ನಿಮ್ಮ ನೆಚ್ಚಿನ ವಿಡಿಯೋಗಳನ್ನು ಸ್ಟ್ರೀಮ್ ಮಾಡುವ ಹಲವಾರು ವೇದಿಕೆಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಸಹಾಯದಿಂದ ನೀವು ನಿಮ್ಮ ನೆಚ್ಚಿನ ವಿಡಿಯೋಗಳನ್ನು ವೀಕ್ಷಿಸಬಹುದು. ಈ ಆಪ್ ಗಳಲ್ಲಿ ಅತ್ಯಂತ ಜನಪ್ರೀಯ ಮತ್ತು ಹಳೆ ಸ್ಟ್ರೀಮಿಂಗ್ ವೇದಿಕೆ ಎಂದರೆ ಅದುವೇ ಯುಟ್ಯೂಬ್. ಈ ಜನಪ್ರೀಯ ವೇದಿಕೆಯ ಒಂದು ವರ್ಷದ ಚಂದಾದರಿಕೆ ನಿಮಗೆ ಉಚಿತವಾಗಿ ಸಿಗುತ್ತಿದೆ ಎಂದರೆ ಅದನ್ನು ನೀವು ಕಳೆದುಕೊಳ್ಳಲು ಬಯಸುವಿರಾ? ಈ ಪ್ರಶ್ನೆಗೆ ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ. ನಮ್ಮ ಬಳಿ ನಿಮಗಾಗಿ ಒಂದು ಜಬರ್ದಸ್ತ್ ಟ್ರಿಕ್ ಇದೆ. ಅದನ್ನು ಬಳಸಿ ನೀವು ಒಂದು ವರ್ಷದ ಯುಟ್ಯೂಬ್ ಪ್ರಿಮಿಯಂನ ಚಂದಾದರಿಕೆಯ ಲಾಭ ಪಡೆದುಕೊಳ್ಳಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
YouTube ಪ್ರೀಮಿಯಂ ಚಂದಾದಾರಿಕೆ ಎಂದರೇನು?
ಇದಕ್ಕಾಗಿ ಮೊದಲು ಯೂಟ್ಯೂಬ್ ಪ್ರೀಮಿಯಂ ಎಂದರೇನು ಮತ್ತು ಇದು ಸಾಮಾನ್ಯ ಯೂಟ್ಯೂಬ್‌ಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ನಿಮಗೆ ತಿಳಿದಿಲ್ಲದಿದ್ದರೆ, YouTube ಈ ಹೊಸ ಸೇವೆಯನ್ನು ಪ್ರಾರಂಭಿಸಿದೆ, ಇದರಲ್ಲಿ ನೀವು ಯಾವುದೇ ಜಾಹೀರಾತು ಇಲ್ಲದೆ YouTube ನ ಎಲ್ಲಾ ವೀಡಿಯೊಗಳನ್ನು ವೀಕ್ಷಿಸಬಹುದು. ಈ ಜಾಹೀರಾತು-ಮುಕ್ತ ಅನುಭವಕ್ಕಾಗಿ ಮಾತ್ರ ಜನರು ಈ ಪ್ಲ್ಯಾಟ್‌ಫಾರ್ಮ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ತೆಗೆದುಕೊಳ್ಳುತ್ತಾರೆ. ಈ ಚಂದಾದಾರಿಕೆಯನ್ನು ಒಂದು ತಿಂಗಳ ಕಾಲ ಆನಂದಿಸಲು, ನೀವು 169 ರೂ. ಪಾವತಿಸಬೇಕು. ಯೂಟ್ಯೂಬ್ ಪ್ರೀಮಿಯಂ ಎಂದರೇನು ಮತ್ತು ಅದರ ಬೆಲೆ ಎಷ್ಟು ಎಂಬುದು ನಿಮಗೆ ಇದೀಗ ಅರ್ಥವಾಗಿರಬಹುದು. ಈ ಸೇವೆಯನ್ನು ನೀವು ಉಚಿತವಾಗಿ ಹೇಗೆ ಆನಂದಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಒಂದು ವರ್ಷಕ್ಕೆ YouTube Premium ಅನ್ನು ಉಚಿತವಾಗಿ ವೀಕ್ಷಿಸಿ!
ಯೂಟ್ಯೂಬ್ ಪ್ರೀಮಿಯಂ ಎಂದರೇನು ಎಂಬುದನ್ನು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ, ಇದರ 12 ತಿಂಗಳುಗಳ ಅಂದರೆ ಒಂದು ವರ್ಷದ ಚಂದಾದಾರಿಕೆಯನ್ನು ನೀವು ಹೇಗೆ ಉಚಿತವಾಗಿ ಪಡೆಯಬಹುದು ಎಂಬುದನ್ನು ಈಗ ನಾವು ಹೇಳಿಕೊಡುತ್ತಿದ್ದೇವೆ. ಯಾವುದೇ ರೀತಿಯ ಹಣ ಪಾವತಿಸದೇ YouTube ಅನ್ನು ಜಾಹೀರಾತು-ಮುಕ್ತವಾಗಿ ಆನಂದಿಸಲು, ನೀವು ಒಂದು ಸಣ್ಣ ಕೆಲಸ ಮಾಡಬೇಕು. ನೀವು YouTube ನ ರೆಫರಲ್ ಪ್ರೋಗ್ರಾಂನ ಭಾಗವಾಗಿದ್ದರೆ, ನೀವು ಪ್ಲಾಟ್‌ಫಾರ್ಮ್‌ಗೆ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.
ಇದನ್ನೂ ಓದಿ-ಕೇವಲ 200 ರೂ.ಗೆ ಖರೀದಿಸಿ ಪೋರ್ಟಬಲ್ ಮಿನಿ ಫ್ಯಾನ್
ಈ ಕೆಲಸವನ್ನು ಹೇಗೆ ಮಾಡಬೇಕು?
ಕೇವಲ YouTube ರೆಫರಲ್ ಪ್ರೋಗ್ರಾಂನ ಭಾಗವಾಗುವುದರಿಂದ ನಿಮಗೆ ಈ ಉಚಿತ ಚಂದಾದಾರಿಕೆಯನ್ನು ಸಿಗುವುದಿಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ, ಉಚಿತ ಚಂದದಾರಿಕೆ ಪಡೆಯಲು ನೀವು ಈ ಪ್ರೋಗ್ರಾಂ ಅನ್ನು ಒಟ್ಟು 12 ಜನರಿಗೆ ರೆಫಾರ್ ಮಾಡಬೇಕು. ಇದರರ್ಥ ನಿಮ್ಮ ರೆಫರಲ್ ಕೋಡ್‌ನೊಂದಿಗೆ ಸೈನ್-ಅಪ್ ಮಾಡುವ ಪ್ರತಿಯೊಬ್ಬ ಬಳಕೆದಾರರು ನಿಮಗೆ ಒಂದು ತಿಂಗಳ ಉಚಿತ YouTube ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಾರೆ. ಈ ರೀತಿಯಾಗಿ ನಿಮ್ಮ ರೆಫರಲ್ ಕೋಡ್‌ನಲ್ಲಿ 12 ಜನರು ಸೈನ್-ಅಪ್ ಮಾಡಿದರೆ ನೀವು 12 ತಿಂಗಳವರೆಗೆ ಉಚಿತ YouTube ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬಹುದು.
ಇದನ್ನೂ ಓದಿ-ಈ ಬೆಡ್ ಶೀಟ್ ಇದ್ದರೆ AC,Cooler ಅಗತ್ಯವೇ ಇಲ್ಲ.! ಹಾಸುತ್ತಿದ್ದಂತೆಯೇ ನೀಡುತ್ತದೆ ತಂಪಾದ ಅನುಭವ
ಈ ರೆಫರಲ್ ಪ್ರೋಗ್ರಾಂ YouTube ನ iOS ಅಪ್ಲಿಕೇಶನ್‌ನಲ್ಲಿ ಲಭ್ಯವಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಈ ಕಾರ್ಯಕ್ರಮದ ಪ್ರಯೋಜನವನ್ನು ನೀವು ಮೇ 2023 ರೊಳಗೆ ಮಾತ್ರ ಪಡೆಯಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.