ಇನ್ಮುಂದೆ ಅಮೆಜಾನ್ನಲ್ಲೇ ಹುಂಡೈ ಕಾರ್ ಬುಕ್ ಮಾಡಬಹುದು
Hyundai Cars In Amazon: ಹ್ಯುಂಡೈ ಕಂಪನಿ ಹೊಸ ವರ್ಷದಿಂದ ಅಮೆಜಾನ್‌ನಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಲಿದೆ. ಬಳಿಕ ಗ್ರಾಹಕರು ಆನ್ಲೈನ್ನಲ್ಲಿಯೇ ಸುಲಭವಾಗಿ ಕಾರು ಖರೀದಿಸಬಹುದಾಗಿದೆ.
Hyundai Cars In Amazon: ಪ್ರಸಿದ್ದ ಕಾರ್ ತಯಾರಕ ಕಂಪನಿ ಹ್ಯುಂಡೈ ಹೊಸ ವರ್ಷದಿಂದ ಎಂದರೆ 2024ರಿಂದ ಅಮೆಜಾನ್‌ನಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸುವ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
ಈ ಕುರಿತಂತೆ ಮಾಹಿತಿ ಬಹಿರಂಗ ಪಡಿಸಿರುವ ಹ್ಯುಂಡೈ ಕಂಪನಿ, 2024ರಿಂದ ಕಾರು ಉತ್ಪಾದನಾ ಕಂಪನಿಯ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಕಾರನ್ನು ಖರೀದಿಸುವಂತೆಯೇ ಯುಎಸ್ಎ ಅಮೆಜಾನ್‌ನಲ್ಲಿಯೂ ಹ್ಯುಂಡೈ ಕಾರುಗಳನ್ನು ಖರೀದಿಸಬಹುದು. ಅಮೆಜಾನ್‌ನಲ್ಲಿ ಗ್ರಾಹಕರು ಯಾವ ರೀತಿ ಬೇರೆ ಉತ್ಪನ್ನಗಳನ್ನು ಖರೀದಿಸುತ್ತಾರೋ, ಅಂತೆಯೇ ಇನ್ನುಮುಂದೆ ಅಮೆಜಾನ್‌ನಲ್ಲಿ ಹುಂಡೈ ಕಾರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ವಾಹನಗಳನ್ನು ಡೀಲರ್‌ಗಳ ಸ್ಟಾಕ್‌ಯಾರ್ಡ್‌ನಿಂದ ಮಾತ್ರವೇ ಡೆಲಿವರಿ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ- ಜಿಯೋ ಬಳಕೆದಾರರಿಗೊಂದು ಗುಡ್ ನ್ಯೂಸ್, 30 ದಿನಗಳವರೆಗೆ ಉಚಿತ ಡೇಟಾ, ಕಾಲಿಂಗ್ ಹಾಗೂ ಓಟಿಟಿ ಲಾಭ!
ಗಮನಾರ್ಹವಾಗಿ, ಅಮೇರಿಕನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ (ಅಮೆಜಾನ್) ಮತ್ತು ದಕ್ಷಿಣ ಕೊರಿಯಾದ ಕಾರು ತಯಾರಕ ಹ್ಯುಂಡೈ ನಡುವಿನ ಪಾಲುದಾರಿಕೆಯ ಭಾಗವಾಗಿ ಅಮೆಜಾನ್‌ನಲ್ಲಿ ಹುಂಡೈ ಕಾರುಗಳ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಚಳಿಗಾಲದಲ್ಲಿ ಮನೆಯಲ್ಲಿ ಇರಲೇಬೇಕು ಈ 5 ಗ್ಯಾಜೆಟ್‌ಗಳು
ಇ-ಕಾಮರ್ಸ್ ಪ್ಲಾಟ್‌ಫಾರ್ಮ್ (ಅಮೆಜಾನ್) ಮತ್ತು ಹ್ಯುಂಡೈ ನಡುವಿನ ಪಾಲುದಾರಿಕೆ ಅಡಿಯಲ್ಲಿ ಹ್ಯುಂಡೈ ಕಾರುಗಳಲ್ಲಿ ಅಮೆಜಾನ್‌ನ ಅಲೆಕ್ಸಾ ಎಐ ಸಹಾಯಕವನ್ನು ಸ್ಥಾಪಿಸಲಾಗುವುದು ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗತ್ತಿನ ಪ್ರಸಿದ್ದ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಇತರ ಕಾರು ತಯಾರಕರು ಕೂಡ ಶೀಘ್ರದಲ್ಲೇ ತಮ್ಮ ಕಾರುಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲು ಮುಂದೆ ಬರುತ್ತಾರೆ ಎಂದು ಹೇಳಿಕೊಂಡಿದೆ. ಆದರೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ರಾಂಡ್ ಹೆಸರುಗಳನ್ನು ಹೇಳಿಲ್ಲ.
ಇನ್ನೊಂದು ಮುಖ್ಯವಾದ ವಿಷಯವೆಂದರೆ, ಈ ಮಾರುಕಟ್ಟೆ ಯುಎಸ್ಗೆ ಮಾತ್ರ ಸೀಮಿತವಾಗಿರಲಿದೆಯೇ ಅಥವಾ ಭವಿಷ್ಯದಲ್ಲಿ ಬೇರೆ ದೇಶಗಳಲ್ಲಿಯೂ ಈ ಸೌಲಭ್ಯ ಲಭ್ಯವಾಗಲಿದೆಯೇ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.