ಬೆಂಗಳೂರು : ನೀವು Android ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ಈ ಸುದ್ದಿಯನ್ನು ಗಮನವಿಟ್ಟು ಓದಿ. ಕೆಲವು ಸ್ಮಾರ್ಟ್‌ಫೋನ್‌ಗಳಿಗೆ Android ಬೆಂಬಲವನ್ನು ನಿಲ್ಲಿಸಲು Google ನಿರ್ಧರಿಸಿದೆ. Google ಸಪೋರ್ಟ್ ಮಾಡದೇ ಹೋದರೆ  ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ .  ನಿಮ್ಮ ಡೇಟಾದ ಸುರಕ್ಷತೆಯು ಸಹ  ಅಪಾಯಕ್ಕೆ ಸಿಲುಕಬಹುದು. ಹಾಗಿದ್ದರೆ ಯಾವ ಫೋನ್ ಗಳಲ್ಲಿ ಇನ್ನು ಮುಂದೆ ಗೂಗಲ್ ಕಾರ್ಯ ನಿರ್ವಹಿಸುವುದಿಲ್ಲ ಎನ್ನುವ ಪ್ರಶ್ನೆ ಏಳುತ್ತದೆ.  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಗುಜುರಿ ಸೇರುವುದು  ಈ ಸ್ಮಾರ್ಟ್ ಫೋನ್ ಗಳು  : 
ಕಿಟ್‌ಕ್ಯಾಟ್ ಆಂಡ್ರಾಯ್ಡ್ ಆವೃತ್ತಿಯನ್ನು 2013 ರಲ್ಲಿ ಪ್ರಾರಂಭಿಸಲಾಯಿತು. ಇದರರ್ಥ ನಿಮ್ಮ ಸ್ಮಾರ್ಟ್‌ಫೋನ್ ಕಿಟ್‌ಕ್ಯಾಟ್ ಅಥವಾ ಹಿಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ್ದರೆ, ಗೂಗಲ್ ತನ್ನ ಬೆಂಬಲವನ್ನು ಸ್ಥಗಿತಗೊಳಿಸುತ್ತಿದೆ. ಸರಳವಾಗಿ ಹೇಳುವುದಾದರೆ, ಸುಮಾರು 10 ವರ್ಷಗಳಷ್ಟು ಹಳೆಯದಾದ ಸ್ಮಾರ್ಟ್ಫೋನ್ ಗಳಲ್ಲಿ ಗೂಗಲ್ ಸಿಸ್ಟಮ್ ಕಾರ್ಯನಿರ್ವಹಿಸುವುದಿಲ್ಲ. ವರದಿಗಳ ಪ್ರಕಾರ, ಆಗಸ್ಟ್ 1 ರಿಂದ ಈ ಫೋನ್ ಗಳಲ್ಲಿ ದೇಶಾದ್ಯಂತ Google ನ ಬೆಂಬಲವನ್ನು ಸ್ಥಗಿತಗೊಳಿಸಬಹುದು.


ಇದನ್ನೂ ಓದಿ : Phone Charging Tips: ರಾತ್ರಿಯಿಡೀ ಫೋನ್ ಚಾರ್ಜಿಂಗ್ ಮಾಡುವುದು ಎಷ್ಟು ಸರಿ?


ಯಾರ ಮೇಲೆ ಪರಿಣಾಮ : 
ವರದಿಗಳಲ್ಲಿ ತೋರಿಸಿರುವಂತೆ, ಪ್ರಸ್ತುತ ಕೇವಲ 1% Android ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು  KitKat Android ವ್ಯವಸ್ಥೆಯನ್ನು ಆಧರಿಸಿವೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ Google Play ಸೇವೆಯನ್ನು ಬೆಂಬಲಿಸುವುದಿಲ್ಲ.


ಸುರಕ್ಷಿತವಾಗಿರುವುದಿಲ್ಲ ಈ ಫೋನ್ ಬಳಕೆ : 
Google Play ಬೆಂಬಲ ನಿಂತಾಗ, ಆಪರೇಟಿಂಗ್ ಸಿಸ್ಟಮ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದರರ್ಥ ನೀವು ಅದನ್ನು ಬಳಸಿದ ಕ್ಷಣದಿಂದ ನಿಮ್ಮ ಫೋನ್ ಸುರಕ್ಷಿತವಾಗಿರುವುದಿಲ್ಲ. ಬಳಕೆಯ ವಿಷಯಕ್ಕೆ ಬಂದರೆ ಈ ಫೋನ್  ಯಾವುದೇ ಕಾರಣಕ್ಕೂ ಸುರಕ್ಷಿತವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಬದಲಾಯಿಸುವುದು ಒಂದೇ ನಿಮ್ಮ ಮುಂದೆ ಇರುವ ಆಯ್ಕೆಯಾಗಿದೆ.


ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಗಳಲ್ಲಿ ಜನ ಹೆಚ್ಚಾಗಿ ಏನ್ ವೀಕ್ಷಿಸ್ತಾರಂತೆ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.